ಅಕ್ಷಯ್ ಪುತ್ರಿ ನಗ್ನ ಫೋಟೊ ಕೇಳಿದ್ದ ಆರೋಪಿ
- ಅಕ್ಷಯ್ ಪುತ್ರಿ ನಗ್ನ ಫೋಟೊ ಕೇಳಿದ್ದ ಆರೋಪಿ
- ಆನ್ಲೈನ್ ಗೇಮ್ ಮೂಲಕ ಪರಿಚಯವಾಗಿದ್ದ ವ್ಯಕ್ತಿ
- ಮಹಾರಾಷ್ಟ್ರ ಸೈಬರ್ ಪೊಲೀಸರ ವಶಕ್ಕೆ ಆರೋಪಿ
ಮುಂಬೈ: ಭಾರತದಲ್ಲಿ ಇಂರ್ಟನೆಟ್ ಕ್ರಾಂತಿಯಾಗಿ, ಯಾವಾಗ ಎಲ್ಲರ ಕೈಯಲ್ಲಿ ಸ್ಮಾರ್ಟ್ಫೋನ್ಗಳು ಬಂದವೋ ಆಗ, ಇದರ ಉಪಯೋಗಕ್ಕಿಂತ ಆಘಾತಕಾತಿ ಸಂಗತಿಗಳೇ ಹೆಚ್ಚು ನಡೆಯತೊಡಗಿದವು ಎಂದರೆ ತಪ್ಪಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹುಡುಗಿಯರಿಗೆ ಮಾನಸಿಕ ಹಿಂಸೆ ನೀಡುವುದರಿಂದ ಹಿಡಿದು ಲೈಗಿಂಕ ದೌರ್ಜನ್ಯ ನಡೆಸಲು ಈ ಸೋಷಿಯಲ್ ಮೀಡಿಯಾ ವೇದಿಕೆಗಳನ್ನು ಬಳಸಿಕೊಂಡ ಉದಾಹರಣೆ ಬಹಳಷ್ಟಿದೆ.
ಈಗ ಇಂತಹದ್ದೆ ಒಂದು ಸೈಬರ್ ಬುಲ್ಲಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಒಬ್ಬನನ್ನು ಮಹಾರಾಷ್ಟ್ರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಅಕ್ಷಯ್ ಕುಮಾರ್ ಮಗಳ ನಗ್ನ ಫೋಟೊ ಕೇಳಿದ್ದ ಪಾಪಿ!
ಕಳೆದ ವರ್ಷ ಅಕ್ಟೋಬರ್ನಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ (Akshay Kumar Daughter), ತಮ್ಮ 13 ವರ್ಷದ ಮಗಳು, ನಿತಾರಾಗೆ ಆನ್ಲೈನ್ ಗೇಮ್ನಲ್ಲಿ ಒಬ್ಬ ವ್ಯಕ್ತಿ ಆಕೆಯ ನಗ್ನ ಫೋಟೊ ಕಳಿಸುವಂತೆ ಒತ್ತಾಯ ಮಾಡುತ್ತಿದ್ದಾಗಿ ಸೈಬರ್ ವಿಂಗ್ನಲ್ಲಿ ದೂರನ್ನು ದಾಖಲಿಸಿದ್ದರು. ಈಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಒಬ್ಬನನ್ನು ಬಂಧಿಸಲಾಗಿದೆ ಎಂದು ಸೈಬರ್ ಪೊಲೀಸರು ತಿಳಿಸಿದ್ದಾರೆ.
ಆರೋಪಿಯನನ್ನು ಬಂಧಿಸಿದ್ದೆವೆ: ಸೈಬರ್ ಪೊಲೀಸ್
ಅಕ್ಷಯ್ ಕುಮಾರ್ ಅವರ ದೂರನ್ನು ಆಧರಿಸಿ ತನಿಖೆ ನಡೆಸಿದ ಮಹಾರಾಷ್ಟ್ರ ಸೈಬರ್ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿರುವುದಾಗಿ ಮಹಾರಾಷ್ಟ್ರ ಸೈಬರ್ ಮುಖ್ಯಸ್ಥ ಯಶಸ್ವಿ ಯಾದವ್ ತಿಳಿಸಿದ್ದಾರೆ.
ಬಂಧಿತ ಆರೋಪಿಯ ಹೆಸರನ್ನು ಬಹಿರಂಗ ಪಡಿಸದ ಅವರು, ಬಂಧಿತನ ವಿರುದ್ಧ ನಟ ಅಕ್ಷಯ್ ಕುಮಾರ್ ಮಗಳಾದ ನಿರಾತಾಗೆ ಗೇಮಿಂಗ್ ಮೂಲಕ ಪರಿಚಯವಾಗಿ, ನಂತರ ಆಕೆ ಜೊತೆ ಅಶ್ಲೀಲ ಸಂದೇಶ ಕಳುಹಿಸಿದ ಆರೋಪಗಳಿವೆ, ನಾವು ತನಿಖೆ ನಡೆಸುತ್ತಿದ್ದು, ತಪ್ಪು ಮಾಡಿದ್ದು ಕಂಡು ಬಂದಲ್ಲಿ ಕಠಿಣ ಶಿಕ್ಷೆ ನೀಡಲಿದ್ದೆವೆ ಎಂದು ತಿಳಿಸಿದ್ದಾರೆ,(ಏಜನ್ಸೀಸ್).