ಕೋಟಿ ಕೋಟಿ ಹಣ ಸುರಿದು ಧುರಂಧರ್​-2 ಸಿನಿಮಾ ಮಾಡಿದವರು ಈ ಒಂದು ತಪ್ಪು ಮಾಡಬಾರದಿತ್ತು: ಸಿಕ್ಕಾಪಟ್ಟೆ ಟ್ರೋಲ್​! Dhurandhar 
ಬಾಲಿವುಡ್

ಕೋಟಿ ಕೋಟಿ ಹಣ ಸುರಿದು ಧುರಂಧರ್​-2 ಸಿನಿಮಾ ಮಾಡಿದವರು ಈ ಒಂದು ತಪ್ಪು ಮಾಡಬಾರದಿತ್ತು: ಸಿಕ್ಕಾಪಟ್ಟೆ ಟ್ರೋಲ್​! Dhurandhar

ಪ್ರಮುಖ ಮುಖ್ಯಾಂಶಗಳು

  • ಧುರಂಧರ್-2 ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸನ್ನು ಗಳಿಸಿದೆ
  • ಎಲ್ಲ ದಾಖಲೆಗಳನ್ನು ಮುರಿದು, ಇತಿಹಾಸ ಸೃಷ್ಟಿ ಮಾಡುತ್ತಿದೆ
  • ಈ ಸಿನಿಮಾದ ಪ್ರತಿಯೊಂದು ದೃಶ್ಯವನ್ನು ಬಹಳ ಸೂಕ್ಷ್ಮವಾಗಿ ವೀಕ್ಷಿಸುತ್ತಿದ್ದಾರೆ ಸಿನಿ ಅಭಿಮಾನಿಗಳು
  • ಪೀಕ್ ಡೀಟೈಲಿಂಗ್ ಮಾಡುವಾಗ ನಿರ್ದೇಶಕರು ಮಾಡಿದ ಸಣ್ಣ ತಪ್ಪನ್ನು ಎತ್ತಿ ತೋರಿಸಿದ್ದಾರೆ
Dhurandhar : ರಣವೀರ್ ಸಿಂಗ್ ನಾಯಕನಾಗಿ ನಟಿಸಿರುವ ಹಾಗೂ ಆದಿತ್ಯ ಧರ್ ನಿರ್ದೇಶನದ ಧುರಂಧರ್-2 ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸನ್ನು ಗಳಿಸಿದೆ. ಎಲ್ಲ ದಾಖಲೆಗಳನ್ನು ಮುರಿದು, ಇತಿಹಾಸ ಸೃಷ್ಟಿ ಮಾಡುತ್ತಿದೆ. ಕರ್ನಾಟಕದಲ್ಲೂ ಈ ಚಿತ್ರಕ್ಕೆ ಉತ್ತಮ ಬೆಂಬಲ ಸಿಗುತ್ತಿದೆ. ಇದೇ ಸಮಯದಲ್ಲಿ ಪ್ರೇಕ್ಷಕರು, ಈ ಸಿನಿಮಾದ ಪ್ರತಿಯೊಂದು ದೃಶ್ಯವನ್ನು ಬಹಳ ಸೂಕ್ಷ್ಮವಾಗಿ ವೀಕ್ಷಿಸುತ್ತಿದ್ದಾರೆ ಮತ್ತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
ಅಭಿಮಾನಿಗಳು ಧುರಂಧರ್​ ಸಿನಿಮಾದ ಪೀಕ್ ಡೀಟೈಲಿಂಗ್ ಮಾಡುವಾಗ ನಿರ್ದೇಶಕರು ಮಾಡಿದ ಸಣ್ಣ ತಪ್ಪನ್ನು ಎತ್ತಿ ತೋರಿಸಿದ್ದಾರೆ. ಚಿತ್ರದ ಒಂದು ಪ್ರಮುಖ ಫೈಟಿಂಗ್​ ಸೀನ್​ನಲ್ಲಿ ಕ್ಯಾಮೆರಾಮ್ಯಾನ್​ ಒಬ್ಬರು ಕ್ಯಾಮೆರಾ ಹಿಡಿದು ಶೂಟಿಂಗ್​ ಮಾಡುತ್ತಿರುವುದನ್ನು ಕಾಣಬಹುದು. ಈ ದೃಶ್ಯವೂ ಸಿನಿಮಾದಲ್ಲಿದ್ದು, ಇದನ್ನು ಪತ್ತೆಹಚ್ಚಿರುವ ಸಿನಿ ಅಭಿಮಾನಿಗಳು ಕಥೆ ಮತ್ತು ಚಿತ್ರಕಥೆಗೆ ಹೆಚ್ಚಿನ ಗಮನ ನೀಡಿರುವ ನಿರ್ದೇಶಕರು ಈ ತಪ್ಪನ್ನು ಹೇಗೆ ಮಾಡಲು ಸಾಧ್ಯ ಎಂದು ಪ್ರಶ್ನೆ ಮಾಡುತ್ತಿದ್ದಾರೆ. 
ಸಿನಿಮಾದಲ್ಲಿ ನಟ ಉದಯ್‌ಬರ್ ಬಂಧು ನಿರ್ವಹಿಸಿದ ಪಿಂಡಾ ಪಾತ್ರದ ಜೊತೆ ರಣವೀರ್ ಸಿಂಗ್​ ಫೈಟಿಂಗ್​ ಮಾಡುವಾಗ ಕ್ಯಾಮೆರಾಮನ್ ಬಾತ್ರೂಮ್‌ನಲ್ಲಿರುವ ಕನ್ನಡಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಇದರ ಸ್ಕ್ರೀನ್‌ಶಾಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ನಿರ್ದೇಶಕರನ್ನು ಹೊಗಳಲು ಬಳಸುವ 'ಪೀಕ್ ಡಿಟೇಲಿಂಗ್' ಎಂಬ ಪದವನ್ನು ಬಳಸಿಕೊಂಡು ಟ್ರೋಲ್‌ಗಳು ನಡೆಯುತ್ತಿವೆ. 
ಈ ಮಧ್ಯೆ, ಈ ಸಣ್ಣ ತಪ್ಪು ಚಿತ್ರದ ಮನರಂಜನೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಇತರರು ಅಭಿಪ್ರಾಯಪಟ್ಟಿದ್ದಾರೆ. ಈ ಮಧ್ಯೆ, ಹರಿದಾಡುತ್ತಿರುವ ಸ್ಕ್ರೀನ್‌ಶಾಟ್‌ಗಳ ಬಗ್ಗೆ ಅನೇಕ ಜನರು ತಮ್ಮ ಅನುಮಾನಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
ಅಂದಹಾಗೆ, ಒಂದಷ್ಟು ನೈಜ ಘಟನೆಯನ್ನು ಆಧರಿಸಿ, ಕಾಲ್ಪನಿಕ ಕಥೆಯನ್ನು ಜೋಡಿಸಿ, ನೋಡುಗರಿಗೆ ಉತ್ತಮ ದೃಶ್ಯಗಳನ್ನು ಕಟ್ಟಿಕೊಟ್ಟಿರುವ 'ಧುರಂಧರ್​', ಬರೋಬ್ಬರಿ 3 ಗಂಟೆ 49 ನಿಮಿಷಗಳ ದೀರ್ಘ ರನ್​ಟೈಮ್ ಹೊಂದಿದೆ. ಮೊದಲ ಭಾಗಕ್ಕೆ ಹೋಲಿಸಿದರೆ, ಇದಕ್ಕೆ ಹೆಚ್ಚಿನ ಸಮಯ ನೀಡಲಾಗಿದೆ. ಈಗಾಗಲೇ ಸಿನಿಮಾ ನೋಡಿರುವ ಪ್ರೇಕ್ಷಕರು ಚಿತ್ರತಂಡದ ಶ್ರಮಕ್ಕೆ, ತೋರಿಸುವ ರೀತಿಗೆ ಮೆಚ್ಚುಗೆ, ಪ್ರಶಂಸೆ ಮತ್ತು ಉತ್ತಮ ವಿಮರ್ಶೆಗಳನ್ನು ನೀಡುತ್ತಿದ್ದಾರೆ. ಮತ್ತೊಂದೆಡೆ, ನಾಲ್ಕನೇ ದಿನಕ್ಕೆ ಕಾಲಿಟ್ಟಿರುವ ಆದಿತ್ಯ ಧರ್ ಚಿತ್ರ 500 ಕೋಟಿ ರೂ. ಕ್ಲಬ್​ಗೆ ಸನ್ನಿಹಿತವಾಗಿದೆ, (ಏಜೆನ್ಸೀಸ್​).