ಸಾಂದರ್ಭಿಕ ಚಿತ್ರ 
ಬಾಲಿವುಡ್

ಫೋಟೋ ಮಾರ್ಫ್ ವಿರುದ್ಧ ದೂರು ದಾಖಲಿಸಿದ ಗಾಯಕಿ ಚಿನ್ಮಯಿ ಶ್ರೀಪಾದ.. Morphed photo

ನವದೆಹಲಿ: ಗಾಯಕಿ ಹಾಗೂ ಡಬ್ಬಿಂಗ್ ಕಲಾವಿದೆ ಚಿನ್ಮಯಿ ಶ್ರೀಪಾದ ಅವರು ತಮ್ಮ ಜೀವನದಲ್ಲಾದ ಅಹಿತಕರ ಘಟನೆಗಳ ಬಗ್ಗೆ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಬುಧವಾರ (ಡಿ.10) ರಂದು ವ್ಯಕ್ತಿಯೊಬ್ಬ ಅವರ ಮಾರ್ಫ್​ ಮಾಡಿದ ಫೋಟೊವನ್ನು (Morphed photo) ಆನ್​ಲೈನ್​ನಲ್ಲಿ ಪೋಸ್ಟ್ ಮಾಡಿದ್ದು, ತಮಗೆ ಹೇಗೆ ಕಿರುಕುಳ ನೀಡಲಾಗುತ್ತಿದೆ ಎಂಬುದರ ಬಗ್ಗೆ ಮಾಹಿತಿ ನೀಡಿದ್ದಾರೆ.
ಈ ಘಟನೆ ಕುರಿತು ಹೈದರಾಬಾದ್​ ನಗರ ಪೊಲೀಸ್​ ಆಯುಕ್ತ ವಿಸಿ ಸಜ್ಜನರ್​ ಅವರನ್ನು ಟ್ಯಾಗ್​ ಮಾಡಿದ ಚಿನ್ಮಯ್​, ಇತ್ತೀಚಿನ ವಾರಗಳಲ್ಲಿ ತನಗೆ ಬರುತ್ತಿರುವ ಆನ್​ಲೈನ್​ ಬೆದರಿಕೆಗಳ ಕುರಿತು ವಿಡಿಯೋವನ್ನು ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಚಿನ್ಮಯಿ ಶ್ರೀಪಾದರಿಗೆ ಕೊಲೆ ಬೆದರಿಕೆ

ಕೆಲವು ವಾರಗಳ ಹಿಂದೆ ಅವರ ಪತಿ ನಿರ್ಮಾಪಕ, ರಾಹುಲ್ ರವೀಂದ್ರನ್ ಮಂಗಳಸೂತ್ರದ ಬಗ್ಗೆ ಕಾಮೆಂಟ್ ಮಾಡಿದ ನಂತರ ದ್ವೇಷ ಇನ್ನಷ್ಟು ಉಲ್ಬಣಗೊಂಡಿದೆ. ಅಂದಿನಿಂದ ಕುಟುಂಬದ ವಿರುದ್ಧ ಹಲವಾರು ಟ್ರೋಲ್​ಗಳು ಹೆಚ್ಚಾಗಿವೆ ಎಂದು ಗಾಯಕಿ ಆರೋಪ ಮಾಡಿದ್ದಾರೆ.
ಆದಾಗ್ಯೂ, ಮಸುಕಾದ ಮಾರ್ಫ್ ಮಾಡಿದ ವಿಡಿಯೋವನ್ನು ಆನ್​ಲೈನ್​ನಲ್ಲಿ ಹಂಚಿಕೊಂಡ ನಂತರ, ನಾನು ಇಂದು ಒಂದು ಪುಟದಿಂದ ಮಾರ್ಫ್ ಮಾಡಿದ ಚಿತ್ರವನ್ನು ತೆಗೆದುಕೊಂಡಿದ್ದೇನೆ ಮತ್ತು ಪೊಲೀಸರನ್ನು ಟ್ಯಾಗ್ ಮಾಡಿದ್ದೇನೆ. ಅವರು ಕಾನೂನು ಕ್ರಮವನ್ನು ಕೈಗೊಳ್ಳುತ್ತದೆಯೋ ಇಲ್ಲವೇ ಎಂಬುದು ಸಮಸ್ಯೆಯಲ್ಲ. ಬದಲಾಗಿ ಯಾವುದೇ ಹುಡುಗಿಯರು ಅಥವಾ ಅವರ ಕುಟುಂಬದವರನ್ನು ರಕ್ಷಿಸಿಕೊಳ್ಳಲು ಈ ವಿಡಿಯೋವನ್ನು ಮಾಡುತ್ತಿದ್ದೇನೆ. ಕಳೆದ 8-10 ವಾರಗಳಿಂದ ನಮ್ಮ ಕುಟುಂಬಕ್ಕೆ ಕಿರುಕುಳ ನೀಡಲು ಅವರಿಗೆ ಹಣ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ವಿಡಿಯೋದಲ್ಲೇನಿದೆ?

ನನ್ನ ಮೇಲೆ ದೌರ್ಜನ್ಯ ಎಸಗಲಾಗಿದೆ. ನನ್ನ ಮಕ್ಕಳಿಗೆ ಕೊಲೆ ಬೆದರಿಕೆ ಹಾಕಿದ್ದಾರೆ. ತಮಗೆ ಇಷ್ಟವಿಲ್ಲದಿದ್ದರೆ ಮಹಿಳೆಯರು ಎಂದಿಗೂ ಮಕ್ಕಳನ್ನು ಹೊಂದಬಾರದು. ಆಕಸ್ಮಾತ್​ ಆಗಿ ಹೊಂದಿದ್ದರೆ ಅವುಗಳನ್ನು ಸಾಯಿಸಬೇಕು ಎಂದು ಹೇಳಿದ ಕೆಲವರ ವಿರುದ್ಧ ನಾನು ಕೇಸು ದಾಖಲಿಸಿದ್ದೇನೆ ಎಂದು ವಿಡಿಯೋದಲ್ಲಿ ಗಾಯಕಿ ತಮಗಾದ ಅನುಭವವನ್ನು ತಿಳಿಸಿದ್ದಾರೆ.
ಗೀತರಚನೆಕಾರರೊಬ್ಬರ ಕಿರುಕುಳದ ಬಗ್ಗೆ ಮಾತನಾಡಿದಾಗಿನಿಂದ ನನ್ನ ಮೇಲೆ ದ್ವೇಷ ಸಾಧಿಸಲಾಗುತ್ತಿದೆ. ಬಹಳಷ್ಟು ಜನರು ನನ್ನನ್ನು ನಿಂದಿಸಿದ್ದಾರೆ. ಅವರಿಗೆ ರಾಜಕೀಯ ಗುಂಪುಗಳು ಹಣವನ್ನು ನೀಡಿದೆ. ನಗ್ನತೆಯ ಮಾರ್ಫ್​ ಮಾಡಿದ ಪೋಟೋವನ್ನು ಹಂಚಿಕೊಳ್ಳುವಂತಹ ಘಟನೆಗಳು ಸಮಾಜದಲ್ಲಿ ನಡೆಯುತ್ತಿರುತ್ತವೆ. ಪುರುಷರು ನಮ್ಮನ್ನು ಸಾರ್ವಜನಿಕ ಸ್ಥಳಗಳಿಂದ ಹೊರಗೆ ದಬ್ಬಲು ಈ ರೀತಿ ಮಾಡುತ್ತಾರೆ ಎಂದು ಹೇಳಿದರು.
ಭವಿಷ್ಯದಲ್ಲಿ ಇದು ತುಂಬಾ ಸಮಸ್ಯೆಯಾಗಲಿದೆ. ಅಲ್ಲಿ ಪುರುಷರು ಯಾವಾಗಲು ತಂತ್ರಜ್ಞಾನ, ಶಕ್ತಿಯನ್ನು ಬಳಸಿಕೊಂಡು ತಮಗೆ ಇಷ್ಟವಿಲ್ಲದ ಮಹಿಳೆಯರ ಬಗ್ಗೆ ಕಡೆಗಣಿಸಲು ಪ್ರಾರಂಭಿಸುತ್ತಾರೆ. ಈ ಮೊದಲು ಅವರನ್ನು ಮಾಟಗಾತಿಯರು, ವೇಶ್ಯೆಯರು ಎಂದು ಕರೆಯುತ್ತಿದ್ದರು. ಪುರುಷ ವ್ಯಕ್ತಿ ಮಹಿಳೆಯನ್ನು ಬಯಸಿದ ನಂತರ ಆಕೆ ಸಿಗದಿದ್ದರೆ, ಹೆಣ್ಣಿನ ಜೀವನವು ಬಹಳ ಕಷ್ಟಕರವಾಗುತ್ತಿತ್ತು ಎಂದು ಹೇಳಿದ್ದಾರೆ.
ಡೀಪ್‌ಫೇಕ್‌ಗಳು ಮತ್ತು ಕೃತಕ ಬುದ್ಧಿಮತ್ತೆಯ ಹೆಚ್ಚಳದಿಂದ ಮಹಿಳೆಯರೊಂದಿಗೆ ಭಿನ್ನಾಭಿಪ್ರಾಯ ಹೊಂದಿದಾಗ ಆಕೆ ಅಪಾಯಕ್ಕೆ ಸಿಲುಕುವುದು ಹೆಚ್ಚುತ್ತಿದೆ. ಮಹಿಳೆಯಾಗಿರಲಿ, ಹುಡುಗಿಯರಾಗಿರಲಿ ಈ ರೀತಿಯ ಕಿರುಕುಳವನ್ನು ಅನುಭವಿಸಿದರೆ ಕಾನೂನು ಕ್ರಮ ಕೈಗೊಳ್ಳಲು ಹಿಂಜರಿಯಬಾರದು ಎಂದು ಚಿನ್ಮಯಿ ಒತ್ತಾಯಿಸಿದ್ದಾರೆ.

ಪತಿ ರಾಹುಲ್ ರವೀಂದ್ರನ್ ಹೇಳಿದ್ದೇನು?

ನವೆಂಬರ್‌ನಲ್ಲಿ 'ದಿ ಗರ್ಲ್‌ಫ್ರೆಂಡ್' ಚಿತ್ರದ ಪ್ರಚಾರದ ಸಂದರ್ಭದಲ್ಲಿ ನಿರ್ದೇಶಕ ರಾಹುಲ್ ರವೀಂದ್ರನ್, ಮಂಗಳಸೂತ್ರದ ಬಗ್ಗೆ ಮಾಡಿದ ಕಮೆಂಟ್​ ಸಾಮಾಜಿಕ ಜಾಲತಾಣದಲ್ಲಿ ಗಲಭೆಯನ್ನು ಎಬ್ಬಿಸಿತು. ನಮ್ಮ ಮದುವೆಯ ನಂತರ, ನಾನು ನನ್ನ ಪತ್ನಿ ಚಿನ್ಮಯಿಗೆ ಮಂಗಳಸೂತ್ರ ಧರಿಸಬೇಕೆ ಅಥವಾ ಬೇಡವೇ ಎಂಬುದು ಅವಳ ಆಯ್ಕೆ ಎಂದು ಹೇಳಿದ್ದೆ. ಅಂದಿನಿಂದ ಹಲವಾರು ಟ್ರೋಲ್​ಗಳು ಆಗುತ್ತಿವೆ ಎಂದು ಸ್ಪಷ್ಟನೆ ನೀಡಿದ್ದಾರೆ (ಏಜೆನ್ಸೀಸ್).