ಅನ್ನು ಕಪೂರ್ ಮತ್ತು ತಮನ್ನಾ 
ಬಾಲಿವುಡ್

ಅನ್ನು ಕಪೂರ್ ಮಿಲ್ಕಿ ಹೇಳಿಕೆ, ತಿರುಗಿಬಿದ್ದ ತಮನ್ನಾ!

ಬಹುಭಾಷಾ ನಟಿ ತಮನ್ನಾ ಭಾಟಿಯಾ ಸೌಂದರ್ಯಕ್ಕೆ ತುಂಬ ಅಭಿಮಾನಿಗಳಿದ್ದಾರೆ. ಚಿತ್ರರಂಗದ ಮಂದಿಯೂ ಅವರ ಫ್ಯಾನ್​ಗಳಾಗಿದ್ದಾರೆ. ಅಂತಹ ಒಬ್ಬ ಅಭಿಮಾನಿ ಬಾಲಿವುಡ್​ ಹಿರಿಯ ನಟ ಅನ್ನು ಕಪೂರ್​.

Tamannah Bhatia -

ಬಹುಭಾಷಾ ನಟಿ ತಮನ್ನಾ ಭಾಟಿಯಾ ಸೌಂದರ್ಯಕ್ಕೆ ತುಂಬ ಅಭಿಮಾನಿಗಳಿದ್ದಾರೆ. ಚಿತ್ರರಂಗದ ಮಂದಿಯೂ ಅವರ ಫ್ಯಾನ್​ಗಳಾಗಿದ್ದಾರೆ. ಅಂತಹ ಒಬ್ಬ ಅಭಿಮಾನಿ ಬಾಲಿವುಡ್​ ಹಿರಿಯ ನಟ ಅನ್ನು ಕಪೂರ್​. ಕೆಲ ತಿಂಗಳ ಹಿಂದೆ ಅನ್ನು, "ಇತ್ತೀಚೆಗಷ್ಟೆ "ಆಜ್​ ಕಿ ರಾತ್​' ಹಾಡನ್ನು ನೋಡಿದೆ. ಅಬ್ಬಬ್ಬ ಹಾಲಿನಂತ ಮೈಬಣ್ಣ ಹೊಂದಿರುವ ಸುಂದರಿ. ಆ ಸಹೋದರಿ, ತನ್ನ ಹಾಡು, ಹಾಲಿನಂತ ಮುಖ, ಮೈಮಾಟದಿಂದ ಮಕ್ಕಳನ್ನು ಮಲಗಿಸುತ್ತಾರೆ. ಪ್ರತಿ ರಾತ್ರಿ ಒಳ್ಳೆ ನಿದ್ದೆಗಿಂತ ಇನ್ನೇನು ಬೇಕು ಹೇಳಿ? ಆಕೆಗೆ ಏನೇ ಆಸೆಗಳಿದ್ದರೂ ಈಡೇರಲಿ ಎಂದು ಹಾರೈಸುತ್ತೇನೆ' ಎಂದು ತಮನ್ನಾ ಕಾಲೆಳೆದಿದ್ದರು. ಆಗ ಕೆಲ ಬಾಲಿವುಡ್​ ತಾರೆಯರು ಸೇರಿ ನಟಿಯ ಅಭಿಮಾನಿಗಳು, ಅನ್ನುಗೆ ಆನ್​ಲೈನ್​ನಲ್ಲಿ ಕ್ಲಾಸ್​ ತೆಗೆದುಕೊಂಡರೂ ತಮನ್ನಾ ಮಾತ್ರ ಪ್ರತಿಕ್ರಿಯೆ ನೀಡಿರಲಿಲ್ಲ.

ತಮನ್ನಾ ಭಾಟಿಯಾ

ಇದೀಗ ಆರು ತಿಂಗಳ ಬಳಿಕ ಆ ಬಗ್ಗೆ ಮೌನ ಮುರಿದಿರುವ ಅವರು, "ಸೃಜನಾತ್ಮಕ ವ್ಯಕ್ತಿಯಾಗಿ ನಾವು ಮತ್ತೊಬ್ಬರ ಮಾತುಗಳನ್ನು ಕೇಳುವುದು ತುಂಬ ಮುಖ್ಯವಾಗುತ್ತದೆ. ಆದರೆ, ಕೇಳಿದ ಬಳಿಕ ಯಾವುದನ್ನು ನಮ್ಮೊಂದಿಗೆ ಇಟ್ಟುಕೊಳ್ಳಬೇಕು, ಯಾವುದನ್ನು ಬಿಡಬೇಕು ಎಂಬುದನ್ನೂ ನಾವು ಮೊದಲು ಅರ್ಥ ಮಾಡಿಕೊಳ್ಳಬೇಕು. ಏಕೆಂದರೆ ಮಹಿಳೆಯಾಗಿ ನಾವು ಅನವಶ್ಯಕ ಹೇಳಿಕೆಗಳಿಗೆ ಪ್ರಾಮುಖ್ಯ ನೀಡುತ್ತಾ ಹೋದರೆ, ಜೀವನದಲ್ಲಿ ಮುಂದುವರಿಯಲು ಸಾಧ್ಯವಾಗುವುದಿಲ್ಲ. ಹೀಗಾಗಿಯೇ ನಾನು ಈ ವಿಷಯಗಳತ್ತ ನೋಡುವುದೂ ಇಲ್ಲ. ನನ್ನ ಕೆಲಸ, ಸಿನಿಮಾ, ನಟನೆಯ ಬಗ್ಗೆ ಮಾತ್ರ ಗಮನ ಹರಿಸುತ್ತೇನೆ' ಎಂದು ಹೇಳಿಕೊಂಡಿದ್ದಾರೆ. ಕಳೆದ ಸೆಪ್ಟೆಂಬರ್​ನಲ್ಲಿ ರಿಲೀಸ್​ ಆದ "ದ ವನ್​' ಸಕ್ಸಸ್​ನ ಸಂಭ್ರಮದಲ್ಲಿರುವ ತಮನ್ನಾ ಸದ್ಯ "ರಾಗಿಣಿ 3', "ರೇಂಜರ್ಸ್​​', "ಪುರುಷನ್​' ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. & ಏಜೆನ್ಸೀಸ್​