ಟೀಮ್ ಇಂಡಿಯಾ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ ಮತ್ತು ಬಾಲಿವುಡ್ ನಟಿ ಮಾಹಿರಾ ಶರ್ಮಾ ಡೇಟಿಂಗ್?
- ಟೀಮ್ ಇಂಡಿಯಾ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ ಮತ್ತು ಬಾಲಿವುಡ್ ನಟಿ ಮಾಹಿರಾ ಶರ್ಮಾ ಡೇಟಿಂಗ್?
- ಸಿರಾಜ್ ಬೆನ್ನಲ್ಲೇ ಈಗ ಅಭಿಷೇಕ್ ಶರ್ಮಾ ಜೊತೆ ಮಾಹಿರಾ ಶರ್ಮಾ ಹೆಸರು ಲಿಂಕ್!
- ಒಂದೇ ರೀತಿ ಬ್ರೇಸ್ಲೆಟ್ ಧರಿಸಿ ವೈರಲ್ ಆದ ಜೋಡಿ
ರೂಮರ್: ಕ್ರಿಕೆಟ್ ಮತ್ತು ಬಾಲಿವುಡ್ ಪ್ರೇಮ ಸಂಬಂಧ ನಿನ್ನೆ ಮೊನ್ನೆಯದಲ್ಲ, ವಿವ್ ರಿಚರ್ಸ್ಸ್-ನಿನಾ ಗುಪ್ತಾರಿಂದ ಹಿಡಿದು ವಿರಾಟ್-ಅನುಷ್ಕಾವರೆಗೆ ಹಲವಾರು ಕ್ರಿಕೆಟ್ ಆಟಗಾರರು ಬಾಲಿವುಡ್ ನಟಿಯರನ್ನು ಮದುವೆಯಾಗಿದ್ದಾರೆ, ಡೇಟ್ ಮಾಡಿದ್ದಾರೆ ಹಾಗೂ ವದಂತಿಗಳನ್ನು ಹಬ್ಬಿಸಿಕೊಂಡು ಹಾಗೇ ಸುಮ್ಮನಾಗಿದ್ದಾರೆ.
ಆದರೆ ಈಗ ಕೆಲ ದಿನಗಳಿಂದ ಭಾರತದ ಸ್ಪೋಟಕ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ (Abhishek Sharma) ಬಾಲಿವುಡ್ ನಟಿ ಮಾಹಿರಾ ಶರ್ಮಾ ಅವರನ್ನು ಡೇಟ್ ಮಾಡುತ್ತಿದ್ದಾರೆ, ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದಾರೆ ಎಂಬ ವದಂತಿ ಕ್ರಿಕೆಟ್ ಹಾಗೂ ಬಾಲಿವುಡ್ನಲ್ಲಿ ಹಬ್ಬಿರುವುದಂತು ನಿಜವಾಗಿದೆ.
ಬ್ರೇಸ್ಲೆಟ್ ತಂದಿಟ್ಟ ಆಪತ್ತು!
ಇವರಿಬ್ಬರು ಡೇಟ್ ಮಾಡುತ್ತಿದ್ದಾರೆಂದು ಅದು ಹೇಗೆ ವದಂತಿ ಹಬ್ಬುತ್ತಿದೆ ಎಂದು ಕೇಳಿದರೆ, ಕೆಲ ದಿನಗಳ ಹಿಂದೆ ಮಾಹಿರಾ ಹಾಗೂ ಅಭಿಷೇಕ್ ಒಂದೇ ಸಮಯದಲ್ಲಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಫೋಟೊ ಹಂಚಿಕೊಂಡಿದ್ದು, ಪ್ರತ್ಯೇಕ ಫೋಟೊಗಳಲ್ಲಿ ಇಬ್ಬರೂ ಒಂದೇ ರೀತಿಯ ಬ್ರೇಸ್ಲೆಟ್ನ್ನು ಧರಿಸಿರುವುದು ನೆಟ್ಟಿಗರ ಕಣ್ಣಿಗೆ ಬಿದ್ದಿದೆ. ಅದ್ದರಿಂದ ಈ ಇಬ್ಬರೂ ಡೇಟಿಂಗ್ನಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇಬ್ಬರಿಂದ ಬಾರದ ಅಧಿಕೃತ ಹೇಳಿಕೆ!
ಆದರೆ ಈ ವದಂತಿಗಳ ಬಗ್ಗೆ ಅಭಿಷೇಕ್ ಶರ್ಮಾ ಆಗಲೀ ಅಥವಾ ಮಾಹಿರಾ ಶರ್ಮಾ ಆಗಲಿ ಇಲ್ಲಿವರೆಗೆ ಯಾವುದೇ ಅಧಿಕೃಕ ಹೇಳಿಕೆ ನೀಡಿಲ್ಲ. ಈ ಹಿಂದೆ ಸಹ ಮಾಹಿರಾ ಅವರ ಹೆಸರನ್ನು ಕ್ರಿಕೆಟರ್ ಮೊಹಮ್ಮದ್ ಸಿರಾಜ್ ಜೊತೆ ಪೋಣಿಸಲಾಗಿತ್ತು. ಆದರೆ ಅದನ್ನು ಇಬ್ಬರೂ ಕೂಡ ಅಲ್ಲಗೆಳೆದಿದ್ದು, ಈ ವದಂತಿಗೆ ಸಹ ಆದಷ್ಟು ಬೇಗ ತೆರೆ ಬಿಳಲಿದೆ ಎಂದು ಹೇಳಬಹುದಾಗಿದೆ.
ಟಿ- 20 ಟೂರ್ನಿಯಲ್ಲಿ ಬ್ಯುಸಿಯಾಗಲಿರುವ ಅಭಿಷೇಕ್
ಈದೀಗ ಐಪಿಎಲ್ ಮುಗಿದ ಬೆನ್ನಲ್ಲೆ ಇಂಗ್ಲೆಂಡ್, ಐರ್ಲೆಂಡ್ ಮತ್ತು ಏಷ್ಯನ್ ಗೇಮ್ಸ್ಗೆ ಭಾರತ ತಂಡದ ಘೋಷಣೆಯಾಗಿದ್ದು ಅಭಿಷೇಕ್ ಶರ್ಮಾ ತಂಡದ ಪ್ರಮುಖ ಬ್ಯಾಟ್ಸ್‌ಮನ್ ಆಗಿ ಮೈದಾನಕ್ಕಿಳಿಯಲು ಸಜ್ಜಾಗಿದ್ದಾರೆ. ಜುಲೈ 1 ರಿಂದ ಜುಲೈ 19 ರ ವರೆಗೆ ಭಾರತ, ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು ಈ ಟೂರ್ನಿಯಲ್ಲಿ ಅಭಿಷೇಕ್ ಶರ್ಮಾ ಆಟದ ಮೇಲೆ ಅತೀವ ನಂಬಿಕೆಯನ್ನು ಇಡಲಾಗಿದೆ ಎಂದರೆ ಸುಳ್ಳಲ್ಲ, (ಏಜನ್ಸೀಸ್).