ಬಾಲಿವುಡ್ ನಟಿ ತಾಪ್ಸಿ ಪನ್ನು
- ಟಾಲಿವುಡ್ನಲ್ಲಿ ಪದಾರ್ಪಣೆ ಮಾಡಿದ ಬ್ಯೂಟಿ ಈಗ ಬಾಲಿವುಡ್ನಲ್ಲಿ ಸಕ್ರಿಯ
- ಸೌತ್ ನಿರ್ದೇಶಕರ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ತಾಪ್ಸಿ ಪನ್ನು
- ಬಾಲಿವುಡ್ಗಿಂತ ಸೌತ್ನಲ್ಲೇ ಈ ಗೀಳು ಹೆಚ್ಚು ಎಂದು ನಾಲಿಗೆ ಹರಿಬಿಟ್ಟ ನಟಿ
ಮುಂಬೈ: ಟಾಲಿವುಡ್ನಲ್ಲಿ ಪದಾರ್ಪಣೆ ಮಾಡಿದ ಕ್ಯೂಟ್ ಚೆಲುವೆ ತಾಪ್ಸಿ ಪನ್ನು, ಇಂದು ಬಾಲಿವುಡ್ನಲ್ಲಿ ತಮ್ಮ ಹೆಸರನ್ನು ಬೇರೂರಿಸಿದ್ದಾರೆ. ತಮ್ಮ ನೇರನುಡಿ, ಕಥೆಗಳ ಆಯ್ಕೆ, ವಿವಾದಾತ್ಮಕ ಹೇಳಿಕೆಗಳಿಂದಲೇ ಆಗಾಗ್ಗೆ ಸದ್ದು ಮಾಡುವ ತಾಪ್ಸಿ, ಇದೀಗ ಮತ್ತೊಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಸೌತ್ ಚಿತ್ರರಂಗದ ನಿರ್ದೇಶಕರು ತನೆಗೆ ಸೆಟ್‌ನಲ್ಲಿ ಭಾರೀ ಮುಜುಗರಕ್ಕೀಡು ಮಾಡುತ್ತಿದ್ದರು ಎಂದಿದ್ದಾರೆ.
ತಮ್ಮ ಮುಂಬರುವ ಹೊಸ ಹಿಂದಿ ಸಿನಿಮಾ 'ಅಸ್ಸಿ' (ASSI) ಪ್ರಚಾರ ಕಾರ್ಯದಲ್ಲಿ ಸಖತ್ ಬಿಜಿಯಾಗಿರುವ ತಾಪ್ಸಿ, ಇದರ ಭಾಗವಾಗಿ ಸಂದರ್ಶನವೊಂದರಲ್ಲಿ ಹಲವು ವಿಷಯಗಳನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ, ಸೌತ್ ಇಂಡಸ್ಟ್ರಿಯಲ್ಲಿ ನಿರ್ದೇಶಕರು ನಾಯಕಿಯರ ಗ್ಲಾಮರ್ ಹೆಸರಿನಲ್ಲಿ ಮುಂದಿಡುತ್ತಿದ್ದ ಬೇಡಿಕೆಗಳು ತೀರ ಮುಜುಗರಕ್ಕೆ ಕಾರಣವಾಗುತ್ತಿತ್ತು ಎಂದು ಹೇಳುವ ಮೂಲಕ ಸೌತ್ ನಿರ್ದೇಶಕರ ಮೇಲೆ ಗಂಭೀರ ಆರೋಪ ಹೊರಿಸಿದ್ದಾರೆ.
'ಶುಭಾಂಕರ್ ಮಿಶ್ರಾ' ಅವರ ಯೂಟ್ಯೂಬ್ ಪಾಡ್ಕಾಸ್ಟ್ನಲ್ಲಿ ಮಾತನಾಡಿದ ನಟಿ, "ನಾನು ಹೀಗೆ ಸೌತ್ ಸಿನಿಮಾಗಳನ್ನು ಮಾಡುವಾಗ, ಆ ಚಿತ್ರೀಕರಣದಲ್ಲಿ ನನಗೆ ಹೆಚ್ಚಾಗಿ 'ಪ್ಯಾಡೆಡ್ ಬ್ರಾ' ಧರಿಸುವಂತೆ ಕೇಳಲಾಗುತ್ತಿತ್ತು. ನಿರ್ದೇಶಕರ ಈ ಮಾತುಗಳು ನಿಜಕ್ಕೂ ಮುಜುಗರಕ್ಕೀಡು ಮಾಡುತ್ತಿತ್ತು. ವಾಸ್ತವವಾಗಿ, ಇದಕ್ಕಿಂತ ತುಂಬಾ ಮುಜುಗರ ತರುತ್ತಿದ್ದದ್ದು, ಇದು ನೇರವಾಗಿ ನಿರ್ದೇಶಕರಿಂದ ಬರುತ್ತಿರಲಿಲ್ಲ. ಸೆಟ್‌ನಲ್ಲಿ ಯಾರಿಗೋ ಹೇಳಿ, ಅದನ್ನು ನನಗೆ ಅಂತಿಮವಾಗಿ ತಲುಪಿಸಿದಾಗ ತುಂಬ ಬೇಸರವಾಯಿತು" ಎಂದರು.
"ಮುಖ್ಯವಾಗಿ, ಹಾಡುಗಳ ಚಿತ್ರೀಕರಣ ನಡೆಯುತ್ತಿರುವಾಗ, ಎಲ್ಲರ ಮುಂದೆ ಇಂತಹ ಬದಲಾವಣೆಗಳ ಬಗ್ಗೆ ಮಾತನಾಡುವುದು ಮತ್ತು ಎಲ್ಲರೂ ನಮ್ಮನ್ನು ನೋಡುವಂತೆ ಮಾಡುವುದು ನನಗೆ ತುಂಬಾ ಮುಜುಗರವಾಗುವಂತೆ ಮಾಡುತ್ತಿತ್ತು. ಕೆಲವೊಂದು ಸೀನ್ಗಳಿಗೆ ಪ್ಯಾಡೆಡ್ ಬ್ರಾ ಧರಿಸಲು ಕೇಳುತ್ತಾರೆ. ಇದು ನನಗೆ ಸರಿ ಅನಿಸಲಿಲ್ಲ. ಬಾಲಿವುಡ್ ಐಟಂ ಸಾಂಗ್ಗಳಿಗೆ ಹೋಲಿಸಿದರೆ, ಸೌತ್ ಇಂಡಸ್ಟ್ರಿಯಲ್ಲಿ, ಹೀರೋಯಿನ್ನ ಸೋಂಟ, ಹೊಕ್ಕುಳಿನ ಪ್ರದರ್ಶನದ ಬಗ್ಗೆ ಹೆಚ್ಚು ಗೀಳಿದೆ. ಇವರಲ್ಲೇ ಏಕೆ ಹೀಗೆ? ಎಂಬುದರ ಹಿಂದಿರುವ ಕಾರಣವೇನು? ಅಂತ ಅರ್ಥಮಾಡಿಕೊಳ್ಳಲು ನಾನು ಪ್ರಯತ್ನಿಸುತ್ತಿದ್ದೇನೆ" ಎಂದು ತಾಪ್ಸಿ ಹೇಳಿದ್ದಾರೆ. ಸದ್ಯ ಬಾಲಿವುಡ್ ಬ್ಯೂಟಿಯ ಈ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಹಲವರ ಟೀಕೆಗೆ ಗುರಿಯಾಗಿದೆ,(ಏಜೆನ್ಸೀಸ್).