ಮತ್ತೊಮ್ಮೆ ತಾಯಿಯಾದ ನಟಿ ಸೋನಂ ಕಪೂರ್
- ಮತ್ತೊಮ್ಮೆ ತಾಯಿಯಾದ ನಟಿ ಸೋನಂ ಕಪೂರ್
- ಎರಡನೇ ಬಾರಿಗೆ ಗಂಡು ಮಗುವಿಗೆ ಜನ್ಮ ನೀಡಿದ ಅನಿಲ್ ಕಪೂರ್ ಪುತ್ರಿ
- ಬಾಲಿವುಡ್ ಸೆಲೆಬ್ರಿಟಿಗಳಿಂದ ಹರಿದುಬಂದ ಶುಭಾಷಯಗಳ ಮಹಾಪೂರ
ಮುಂಬೈ: ಬಾಲಿವುಡ್ ಖ್ಯಾತ ನಟ ಅನಿಲ್ ಕಪೂರ್ ಪುತ್ರಿ ಹಾಗೂ ನಟಿ ಸೋನಂ ಕಪೂರ್ (Sonam Kapoor) ಎರಡನೇ ಮಗುವಿಗೆ ಜನ್ಮ ನೀಡುವ ಮೂಲಕ ಮತ್ತೊಮ್ಮೆ ತಾಯಿಯಾಗಿದ್ದಾರೆ. 2025 ರ ನವೆಂಬರ್ ತಿಂಗಳಲ್ಲಿ ತಾವು ಗರ್ಭ ಧರಿಸಿರುವ ಬಗ್ಗೆ ಮಾಹಿತಿ ನೀಡಿದ್ದ ಸೋನಂ ಈ ಭಾರಿ ಸಹ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ನಮ್ಮ ಕುಟುಂಬ ಈಗ ವಿಸ್ತರಿಸಿದೆ!
ನಾವು ಎರಡನೆ ಮಗುವಿಗೆ ಜನ್ಮ ನೀಡಿರುವ ಕುರಿತು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ಸೋನಂ ಕಪೂರ್, ನಾನು ಮಾರ್ಚ್ 29, 2026 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದು, ಇದನ್ನು ನಿಮ್ಮ ಜೊತೆ ಹಂಚಿಕೊಳ್ಳಲು ಬಹಳ ಸಂತೋಷವಾಗಿದೆ. ನನ್ನ ಹಿರಿ ಮಗ ವಾಯು ಅವನ ತಮ್ಮನನ್ನು ಸ್ವಾಗತಿಸಲು ಕಾತುರನಾಗಿದ್ದಾನೆ, ಇದರೊಟ್ಟಿಗೆ ನಮ್ಮ ಕುಟುಂಬ ಈಗ ಮೂರ ರಿಂದ ನಾಲ್ಕಾಗುವ ಮೂಲಕ ವಿಸ್ತಾರವಾಗಿದೆ ಎಂದು ನಟಿ ಸೋನಂ ಕಪೂರ್ ಬರೆದುಕೊಂಡಿದ್ದಾರೆ.
ಶುಭಾಶಯಗಳ ಮಹಾಪೂರ!
ಸಾಮಾಜಿಕ ಜಾಲತಾಣಗಳಲ್ಲಿ ತಾವು ತಾಯಿಯಾದ ಕುರಿತು ಸೋನಂ ಹಂಚಿಕೊಂಡಿರುವ ಫೋಸ್ಟ್ ಸಖತ್ ವೈರಲ್ ಆಗುತ್ತಿದ್ದು, ಬಾಲಿವುಡ್ನ ಖ್ಯಾತನಾಮರು ನಟಿಗೆ ಶುಭಾಶಯಗಳನ್ನು ಕೋರಿದ್ದಾರೆ. ಬಾಲಿವುಡ್ನ ಬೆಬೋ ಖ್ಯಾತಿಯ ಕರೀನಾ ಕಪೂರ್, ಚಿಕ್ಕಪ್ಪ ಸಂಜಯ್ ಕಪೂರ್, ರಿಯಾ ಕಪೂರ್, ಹುಮಾ ಖುರೇಷಿ ಮೊದಲಾದವರು ಸೋನಂ-ಆನಂದ್ ಮತ್ತು ವಾಯುಗೆ ಶುಭ ಕೋರಿದ್ದಾರೆ.
2022 ರಲ್ಲಿ ತಾಯಿಯಾಗಿದ್ದ ಸೋನಂ!
2018 ರಲ್ಲಿ ಉದ್ಯಮಿ ಆನಂದ್ ಅಹುಜಾ ಜೊತೆ ವಿವಾಹವಾಗಿದ್ದು, 2022 ರಲ್ಲಿ ವಾಯುವಿಗೆ ಜನ್ಮ ನೀಡುವ ಬಳಿಕ ಸೋನಂ ಮೊದಲ ಸಹ ತಾಯಿಯಾಗಿದ್ದರು.
2015 ರಲ್ಲಿ ಪ್ರೇಮ್ ರತನ್ ಧನ್ ಪಾಯೋ ಸಿನಿಮಾದ ಪ್ರಚಾರದ ಸಂದರ್ಭದಲ್ಲಿ ನಟಿ ಸೋನಂ ಮತ್ತು ಆನಂದ ಪರಸ್ಪರ ಪರಿಚಯವಾಗಿದ್ದು, ಈ ಪರಿಚಯ ಸ್ನೇಹ-ಪ್ರೇಮವಾಗಿ ನಂತರ ಇವರಿಬ್ಬರು ದಂಪತಿಗಳಾಗಿ ಬದಲಾದರು,(ಏಜನ್ಸೀಸ್).