ಬಾಲಿವುಡ್​ ನಟ ಗೋವಿಂದಾ ಪತ್ನಿ ಸುನೀತಾ ಅಹುಜಾ, ಮಗ ಯಶ್​ವರ್ಧನ್ ಮತ್ತು ಮಗಳು ಟೀನಾ  
ಬಾಲಿವುಡ್

ಇದು ನನ್ನ ವಿರುದ್ಧ ನಡೆಯುತ್ತಿರುವ ಪಿತೂರಿ: ಅನೈತಿಕ ಸಂಬಂಧದ ಕುರಿತು ಕೊನೆಗೂ ಮೌನ ಮುರಿದ ಗೋವಿಂದ | Govinda

ಪ್ರಮುಖ ಮುಖ್ಯಾಂಶಗಳು

  • ಬಾಲಿವುಡ್​ ನಟ ಗೋವಿಂದಾ ಅನೈತಿಕ ಸಂಬಂಧವನ್ನು ಹೊಂದಿರುವ ವದಂತಿ
  • ಇದು ನನ್ನ ಮೇಲೆ ನಡೆಸಲಾಗುತ್ತಿರುವ ಪಿತೂರಿ ಎಂದ ನಟ
  • ನನ್ನ ಕುಟುಂಬಕ್ಕೆ ಈ ಪಿತೂರಿಯ ಬಗ್ಗೆ ಯಾವುದೇ ಅರಿವಿಲ್ಲ
ಮುಂಬೈ: ಕಳೆದೊಂದು ವರ್ಷದಿಂದ ಬಾಲಿವುಡ್​ ಖ್ಯಾತ ನಟ ಗೋವಿಂದಾ (Govinda) ಮತ್ತು ಅವರ ಪತ್ನಿ ಸುನೀತಾ ಅಹುಜಾ ಅವರ ದಾಂಪತ್ಯದ ಕುರಿತು ದಿನಕ್ಕೊಂದು ವರದಿಗಳು ಹೊರಬೀಳುತ್ತಿದ್ದವು.
ಖಾಸಗಿ ಪಾಡ್​ಕಾಸ್ಟ್​ಗಳಲ್ಲಿ ಭಾಗವಹಿಸಿದಾಗ ಸುನೀತಾ ಅಹುಜಾ, ಗೋವಿಂದಾ ಅವರ ಅನೈತಕ ಸಂಬಂಧಗಳ ಕುರಿತು ಕೋಪ, ಹತಾಶೆ ಮತ್ತು ಕಣ್ಣೀರನ್ನು ಸಹ ಸುರಿಸಿದ್ದರು. ಆದರೆ ಇಲ್ಲಿಯವರೆಗೆ ಈ ವಿಷಯದ ಬಗ್ಗೆ ನಟ ಗೋವಿಂದಾ ಒಂದು ಶಬ್ದವನ್ನು ಸಹ ಮಾತಾಡಿರಲಿಲ್ಲ. ಆದರೆ ಈಗ ಗೋವಿಂದ ತನ್ನ ದಾಂಪತ್ಯದ ವಿಷಯದ ಕುರಿತು ಕೊನೆಗೂ ಮೌನವನ್ನು ಮುರಿದ್ದಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಷಯದ ಬಗ್ಗೆ ಮೊದಲ ಬಾರಿಗೆ ಬಹಿರಂಗವಾಗಿ ಮಾತನಾಡಿರುವ ಗೋವಿಂದಾ, ನಾನು ಇಷ್ಟು ದಿನ ಈ ವಿಷಯವನ್ನು ಸಾರ್ವಜನಿಕವಾಗಿ ಚರ್ಚಿಸಬಾರದು ಎಂದು ನಿರ್ಧರಿಸಿದ್ದೆ. ಆದರೆ ನನ್ನ ಈ ಮೌನವನ್ನೇ ಜನ ನನ್ನ ದೌರ್ಬಲ್ಯ ಎಂದು ಭಾವಿಸಿದ್ದಾರೆ ಎಂದು ನನಗೆ ಮನವರಿಕೆಯಾಗಿದೆ. ತೆರೆಮರೆಯಲ್ಲಿ ಏನು ಕುತಂತ್ರ ನಡೆಯುತ್ತಿದೆ ಎಂದು ನನಗೆ ಅರಿವಿದೆ. ಇದರ ಕುರಿತು ನನ್ನ ಪ್ರೀತಿ ಪಾತ್ರರಿಗೂ ಇದರ ಬಗ್ಗೆ ಅರಿವಿಲ್ಲ. ಇದು ನನ್ನ ವಿರುದ್ಧ ನಡೆಯುತ್ತಿರುವ ದೊಡ್ಡ ಪಿತೂರಿ ಎಂದು ಗೋವಿಂದಾ ಹೇಳಿದ್ದಾರೆ.
ಈ ಪಿತೂರಿಯಲ್ಲಿ ನನ್ನ ಹೆಂಡತಿ ಸುನೀತಾ ಅಹುಜಾ ಅವಳ ಅರಿಲಿಲ್ಲದೆ ಇದರ ಭಾಗವಾಗಿದ್ದಾಳೆ. ಅವಳಿಗೆ ನನ್ನ ಮೇಲೆ ತುಂಬಾ ಪ್ರೀತಿಯಿದೆ. ನನಗೂ ಅವಳ ಮೇಲೆ ಅಷ್ಟೇ ಪ್ರೀತಿಯಿದೆ. ಆದರೆ ಈ ಪಿತೂರಿ, ಕುತಂತ್ರಗಳ ಅರಿವಿಲ್ಲದ ಆಕೆ ಇದರ ಜಾಲದಲ್ಲಿ ಸಿಲುಕಿ ಕೊಂಡಿದ್ದಾರೆ ಎಂದರು.
ನಾನು ಹಲವು ವರ್ಷಗಳಿಂದ ಸಿನಿಮಾದಿಂದ ದೂರ ಉಳಿದ್ದಿದ್ದೆನೆ. ನನ್ನ ಚಿತ್ರಗಳಿಗೆ ಈಗ ಮಾರುಕಟ್ಟೆ ಇಲ್ಲ, ಆದ್ದರಿಂದ ನಾನೇ ಅನೇಕ ಸಿನಿಮಾಗಳನ್ನು ತಿರಸ್ಕರಿಸಿದ್ದೇನೆ ಎಂದರು. ಸುನೀತಾಗೆ ನಾನು ಈಗಲೂ ಸಿನಿಮಾದಲ್ಲಿ ನಟಿಸಬೇಕು. ಹಿರೋವಾಗಿ ಮಿಂಚಬೇಕು ಎಂಬ ಆಸೆಯಿದೆ, ಆದ್ದರಿಂದ ಅವಳಿಗೆ ನಾನು ಸಿನಿಮಾಗಲನ್ನು ತಿರಸ್ಕರಿಸುವುದು ಬೇಸರವನ್ನು ಉಂಟುಮಾಡಿದೆ ಎಂದರು.
ಯಾರಾದರೂ ಅತ್ಯಂತ ಜನಪ್ರಿಯರಾದಾಗ, ಕೆಲವು ಜನರು ಅವರ ಖ್ಯಾತಿಯನ್ನು ನಾಶಪಡಿಸಲು ಪ್ರಯತ್ನಿಸುತ್ತಾರೆ ಎಂದ ಗೋವಿಂದಾ ನನ್ನ ಮೇಲೆ ಸಹ ನನಗೆ ಇಷ್ಟವಿಲ್ಲ ಎಂದರೂ ಸಹ ಸಿನಿಮಾ ರಂಗದಲ್ಲಿ ಸಕ್ರೀಯವಾಗಿ ಇರುವಂತೆ ಹಿಂಸೆ ನೀಡಲಾಗುತ್ತಿದೆ. ಇದಕ್ಕಾಗಿ ನನ್ನ ಕುಟುಂಬ ವರ್ಗವನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಪ್ರಸ್ತುತ ನನ್ನ ಜೀವನ ನನಗೆ ಉಸಿರುಗಟ್ಟಿಸದಂತೆ ಭಾಸವಾಗುತ್ತಿದೆ. ನನ್ನ ಮೇಲಿನ ತಪ್ಪು ಗ್ರಹಿಕೆಯನ್ನು ಬಹಳ ಬೇಗ ತೆಗೆದುಹಾಕುವಂತೆ ದೇವರಲ್ಲಿ ಪ್ರಾರ್ಥಿಸುತ್ತಿದ್ದೇನೆ ಎಂದು ಹೇಳಿದರು. ಈ ಸಮಸ್ಯೆಯಿಂದ ನಾನು ಆದಷ್ಟು ಬೇಗ ಪಾರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಹಾಗೆಯೇ ನನ್ನ ಮಕ್ಕಳಿಗೆ ನನ್ನ ಬಗ್ಗೆ ಯಾವುದೇ ತಪ್ಪು ಕಲ್ಪನೆಗಳು ಇರಬಾರದು. ಅವರ ಭವಿಷ್ಯವು ಉಜ್ವಲವಾಗಿರಲಿ ಎಂದು ಬಯಸುವ ಜೀವ ನನ್ನದು ಎಂದು ಹೇಳಿದ್ದಾರೆ.
1987 ರಲ್ಲಿ ಗೋವಿಂದಾ ಮತ್ತು ಸುನೀತಾ ಅವರ ವಿವಾಹವಾಗಿದ್ದು, ಈ ದಂಪತಿಗಳಿಗೆ ಟೀನಾ ಮತ್ತು ಯಶವರ್ಧನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಟೀನಾ 2015 ರಲ್ಲಿ ಸೆಕೆಂಡ್ ಹ್ಯಾಂಡ್ ಹಸ್ಬೆಂಡ್ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರೆ, ಯಶವರ್ಧನ್ ಶೀಘ್ರದಲ್ಲೇ ತಮ್ಮ ಚೊಚ್ಚಲ ಪ್ರವೇಶಕ್ಕೆ ತಯಾರಿ ನಡೆಸುತ್ತಿದ್ದಾರೆ,(ಏಜನ್ಸೀಸ್).