ಚಿತ್ರ Instagram 
ಬಾಲಿವುಡ್

ಧುರಂಧರ್ ಸಿನಿಮಾ ಇದುವರೆಗೆ ಕಂಡಿದ್ದಕ್ಕಿಂತ ವಿಭಿನ್ನ...ರಣವೀರ್ ಸಿಂಗ್ ನಟನೆಗೆ ಫಿದಾ ಆದ ಶೋಭಿತಾ Sobhita Dhulipala

ಮುಂಬೈ: ರಣವೀರ್ ಸಿಂಗ್ ನಟನೆಯ ಆದಿತ್ಯ ಧರ್ ನಿರ್ದೇಶನದ 'ಧುರಂಧರ್' (Sobhita Dhulipala) ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದ್ದು, ಬಿಡುಗಡೆಯಾದಾಗಿನಿಂದ ಚಿತ್ರವು ಭಾರತದಲ್ಲಿ 662 ಕೋಟಿ ರೂಪಾಯಿಕ್ಕೂ ಹೆಚ್ಚು ಸಂಗ್ರಹವಾಗಿದೆ. 2025ರ ಅತ್ಯಂತ ಯಶಸ್ವೀ ಭಾರತೀಯ ಚಿತ್ರವಾಗಿ ಯಶಸ್ಸನ್ನು ಪಡೆದಿದ್ದು, ಇದು ತಂಡದ ಸಾಧನೆಯನ್ನು ಬಲಪಡಿಸುತ್ತದೆ.
ಉದ್ಯಮದ ಪ್ರಮುಖ ವ್ಯಕ್ತಿಗಳು ಸಾರ್ವಜನಿಕವಾಗಿ ಚಿತ್ರವನ್ನು ಹೊಗಳಿದ್ದು, ಅನೇಕ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಅಂದಹಾಗೇ, ನಟಿ ಸೋಭಿತಾ ಧುಲಿಪಾಲ ಧುರಂಧರ್. ವಾವ್ ಉಸಿರುಕಟ್ಟುವಂತಿದೆ. ಮನಸ್ಸಿಗೆ ಮುದ ನೀಡುವಂತಿದೆ. ಸ್ಪೂರ್ತಿದಾಯಕ. ಬೇರೆ ಎಲ್ಲಾ ಸಿನಿಮಾಕ್ಕಿಂತಲೂ ವಿಭಿನ್ನವಾಗಿದೆ. ಎಲ್ಲರೂ ಅದ್ಭುತವಾಗಿ ನಟಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರೀತಿ ಜಿಂಟಾ, ಅಲ್ಲು ಅರ್ಜುನ್, ಸಂದೀಪ್ ವಂಗಾ ರೆಡ್ಡಿ ಮತ್ತು ಹೃತಿಕ್ ರೋಷನ್ ಸೇರಿದಂತೆ ಇನ್ನಿತರ ಅನೇಕ ಸೆಲೆಬ್ರಿಟಿಗಳು ಧುರಂಧರ್​ ಸಿನಿಮಾಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಇದು ಬಹುಶಃ ನಾನು ಬಹಳ ಸಮಯದಿಂದ ನೋಡಿದ ಅತ್ಯುತ್ತಮ ಚಿತ್ರಗಳಲ್ಲಿ ಒಂದಾಗಿದೆ ಎಂದು ಪ್ರೀತಿ ಜಿಂಟಾ ಕಾಮೆಂಟ್ ಮಾಡಿದ್ದಾರೆ.
ಅನುಪಮ್ ಖೇರ್ ತಮ್ಮ ಪ್ರತಿಕ್ರಿಯೆಯನ್ನು ವಿಡಿಯೋ ಮೂಲಕ ಹಂಚಿಕೊಂಡಿದ್ದು, ಈ ಚಿತ್ರದಲ್ಲಿ ನನಗೆ ಯಾವುದೇ ಪಾತ್ರವಿಲ್ಲ. ಆದರೆ, ಈ ಚಿತ್ರದ ಯಶಸ್ಸು ನನ್ನ ಹೃದಯಕ್ಕೆ ಶಾಂತಿ ನೀಡಿದೆ. ಈ ಸಿನಿಮಾದ ಯಶಸ್ಸು ಚಲನಚಿತ್ರ ಉದ್ಯಮದೊಳಗೆ ವ್ಯಾಪಕವಾದ ಪ್ರಭಾವವನ್ನು ಎತ್ತಿ ತೋರಿಸುತ್ತಿದೆ ಎಂದರು.

ನಿಲ್ಲದ ಧುರಂಧರ್​ ಓಟ!

ಆದಿತ್ಯ ಧಾರ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ 'ಧುರಂಧರ್' ಬಾಕ್ಸ್ ಆಫೀಸ್‌ನಲ್ಲಿ ನಿರಂತರ ಯಶಸ್ಸು ಕಾಣುತ್ತಿದೆ. ಡಿಸೆಂಬರ್ 5 ರಂದು ಬಿಡುಗಡೆಯಾದ ಈ ಚಿತ್ರ ಮೂರನೇ ವಾರವು ಯಶಸ್ವಿ ಪ್ರದರ್ಶನವನ್ನು ನೀಡುತ್ತಿದ್ದು, ಇತ್ತೀಚಿನ ಅಂದಾಜುಗಳ ಪ್ರಕಾರ ಚಿತ್ರವು ಮಂಗಳವಾರ 17.25 ಕೋಟಿ ರೂ. ನಿವ್ವಳ ಮೊತ್ತವನ್ನು ಸಂಗ್ರಹಿಸಿದೆ. ಆದಾಗ್ಯೂ, ಅಂಕಿ ಅಂಶಗಳ ಪ್ರಕಾರ 589.50 ಕೋಟಿ ರೂ.ಗೆ ತಲುಪಿದೆ.
ಈ ಯಶಸ್ವೀ ಚಿತ್ರದಲ್ಲಿ ಅಕ್ಷಯ್ ಖನ್ನಾ, ಸಂಜಯ್ ದತ್, ಆರ್ ಮಾಧವನ್, ಅರ್ಜುನ್ ರಾಂಪಾಲ್, ಸಾರಾ ಅರ್ಜುನ್ ಮತ್ತು ರಾಕೇಶ್ ಬೇಡಿ ನಟಿಸಿದ್ದಾರೆ. ಈ ಕಥೆಯು ಭಾರತೀಯ ಗುಪ್ತಚರ ಸಂಸ್ಥೆಯ ದೀರ್ಘಕಾಲೀನ ರಹಸ್ಯ ಕಾರ್ಯಾಚರಣೆ 'ಆಪರೇಷನ್ ಧುರಂಧರ್' ಸುತ್ತ ಸುತ್ತುತ್ತದೆ (ಏಜೆನ್ಸೀಸ್​).