- ಬಾಲಿವುಡ್‌ನ ಮತ್ತೊಂದು ಕ್ಯೂಟ್ ಜೋಡಿ ಎಂದೇ ಪ್ರಸಿದ್ದಿ ಪಡೆದಿದ್ದ ತಾರಾ ಸುತಾರಿಯಾ ಮತ್ತು ವೀರ್ ಪಹರಿಯಾ
- ಎರಡು ತಿಂಗಳ ಹಿಂದೆಯಷ್ಟೇ ತಮ್ಮ ಪ್ರೀತಿಯನ್ನು ಇನ್ಸ್ಟಾಗ್ರಾಮ್ ಮೂಲಕ ಹಂಚಿಕೊಂಡಿದ್ದ ಜೋಡಿ,
- ಬಿ-ಟೌನ್ನ ಹಾಟ್ ಕಪಲ್ ಹಠಾತ್ನೇ ಬೇರ್ಪಡುತ್ತಿರುವುದಕ್ಕೆ ಕಾರಣವಾದ್ರೂ ಏನು?
ಮುಂಬೈ: ಬಾಲಿವುಡ್‌ನ ಮತ್ತೊಂದು ಕ್ಯೂಟ್ ಜೋಡಿ ಎಂದೇ ಪ್ರಸಿದ್ದಿ ಪಡೆದಿದ್ದ ತಾರಾ ಸುತಾರಿಯಾ ಮತ್ತು ವೀರ್ ಪಹರಿಯಾ ಅವರ ಸಂಬಂಧ ಮುರಿದುಬಿದ್ದಿದೆ (Break up)ಎಂಬ ಸುದ್ದಿ ಈಗ ಬಿ-ಟೌನ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಕೇವಲ ಎರಡು ತಿಂಗಳ ಹಿಂದೆಯಷ್ಟೇ ತಮ್ಮ ಪ್ರೀತಿಯನ್ನು ಇನ್ಸ್ಟಾಗ್ರಾಮ್ ಮೂಲಕ ಹಂಚಿಕೊಂಡಿದ್ದ ಈ ಜೋಡಿ, ಹಠಾತ್ನೇ ಬೇರ್ಪಡುತ್ತಿರುವುದು ಅಭಿಮಾನಿಗಳಿಗೆ ತೀವ್ರ ಆಘಾತವನ್ನುಂಟು ಮಾಡಿದೆ.
ಫಿಲ್ಮ್‌ಫೇರ್ ವರದಿಯ ಪ್ರಕಾರ, ಜೋಡಿ ಬೇರೆಯಾಗಲು ನಿರ್ಧರಿಸಿದ್ದಾರೆ ಎಂದು ಅವರ ಆಪ್ತ ಮೂಲಗಳು ದೃಢಪಡಿಸಿವೆ. ಆದರೆ, ವೀರ್ ಅಥವಾ ತಾರಾ ಬೇರ್ಪಡುವಿಕೆಯ ಬಗ್ಗೆ ಯಾವುದೇ ಖಚಿತ ಮಾಹಿತಿಗಳು ಬಹಿರಂಗಗೊಂಡಿಲ್ಲ.
ಈ ಹಿಂದೆ ಏನಾಗಿತ್ತು?
ಮುಂಬೈನಲ್ಲಿ ಶುಕ್ರವಾರ (ಡಿ.26) ರಾತ್ರಿ ನಡೆದ ಪಂಜಾಬಿ ಗಾಯಕ ಎಪಿ ಧಿಲ್ಲೋನ್ ಅವರ 'ಒನ್ ಆಫ್ ಒನ್' ಟೂರ್ ಸಂಗೀತ ಕಾರ್ಯಕ್ರಮಕ್ಕೆ ಈ ಜೋಡಿ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಮಯದಲ್ಲಿ ಧಿಲ್ಲೋನ್, ತಾರಾರನ್ನು ವೇದಿಕೆಗೆ ಆಹ್ವಾನಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿತ್ತು.
ಕಪ್ಪು ಬಣ್ಣದ ಬಟ್ಟೆ ತೊಟ್ಟಿದ್ದ ತಾರಾ ಸುತಾರಿಯಾ, ವೇದಿಕೆಯಲ್ಲಿ ಧಿಲ್ಲೋನ್ ಜೊತೆ ಸೇರಿ 'ಎಕ್ಸ್‌ಕ್ಯೂಸ್' ಹಾಡನ್ನು ಹಾಡುತ್ತಾ ಕೆನ್ನೆಗೆ ಮುತ್ತಿಟ್ಟು ನೃತ್ಯ ಮಾಡುತ್ತಿರುವಾಗ ವೀರ್ ತನ್ನ ಗೆಳೆತಿಯನ್ನು ದಿಟ್ಟಿಸಿ ನೋಡುತ್ತಿರುವ ವಿಡಿಯೋವನ್ನು ನಾವು ನೋಡಬಹುದು. ಈ ವಿಡಿಯೋಕ್ಕೆ ನೆಟ್ಟಿಗರು ಪ್ರತಿಕ್ರಿಯಿಸಿದ್ದು, ವೀರ್ ಪಹರಿಯಾ ತುಂಬಾ ಒತ್ತಡದಿಂದ ಕಾಣುತ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ದರು.
ಇದಾದ ನಂತರ ಈ ಜೋಡಿ ಎಪಿ ಧಿಲ್ಲೋನ್ ಸಂಗೀತ ಕಚೇರಿಯ ವೈರಲ್ ವಿಡಿಯೋ ಬಗೆಗಿನ ವದಂತಿಗಳಿಗೆ ಪ್ರತಿಕ್ರಿಯೆಯನ್ನು ನೀಡಿದ್ದು, ಇದು ತಪ್ಪು ನಿರೂಪಣೆ ಮತ್ತು ಪೇಡ್ ಪಿಆರ್ ಕೆಲಸ. ಇಂತಹ ಸುಳ್ಳುಗಳು ನಮ್ಮನ್ನು ಕುಗ್ಗಿಸಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ತಮ್ಮ ನಡುವಿನ ಬಾಂಧವ್ಯ ಗಟ್ಟಿಯಾಗಿದೆ ಎಂದು ಸ್ಪಷ್ಟನೆ ನೀಡುವ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದರು.
ಪೋಸ್ಟ್ನಲ್ಲೇನಿತ್ತು?
ತಾರಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಸಂಗೀತ ಕಚೇರಿಯ ವೀಡಿಯೊವನ್ನು ಹಂಚಿಕೊಂಡು ಜೋರಾಗಿ ಮತ್ತು ಹೆಮ್ಮೆಯಿಂದ ಮತ್ತು ಅದರಲ್ಲಿ ಒಟ್ಟಿಗೆ!!! ಎಂತಹ ರಾತ್ರಿ! ನಮ್ಮ ಹಾಡಿಗೆ ತುಂಬಾ ಪ್ರೀತಿ ನೀಡಿದ್ದಕ್ಕಾಗಿ ಮುಂಬೈಗೆ ಧನ್ಯವಾದಗಳು. ಇಲ್ಲಿನ ನೆನಪುಗಳು ಶಾಶ್ವತವಾಗಿ ನಮ್ಮೊಂದಿಗೆ ಇರುತ್ತವೆ.
ಆದಾಗ್ಯೂ, ಸುಳ್ಳು ನಿರೂಪಣೆಗಳು, ಬುದ್ಧಿವಂತ ಸಂಪಾದನೆ ಮತ್ತು ಜನರಿಂದ ಪಾವತಿಸಿದ ಪಿಆರ್ ಅಭಿಯಾನಗಳು ಯಾವುದೇ ಕಾರಣಕ್ಕೂ ನಮ್ಮನ್ನು ಅಲುಗಾಡಿಸಲು ಸಾಧ್ಯವಿಲ್ಲ. ನಮ್ಮ ಪ್ರೀತಿ ಮತ್ತು ಸತ್ಯ ಯಾವಾಗಲೂ ಗೆಲ್ಲುತ್ತದೆ ಎಂದು ಬರೆದು ಪೋಸ್ಟ್ ಮಾಡಿದ್ದರು.
ಈ ಪೋಸ್ಟ್ಗೆ ವೀರ್ ಪ್ರತಿಕ್ರಿಯಿಸಿದ್ದು, "ನನ್ನ ಪ್ರತಿಕ್ರಿಯೆಯ ತುಣುಕನ್ನು ಮತ್ತೊಂದು ಹಾಡಿನ ಸಮಯದಲ್ಲಿ ತೆಗೆದುಕೊಳ್ಳಲಾಗಿದೆ, ನಾನು ಜೋಕರ್ ಅಲ್ಲ ಎಂದು ಕಿಡಿಕಾರಿದ್ದರು.
ತಾರಾ ಮತ್ತು ವೀರ್ ಸಂಬಂಧ
ತಾರಾ ಸುತಾರಿಯಾ ಮತ್ತು ವೀರ್ ಪಹರಿಯಾ 2025 ರಲ್ಲಿ ಡೇಟಿಂಗ್ ಪ್ರಾರಂಭಿಸಿದರು. ಇವರಿಬ್ಬರು ಒಟ್ಟಿಗೆ ತಮ್ಮ ವೈಯಕ್ತಿಕ ಸಮಯವನ್ನು ಖಾಸಗಿ ವಿಹಾರಗಳಿಗೆ ಹೋಗುವುದರ ಮೂಲಕ ಗುರುತಿಸಿಕೊಂಡಾಗ, ಅವರ ಬಗ್ಗೆ ಅನೇಕ ಊಹಾಪೋಹಗಳು ಪ್ರಾರಂಭವಾದವು. ಇದಾದ ಬಳಿಕ ಆಗಸ್ಟ್‌ನಲ್ಲಿ ಈ ಜೋಡಿ ತಮ್ಮ ಸಂಬಂಧದ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುವುದರ ಮೂಲಕ ಸಂಬಂಧವನ್ನು ಬಹಿರಂಗಪಡಿಸಿದರು (ಏಜೆನ್ಸೀಸ್).