- ಈ ಸಿನಿಮಾ ಒಂದು ಪ್ರೊಪಗಾಂಡಾ ಎಂದವರಿಗೆ ಆದಿತ್ಯ ಧರ್ ಖಡಕ್ ಎಚ್ಚರಿಕೆ
- 1000 ಕ್ಲಬ್ ಹೊಸ್ತಿಲಲ್ಲಿರುವ ಧುರಂಧರ್
- ಹೆಸರನ್ನು ಹೇಳದೆ ಪರೋಕ್ಷವಾಗಿ ಧ್ರವ್ ರಾಟೀಗೆ ತಿರುಗೇಟು ನೀಡಿದ ಆದಿತ್ಯ ಧರ್
ಬಾಲಿವುಡ್: ಧುರಂಧರ್ ಈ ಸಿನಿಮಾ ಬಿಡುಗಡೆಯಾದ ದಿನದಿಂದ ಸದಾ ಸುದ್ದಿಯಲ್ಲಿರುವ ಸಿನಿಮಾವಾಗಿ ಗುರುತಿಸಿಕೊಂಡಿತು. ಈಗಾಗಲೇ ಬಾಕ್ಸ್ ಆಫೀಸಿನಲ್ಲಿ 900 ಕೋಟಿ ಗಳಿಕೆ ಮಾಡಿ 1000 ಕೋಟಿ ಕ್ಲಬ್ ಸೇರುವ ನೀರಿಕ್ಷೆಯಲ್ಲಿರುವ ಸಿನಿಮಾ ಎಂದರೆ ಅದು ಧುರಂಧರ್ ಆಗಿದೆ.
ಈ ಸಿನಿಮಾವನ್ನು ಬೆಂಬಲಿಸಿ ಸಿನಿಮಾ ಹಿಟ್ ಆಗುವಲ್ಲಿ ಈ ಚಿತ್ರವನ್ನು ಬೆಂಬಲಿಸಿದವರಿಕ್ಕಿಂತ ಈ ಚಿತ್ರವನ್ನು ಟೀಕೆಮಾಡಿ ಈ ಸಿನಿಮಾ ಕೇವಲ ಒಂದು ಪ್ರೊಪಗಾಂಡಾ ಅಷ್ಟೇ ಎಂದು ಹೇಳಿದ ವಿರೋಧಿಗಳ ಕ್ರಪೆಯಿಂದ ಮತ್ತಷ್ಟು ಜನ ಈ ಸಿನಿಮಾ ನೋಡಲು ಹೋದರು ಎಂದರೆ ತಪ್ಪಾಗದು.
ಈ ಸಿನಿಮಾವನ್ನು ಹೇಗಾದರೂ ಮಾಡಿ ಸೋಲಿಸಲೇ ಬೇಕು ಎನ್ನುವ ಪ್ರಯತ್ನ ಸಾಕಷ್ಟು ನಡೆಯಿತು. ಈ ಸಿನಿಮಾದ ನಾಯಕ ನಟ ರಣವೀರ್ ಸಿಂಗ್ ಕಾಂತಾರದ ದೈವಕ್ಕೆ ಅಪಮಾನ ಮಾಡಿದ್ದಾನೆ ಈ ಚಿತ್ರವನ್ನು ದಕ್ಷಿಣ ಭಾರತದಲ್ಲಿ ಬ್ಯಾನ್ ಮಾಡಿ, ಈ ಸಿನಿಮಾದಲ್ಲಿ ಮಿತಿ ಮೀರಿದ ಹಿಂಸೆಯಿದೆ ಯಾರು ಈ ಸಿನಿಮಾವನ್ನು ನೋಡಬೇಡಿ, ಬೇಕಂತಲೇ ಒಂದು ಸಮುದಾಯವನ್ನು ಗುರಿಮಾಡಿ ಸಿನಿಮಾವನ್ನು ರೂಪಿಸಿದ್ದಾರೆ ಹೀಗೆ ನಾನಾ ರೀತಿಯ ಪ್ರಯತ್ನಗಳು ನಡೆದವು. ಆದರೆ ಈ ಯಾವುದೇ ಮಾತುಗಳನ್ನು ತಲೆಗೆ ಹಾಕಿಕೊಳ್ಳದ ಜನ ಸಿನಿಮಾವನ್ನು ನೋಡಿ ಇದು ಭಾರತೀಯ ಚಿತ್ರರಂಗಕ್ಕೆ ಮೈಲಿಗಲ್ಲಾದ ಸಿನಿಮಾ ಎಂದು ಘೋಷಿಸಿ ಬಿಟ್ಟರು.
ಇಷ್ಟೆಲ್ಲಾ ವಿರೋಧಗಳು ಕೇಳಿಬುತ್ತಿದ್ದರೂ ಸಹ ಸಿನಿಮಾದ ನಿರ್ದೇಶಕ ಆದಿತ್ಯ ಧರ್ ಏಕೆ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ? ಎಂದು ಪ್ರೇಕ್ಷಕರು ಕೇಳುತ್ತಲೇ ಇದ್ದರು. ಇದಕ್ಕೆಲ್ಲಾ ಉತ್ತರವಾಗಿ ಈಗ ಆದಿತ್ಯ ಧರ್ ಇನ್ಸ್ಟಾಗ್ರಾಮ್ನಲ್ಲಿ ಸ್ಟೋರಿ ಒಂದನ್ನು ಪೋಸ್ಟ್ ಮಾಡಿ ಸಿನಿಮಾದ ವಿರೋಧಿಗಳು ಮುಟ್ಟಿ ನೋಡಿಕೊಳ್ಳುವಂತೆ ಉತ್ತರಿಸಿದ್ದಾರೆ.
ಭಾರತೀಯ ಚಿತ್ರರಂಗದಲ್ಲಿ ಇತಿಹಾಸವನ್ನು ಪುನಃ ಬರೆಯಲಾಗಿದೆ. ದೇಶದ ಕುರಿತು ಎದೆಯಲ್ಲಿ ಬೆಂಕಿ ಮತ್ತು ಪ್ರೀತಿ ಹೊಂದಿರುವವರು ಸಿನಿಮಾವನ್ನು ಗೆಲ್ಲಿಸಿದ್ದಾರೆ. ಬಿಡುಗಡೆಯಾದ ವಾರದಲ್ಲಿ ಸಿನಿಮಾ ತಂಡದವರೇ ಟಿಕೆಟ್ಗಳನ್ನು ಖರೀದಿ ಮಾಡಿದ್ದಾರೆ ಎಂದರು ನಂತರ ದಿನದಿಂದ ದಿನ ಚಿತ್ರಮಂದಿರಗಳು ಹೌಸ್ಫುಲ್ ಆದ ನಂತರ ಅವರೆಲ್ಲಾ ಇದ್ದಕ್ಕಿದ್ದಂತೆ ಮೌನವಾದರು. ಇತ್ತೀಚೆಗೆ, ಯುಟ್ಯೂಬ್ರ್ ಒಬ್ಬ ಧುರಂಧರ್ ಚಿತ್ರವನ್ನು ಟೀಕಿಸಲು ಪ್ರಯತ್ನಿಸಿ ಅವರೇ ಟೀಕೆಯ ಅಲೆಗೆ ಸಿಲುಕಿ ಸೋತುಹೋದರು ಎಂದು ಬರೆದುಕೊಂಡಿದ್ದಾರೆ.
ಧ್ರುವ್ ರಾಟೀ ಧುರಂಧರ್ ಬಗ್ಗೆ ಒಂದು ವೀಡಿಯೊ ಮಾಡಿದ್ದು, ಈ ಚಿತ್ರ ಕೇವಲ ಒಂದು ಪ್ರೊಪಗಾಂಡಾ ಎಂದು ತಮ್ಮ ವಿಡಿಯೋದಲ್ಲಿ ಹೇಳಿದ್ದರು. ಈ ಚಿತ್ರ ಕಾಲ್ಪನಿಕ ಕತೆ ಎಂದು ಹೇಳುತ್ತದೆ ಆದರೆ ನೈಜ ಘಟನೆಗಳ ಫೋಟೋಗಳು ಮತ್ತು ವೀಡಿಯೊಗಳನ್ನು ಬಳಸಿಕೊಂಡಿದೆ ಎಂದು ಧ್ರುವ್ ಹೇಳಿದ್ದರು. ಈ ವಿಡಿಯೋ ಬಿಡುಗಡೆಯಾದ ನಂತರ ಭಾರಿ ವಿರೋಧವನ್ನು ಎದುರಿಸಿದ ಧ್ರುವ್ ಕಾಮೆಂಟ್ ಸೆಕ್ಷನ್ನ್ನು ಕೆಲಕಾಲ ಆಫ್ ಮಾಡಿದ್ದು, ನಂತರ ತನ್ನ ಚಂದಾದಾರು ಮಾತ್ರ ಕಾಮೆಂಟ್ ಮಾಡಲು ಅವಕಾಶ ನೀಡಿದರು. ಆದಿತ್ಯ ಧರ್ ನೀಡಿರುವ ಪ್ರತಿಕ್ರಿಯಲ್ಲಿ ಎಲ್ಲಿಯೂ ಸಹ ಯಾರ ಹೆಸರನ್ನು ನಮೂದಿಸಿಲ್ಲವಾದರೂ ಸಹ ಈ ಪ್ರತಿಕ್ರಿಯೆ ಧ್ರವ್ ರಾಟೀಗೆ ನೀಡಿದ್ದೇ ಆಗಿದೆ ಎಂದು ಹೇಳಲಾಗುತ್ತಿದೆ,(ಏಜನ್ಸೀಸ್).