ಟಿಕೆಟ್ ಲುಕ್‌ನಲ್ಲಿ ರಾಕಿಂಗ್ ಸ್ಟಾರ್ ಯಶ್
- ಯಶ್ ಬಹು ನೀರಿಕ್ಷಿತ ಸಿನಿಮಾ ಟಾಕ್ಸಿಕ್
- ಟಿಕೆಟ್ ಲುಕ್‌ನಲ್ಲಿ ರಾಕಿಂಗ್ ಸ್ಟಾರ್ ಫುಲ್ ಮಿಂಚಿಂಗ್
- ಮಾರ್ಚ್ 19 ರಂದು ಬಿಡುಗಡೆಯಾಗಲಿರುವ ಟಾಕ್ಸಿಕ್
ಬೆಂಗಳೂರು: ಕೆಜಿಎಫ್ ಸರಣಿಯ ಯಶಸ್ಸಿನ ನಂತರ ಇಡೀ ದೇಶದಲ್ಲಿ ಕೇಳುತ್ತಿದ್ದ ಏಕೈಕ ಹೆಸರು ರಾಕಿಂಗ್ ಸ್ಟಾರ್ ಯಶ್ (Rocking Star Yash). ಕೆಜಿಎಫ್-2 ಮುಗಿದು ಲಾಂಗ್ ಗ್ಯಾಪ್ ತಗೊಂಡಿದ್ದ ಯಶ್, ಈಗ ಟಾಕ್ಸಿಕ್ (Toxic) ಎಂಬ ಇಂಟರ್ನ್ಯಾಷನಲ್ ಲೆವೆಲ್ ಕಥೆಯೊಂದಿಗೆ ಮರಳುತ್ತಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಯಶ್ ಅವರ ಹೊಸ ಲುಕ್, ಒಂದಷ್ಟು ಫೋಟೋಗಳು ವೈರಲ್ ಆಗುತ್ತಿದ್ದು, ರಾಕಿ ಭಾಯ್ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.
ರಾಕಿ ಭಾಯ್ ನಹಿ ಟಿಕೆಟ್ ಬೋಲೊ
ಇಷ್ಟು ದಿನ ಗಡ್ಡ ಬಿಟ್ಟು, ಉದ್ದ ಕೂದಲು ಹಾರಿಸುತ್ತಾ ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದ ಯಶ್, ಟಾಕ್ಸಿಕ್ ಚಿತ್ರಕ್ಕಾಗಿ ಸಖತ್ ಸ್ಟೈಲಿಶ್ ಆಗಿ ಮೇಕ್ ಓವರ್ ಆಗಿದ್ದಾರೆ. ಗೀತು ಮೋಹನ್ ದಾಸ್ ನಿರ್ದೇಶನದ ಈ ಚಿತ್ರಕ್ಕಾಗಿ ಯಶ್ ಶಾರ್ಟ್ ಹೇರ್ ಸ್ಟೈಲ್ ಮತ್ತು ಟ್ರಿಮ್ ಮಾಡಿದ ಗಡ್ಡದೊಂದಿಗೆ ಕಾಣಿಸಿಕೊಂಡಿದ್ದಾರೆ. ಈ ಲುಕ್ ನೋಡಿದ್ರೆ ಇದು ಕೇವಲ ಮಾಸ್ ಸಿನಿಮಾ ಮಾತ್ರವಲ್ಲ, ಒಂದು ಹೈ-ಕ್ಲಾಸ್ ಆಕ್ಷನ್ ಥ್ರಿಲ್ಲರ್ ಎಂಬುದು ಪಕ್ಕಾ ಆಗಿದೆ.
ಅಭಿಮಾನಿಗಳಂತೂ ನಮ್ಮ ರಾಕಿ ಭಾಯ್ ಈಗ ಕಂಪ್ಲೀಟ್ ಹಾಲಿವುಡ್ ಸ್ಟಾರ್ ತರ ಕಾಣಿಸ್ತಿದ್ದಾರೆ, ಎಂದು ಕಮೆಂಟ್ ಬಾಕ್ಸ್‌ನಲ್ಲಿ ಹಾರ್ಟ್ ಎಮೋಜಿಗಳ ಸುರಿಮಳೆ ಹರಿಸುತ್ತಿದ್ದಾರೆ. ಇತ್ತ ಉತ್ತರ ಭಾರತದ ಅಭಿಮಾನಿಗಳು ರಾಕಿ ಭಾಯ್ ನಹಿ ಟಿಕೆಟ್ ಬೋಲೊ ಎಂದು ಟಾಕ್ಸಿಕ್ ಸಿನಿಮಾದ ಯಶ್ ಅವರ ಪಾತ್ರವನ್ನು ಬಿಡುಗಡೆಗೆ ಮುನ್ನವೆ ಟ್ರೆಂಡ್ ಮಾಡುತ್ತಿದ್ದಾರೆ.
ಯಾಕೆ ಈ ಲುಕ್ ಇಷ್ಟೊಂದು ಸೌಂಡ್ ಮಾಡ್ತಿದೆ?
ಯಶ್ ಯಾವುದೇ ಸಿನಿಮಾ ಮಾಡಿದರೂ ಅದರ ಪ್ರತಿಯೊಂದು ವಿಚಾರದಲ್ಲೂ ತುಂಬಾ ಪರ್ಫೆಕ್ಟ್ ಆಗಿ ಇರುತ್ತಾರೆ. ಟಾಕ್ಸಿಕ್ ಚಿತ್ರವು ಗೋವಾದ ಡ್ರಗ್ ಮಾಫಿಯಾ ಅಥವಾ ಅಂಡರ್ ವರ್ಲ್ಡ್ ಕಥೆಯನ್ನು ಹೊಂದಿರಬಹುದು ಎಂಬ ಗುಸುಗುಸು ಗಾಂಧಿನಗರದಲ್ಲಿ ಕೇಳಿಬರುತ್ತಿದೆ.
ಅದಕ್ಕೆ ತಕ್ಕಂತೆ ಯಶ್ ಅವರ ಡ್ರೆಸ್ಸಿಂಗ್ ಸೆನ್ಸ್ ಮತ್ತು ಆ ಕಣ್ಣಿನ ತೀಕ್ಷ್ಣತೆ ಚಿತ್ರದ ಮೇಲಿನ ನಿರೀಕ್ಷೆಯನ್ನು ಡಬಲ್ ಮಾಡಿದೆ. ಈ ಚಿತ್ರಕ್ಕಾಗಿ ಯಶ್ ವಿದೇಶಿ ತರಬೇತುದಾರರಿಂದ ಬಾಡಿ ಬಿಲ್ಡಿಂಗ್ ಮತ್ತು ಫೈಟ್ ಟ್ರೇನಿಂಗ್ ತೆಗೊಂಡಿದ್ದಾರೆ ಎನ್ನಲಾಗುತ್ತಿದೆ.
ದೊಡ್ಡ ತಾರಾಗಣ, ಬಿಗ್ ಬಜೆಟ್!
ಟಾಕ್ಸಿಕ್ ಕೇವಲ ಯಶ್ ಚಿತ್ರವಲ್ಲ, ಇದು ಪ್ಯಾನ್ ಇಂಡಿಯಾ ದಾಟಿ ಪ್ಯಾನ್ ವರ್ಲ್ಡ್ ಮಟ್ಟಕ್ಕೆ ಪ್ಲಾನ್ ಮಾಡಲಾಗುತ್ತಿದೆ. ಚಿತ್ರದಲ್ಲಿ ನಾಯಕಿಯರಾಗಿ ಕರೀನಾ ಕಪೂರ್ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಇತ್ತು. ಆದರೆ ಈಗ ಕಿಯಾರಾ ಅಡ್ವಾಣಿ ಹೆಸರು ಪಿಕ್ಸ್ಆಗಿದೆ.
ಇವರ ಜತೆಗೆ ಕಾಂತಾರಾ ಖ್ಯಾತಿಯ ಕನ್ನಡತಿ ರುಕ್ಮಿಣಿ ವಸಂತ್, ಬಾಲಿವುಡ್ನಟಿ ಹುಮಾ ಖುರೇಶಿ, ತಾರಾ ಸುತಾರೀಯಾ ಮತ್ತು ಲೇಡಿ ಸೂಪರ್ಸ್ಟಾರ್ ಖ್ಯಾತಿಯ ನಯನತಾರಾ ಈ ಸಿನಿಮಾದಲ್ಲಿ ನಟಿಸಲಿದ್ದಾರೆ. ಯಶ್ ಅವರ ಈ ಹೊಸ ಲುಕ್‌ನ ಹಿಂದೆ ಚಿತ್ರತಂಡ ದೊಡ್ಡ ಸಸ್ಪೆನ್ಸ್ ಇಟ್ಟಿದ್ದು, ಶೂಟಿಂಗ್ ಹಂತದಲ್ಲಿರುವ ಈ ಚಿತ್ರದ ಒಂದೊಂದು ಅಪ್‌ಡೇಟ್ ಕೂಡ ಟ್ರೆಂಡ್ ಸೃಷ್ಟಿಸುತ್ತಿದೆ.
ಮಾರ್ಚ್ 19 ಕ್ಕೆ ತೆರೆ ಮೇಲೆ ಟಾಕ್ಸಿಕ್
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾವು ಮಾರ್ಚ್ 19 ರಂದು ತೆರೆಕಾಣಲಿದ್ದು, ಅದೇ ದಿನ ಭಾರತದ ಬಹು ನೀರಿಕ್ಷಿತ ಸಿನಿಮಾ ಧುರಂಧರ್ 2 ಕೂಡ ಬಿಡುಗಡೆಯಾಗಲಿದೆ. ಈ ಎರಡೂ ಸಿನಿಮಾಗಳು ಒಂದೇ ದಿನ ತೆರೆ ಕಾಣಲಿದ್ದು ಇದು ಎರಡು ಕೊಬ್ಬಿದ ಮದಗಜಗಳ ಕಾಳಗವಾಗುವುದರಲ್ಲಿ ಆಶ್ಚರ್ಯವಿಲ್ಲ ಎನ್ನುವುದು ಸಿನಿಮಾ ವಿಶ್ಲೇಷಕರ ಅಭಿಪ್ರಾಯವಾಗಿದೆ.
ಅಭಿಮಾನಿಗಳ ಹಬ್ಬ ಶುರು!
ಯಶ್ ಫೋಟೋ ವೈರಲ್ ಆಗುತ್ತಿದ್ದಂತೆ ಟ್ವಿಟ್ಟರ್ (X) ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ #Toxic #Yash19 #RockingStarYash ಹ್ಯಾಶ್‌ಟ್ಯಾಗ್‌ಗಳು ಸಖತ್ ಸೌಂಡ್ ಮಾಡುತ್ತಿವೆ. ಸುಮಾರು ನಾಲ್ಕು ವರ್ಷಗಳ ಕಾಯುವಿಕೆಯ ನಂತರ ತಮ್ಮ ನೆಚ್ಚಿನ ನಟನನ್ನು ಹೊಸ ರೂಪದಲ್ಲಿ ನೋಡುತ್ತಿರುವ ಅಭಿಮಾನಿಗಳು, ಚಿತ್ರಮಂದಿರದಲ್ಲಿ ಟಾಕ್ಸಿಕ್ ಹವಾ ಹೇಗಿರಬಹುದು ಎಂದು ಈಗಲೇ ಲೆಕ್ಕಾಚಾರ ಹಾಕುತ್ತಿದ್ದಾರೆ.
ಒಟ್ಟಿನಲ್ಲಿ, ಯಶ್ ಅವರ ಈ ಟಾಕ್ಸಿಕ್ ಲುಕ್ ಕೇವಲ ಸಿನಿಮಾ ಪ್ರಚಾರದ ಭಾಗವಲ್ಲ, ಇದು ಇಂಡಿಯನ್ ಸಿನಿಮಾದಲ್ಲಿ ಯಶ್ ಮತ್ತೊಂದು ಹೊಸ ಮೈಲಿಗಲ್ಲು ಸ್ಥಾಪಿಸುವುದಕ್ಕೆ ಮುನ್ನುಡಿ ಎನ್ನಬಹುದು. ಬಾಸ್ ಈಸ್ ಬ್ಯಾಕ್ ಅಂದ ಮೇಲೆ ಬಾಕ್ಸ್ ಆಫೀಸ್ ಧೂಳಿಪಟ ಆಗೋದ್ರಲ್ಲಿ ಡೌಟೇ ಇಲ್ಲ ಎನ್ನುವುದು ಅಭಿಮಾನಿಗಳ ಅಭಿಮತವಾಗಿದೆ,(ಏಜನ್ಸೀಸ್).