- ವಂಚನೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಸುಕೇಶ್ ಚಂದ್ರಶೇಖರ್ ಮತ್ತೊಮ್ಮೆ ಸುದ್ದಿಯಾಗಿದ್ದಾರೆ
- ಪ್ರೇಮಿಗಳ ದಿನದಂದು ತನ್ನ ಪ್ರೇಯಸಿ ಜಾಕ್ವೆಲಿನ್ ಫರ್ನಾಂಡಿಸ್ ಜೈಲಿನಿಂದಲೇ ಪತ್ರ ಬರೆದಿದ್ದಾರೆ
- , ಜಾಕ್ವೆಲಿನ್ ಅವರ ಹೆಸರಿಗೆ ಏರ್‌ಬಸ್ ಎಚ್135 ಐಷಾರಾಮಿ ಹೆಲಿಕಾಪ್ಟರ್ ಉಡುಗೊರೆ ನೀಡುವುದಾಗಿ ತಿಳಿಸಿದ್ದಾರೆ
Sukesh chandrashekhar: ವಂಚನೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಸುಕೇಶ್ ಚಂದ್ರಶೇಖರ್ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಫೆಬ್ರವರಿ 14ರ ಪ್ರೇಮಿಗಳ ದಿನದಂದು ತನ್ನ ಪ್ರೇಯಸಿ ನಟಿ, ಜಾಕ್ವೆಲಿನ್ ಫರ್ನಾಂಡಿಸ್ ಗೆ ಪತ್ರ ಬರೆದು ಐಷಾರಾಮಿ ಏರ್ಕಾಪ್ಟರ್ ಉಡುಗೊರೆಯಾಗಿ ನೀಡುವುದರ ಜೊತೆಗೆ ಕಾನೂನು ತೊಂದರೆಗಳಿಗೆ ಕ್ಷಮೆಯಾಚಿಸಿದ್ದಾರೆ.
ಪತ್ರದಲ್ಲೇನಿದೆ?
ತನ್ನ ಪತ್ರದಲ್ಲಿ ಸುಕೇಶ್, ಜಾಕ್ವೆಲಿನ್ ಅವರ ಹೆಸರಿಗೆ 'ಏರ್‌ಬಸ್ ಎಚ್135' (Airbus H135) ಮಾದರಿಯ ಅತ್ಯಾಧುನಿಕ ಐಷಾರಾಮಿ ಹೆಲಿಕಾಪ್ಟರ್ ಉಡುಗೊರೆ ನೀಡುವುದಾಗಿ ತಿಳಿಸಿದ್ದಾರೆ. ನೀನು ನನ್ನ ಪಾಲಿಗೆ ರಾಣಿ, ನಿನಗೆ ಸೂಕ್ತವಾದ ಉಡುಗೊರೆಯನ್ನು ಈ ಏರ್‌ಬಸ್ H ಸೀರಿಸ್ ಹೆಲಿಕಾಪ್ಟರ್ ರೂಪದಲ್ಲಿ ನೀಡುತ್ತಿದ್ದೇನೆ. ಅದರಲ್ಲಿ ನಿನ್ನ ಹೆಸರಿನ ಮೊದಲ ಅಕ್ಷರವನ್ನು ಬರೆಸಲಾಗಿದೆ ಎಂದು ಉಲ್ಲೇಖಿಸಿದ್ದಾರೆ.
ನನ್ನ ಹೃದಯದ ಪ್ರತಿ ಬಡಿತವೂ ನಿನ್ನನ್ನೇ ನೆನಪಿಸುತ್ತದೆ. ನಮ್ಮಿಬ್ಬರ ನಡುವಿನ ಪ್ರೀತಿಯನ್ನು ಯಾರಿಂದಲೂ ದೂರ ಮಾಡಲು ಸಾಧ್ಯವಿಲ್ಲ.
ನನ್ನಿಂದ ನೀನು ಅನುಭವಿಸಿದ ಕಾನೂನು ಸಂಕಷ್ಟ, ಮಾನಸಿಕ ಒತ್ತಡ, ಇಡಿ ವಿಚಾರಣೆಗಳಿಗೆ ನಾನು ವಿಷಾದಿಸುತ್ತೇನೆ. ನನ್ನಿಂದಾಗಿ ನೀನು ಎದುರಿಸಿದ ಪ್ರತಿಯೊಂದು ಸಮಸ್ಯೆಯೂ ನನ್ನನ್ನು ಘಾಸಿಗೊಳಿಸಿದೆ, ಅದಕ್ಕಾಗಿ ನಾನು ನಿನಗೆ ಸದಾ ಋಣಿಯಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ನೀನು ನನಗೆ ಮಾತ್ರ ಸೇರಿದವಳು..
ಸುಕೇಶ್, ಜಾಕ್ವೆಲಿನ್ ಅವರಿಗೆ ಮಗು ನೀನು ನನಗೆ ಮಾತ್ರ ಸೇರಿದವಳು. ನನ್ನ ಆತ್ಮದಲ್ಲಿ ಶಾಶ್ವತವಾಗಿ ಬೇರೂರಿದ್ದೀಯ. ಬೇರೆ ಯಾವುದೇ ಪುರುಷರು ಕೂಡ ನಿನ್ನ ಹೃದಯದ ಒಂದು ಭಾಗವನ್ನು ಸಹ ಪಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.
ಸುಕೇಶ್ ಚಂದ್ರಶೇಖರ್ ಸುಮಾರು 200 ಕೋಟಿ ರೂಪಾಯಿಗಳ ಹಣ ವರ್ಗಾವಣೆ ಮತ್ತು ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿದ್ದರು. ಈ ಹಗರಣದ ತನಿಖೆಯ ವೇಳೆ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ಸುಕೇಶ್‌ನಿಂದ ಕೋಟ್ಯಂತರ ರೂಪಾಯಿ ಮೌಲ್ಯದ ದುಬಾರಿ ಉಡುಗೊರೆಗಳನ್ನು ಪಡೆದಿದ್ದರು ಎಂಬುದು ಬಹಿರಂಗವಾಗಿತ್ತು. ಇದರ ಪರಿಣಾಮವಾಗಿ ಇಡಿ ಜಾಕ್ವೆಲಿನ್ ಅವರನ್ನು ಈ ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡಿತ್ತು (ಏಜೆನ್ಸೀಸ್).