ಬಾಲಿವುಡ್ ನಟ ಸೋನು ಸೂದ್ (ಚಿತ್ರ X)
- ಕೊರೋನಾ ಕಾಲದ ಬಿಕ್ಕಟ್ಟಿನ ಸಮಯದಲ್ಲಿ ಜನರ ಪಾಲಿಗೆ 'ರಿಯಲ್ ಹೀರೋ' ಆಗಿದ್ದ ಸೋನು ಸೂದ್!
- ಅಮೆರಿಕ-ಇರಾನ್ ಸಂಘರ್ಷದ ನಡುವೆ ಸಿಲುಕಿರುವ ಸಂತ್ರಸ್ತರಿಗೆ ಸಹಾಯ ಮಾಡಲು ಮುಂದಾದ ಸೋನು
- ಇಲ್ಲಿ ಯಾವುದೇ ರಾಷ್ಟ್ರೀಯತೆ ಇಲ್ಲ. ಯಾವುದೇ ಷರತ್ತುಗಳಿಲ್ಲ. ಬದಲಾಗಿ ಮಾನವೀಯತೆ ಅಷ್ಟೇ.
Sonu Sood: ಕೊರೋನಾ ಕಾಲದ ಬಿಕ್ಕಟ್ಟು ಮತ್ತು ಪಂಜಾಬ್ ಪ್ರವಾಹದ ಸಮಯದಲ್ಲಿ ಸಾವಿರಾರು ಜನರ ಪಾಲಿಗೆ 'ರಿಯಲ್ ಹೀರೋ' ಆಗಿದ್ದ ಸೋನು ಸೂದ್, ಈಗ ಗಲ್ಫ್ ರಾಷ್ಟ್ರಗಳಲ್ಲಿ ಉಂಟಾಗಿರುವ ಅಮೆರಿಕ-ಇರಾನ್ ಸಂಘರ್ಷದ ನಡುವೆ ಸಿಲುಕಿರುವ ಸಂತ್ರಸ್ತರಿಗೆ ಸಹಾಯ ಮಾಡಲು ಮತ್ತೊಮ್ಮೆ ಮುಂದಾಗಿದ್ದಾರೆ.
ಇಂದು (ಮಾ.05) ಸೋನು ಸೂದ್ ತಮ್ಮ ಎಕ್ಸ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಇರಾನ್ ಇಸ್ರೇಲ್ ಸಂಘರ್ಷದಿಂದಾಗಿ ದುಬೈನಲ್ಲಿ ಸಿಲುಕಿರುವವರಿಗೆ ಉಚಿತ ಆಶ್ರಯ ನೀಡುವುದಾಗಿ ತಿಳಿಸಿದ್ದಾರೆ.
ಸಂದೇಶದಲ್ಲೇನಿದೆ?
ಯುದ್ಧವು ದುಬೈನಲ್ಲಿ ಅನೇಕ ಪ್ರಯಾಣಿಕರನ್ನು ಸಿಲುಕಿಸಿದೆ. ನೀವು ಅಥವಾ ನಿಮಗೆ ತಿಳಿದಿರುವ ಯಾರಿಗಾದರೂ ಉಳಿಯಲು ಸ್ಥಳ ಇಲ್ಲದಿದ್ದರೆ, ನಾವು ಸುರಕ್ಷಿತ ವಸತಿಯನ್ನು ಉಚಿತವಾಗಿ ನೀಡುತ್ತಿದ್ದೇವೆ. ಇಲ್ಲಿ ಯಾವುದೇ ರಾಷ್ಟ್ರೀಯತೆ ಇಲ್ಲ. ಯಾವುದೇ ಷರತ್ತುಗಳಿಲ್ಲ. ಬದಲಾಗಿ ಮಾನವೀಯತೆ ಅಷ್ಟೇ. ನಿಮಗೆ ಸಹಾಯ ಬೇಕಿದ್ದರೆ ಇನ್ಸ್ಟಾಗ್ರಾಮ್ನಲ್ಲಿ ನಮಗೆ DM ಮಾಡಿ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ, ಅಭಿಮಾನಿಗಳ ಗಮನವನ್ನು ಸೆಳೆಯಿತು. ಆದಾಗ್ಯೂ, ಒಬ್ಬ ಬಳಕೆದಾರರು ಸೋನು ಭಾಯ್, ನಿಮ್ಮ ಬಗ್ಗೆ ನಮಗೆ ತುಂಬಾ ಗೌರವವಿದೆ. ಈ ಹಿಂದೆ 'ಚೋಟಾ ಡಾನ್' ಎಂಬ ವ್ಯಕ್ತಿಯ ಬಿಡುಗಡೆಗೆ ಸಹಾಯ ಮಾಡಿದ್ದೀರಿ. ಮತ್ತು ಈಗ ನಿಮ್ಮ ಹೊಸ ತೀರ್ಮಾನವು ಇನ್ನಷ್ಟು ಹೃದಯಗಳನ್ನು ಗೆದ್ದಿದೆ ಎಂದು ಬರೆದಿದ್ದಾರೆ.
ಸಹಾಯವನ್ನು ಕೇಳುತ್ತಾ ಒಬ್ಬ ಬಳಕೆದಾರರು, ಪ್ರಿಯ ಸೋನುಜಿ... ಯುದ್ಧದ ಘರ್ಷಣೆಯಿಂದಾಗಿ ನನ್ನ ಮಗ ಮತ್ತು ಸೊಸೆ ದುಬೈನಲ್ಲಿ ಸಿಲುಕಿಕೊಂಡಿದ್ದಾರೆ. ವಿಮಾನಗಳು ರದ್ಧಾಗಿವೆ. ಹೇಗಾದರೂ ಮಾಡಿ ಅವರನ್ನು ಭಾರತಕ್ಕೆ ತಲುಪಿಸಿ ಎಂದು ವಿನಂತಿಸಿಕೊಂಡಿದ್ದಾರೆ (ಏಜೆನ್ಸೀಸ್).