- ಧುರಂಧರ್ ಯಶಸ್ಸು ಸಿಕ್ಕರೂ ಯಾವುದೇ ಹೊಸ ಪ್ರಾಜೆಕ್ಟ್ ಒಪ್ಪಿಕೊಂಡಿಲ್ಲ
- ಧುರಂಧರ್ 2 ಚಿತ್ರದ ರಿಲೀಸ್ಗಾಗಿ ಕಾಯುತ್ತಿದ್ದಾರೆ ಯುವ ನಟಿ
- ವದಂತಿಗಳ ಕುರಿತು ಸ್ವತಃ ಸಾರಾ ಮ್ಯಾನೇಜರ್ ಸ್ಪಷ್ಟನೆ
Sara Arjun: ತಮಿಳು ಚಿತ್ರರಂಗದಲ್ಲಿ ಬಾಲನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟು, ಅಭಿಮಾನಿಗಳ ಹೃದಯದಲ್ಲಿ ಅಳಿಸಲಾಗದ ಛಾಪು ಮೂಡಿಸಿರುವ ನಟಿ ಸಾರಾ ಅರ್ಜುನ್, ಇತ್ತೀಚೆಗಷ್ಟೇ ರಣವೀರ್ ಸಿಂಗ್ ಅಭಿನಯದ ಬ್ಲಾಕ್ಬಸ್ಟರ್ ಹಿಟ್ 'ಧುರಂಧರ್' ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದರು. ಈ ಸಿನಿಮಾದಲ್ಲಿ ಸಿಕ್ಕ ಅಭೂತಪೂರ್ವ ಯಶಸ್ಸಿನಿಂದ ಸದ್ಯ ಸಾರಾ ಅದೃಷ್ಟವೇ ಬದಲಾಗಿದೆ. ಒಂದಷ್ಟು ಬಿಗ್ ಬಜೆಟ್ನ ಚಿತ್ರಗಳಲ್ಲಿ ನಟಿಸುವ ಅವಕಾಶಗಳು ಯುವ ನಟಿಯನ್ನು ಹುಡುಕಿಕೊಂಡು ಬರುತ್ತಿವೆ. ಆದರೆ, ಇದನ್ನು ನಟಿಯೇ ಒಪ್ಪಿಕೊಳ್ಳದಿರುವುದು ಸದ್ಯ ಸಿನಿಪ್ರಿಯರಲ್ಲಿ ಆಶ್ಚರ್ಯ ತಂದಿದೆ.
ರಣವೀರ್ ಸಿಂಗ್ ಜೊತೆ ಧುರಂಧರ್ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸಿದ ಸಾರಾ, ತಮ್ಮ ಪಾತ್ರದ ಮೂಲಕ ನೋಡುಗರನ್ನು ಸೆಳೆದಿದ್ದು ವಿಶೇಷ. ಇದೊಂದು ಸಿನಿಮಾದಿಂದಲೇ ಅಪಾರ ಯಶಸ್ಸು ಗಳಿಸಿರುವ ಯುವ ನಟಿಯನ್ನು ಸಾಕಷ್ಟು ಹೊಸ ಹೊಸ ಆಫರ್ಗಳು ಹುಡುಕಿಕೊಂಡು ಬಂದಿವೆ. ವರದಿಗಳ ಪ್ರಕಾರ, ಆಕೆಯ ಯಾವುದೇ ನೂತನ ಪ್ರಾಜೆಕ್ಟ್ಗೆ ಸಹಿ ಹಾಕಿಲ್ಲ ಎನ್ನಲಾಗಿದೆ. ಈ ಕುರಿತಂತೆ ಆಕೆಯ ಮ್ಯಾನೇಜರ್ಗೆ ಸ್ಪಷ್ಟಪಡಿಸಿದ್ದಾರೆ.
ಧುರಂಧರ್ ರಿಲೀಸ್ಗೂ ಮೊದಲೇ ಸಾರಾ ಎರಡು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದರು. ಒಂದು 'ಯುಫೋರಿಯಾ' ಮತ್ತೊಂದು 'ಮ್ಯಾಜಿಕ್'. ಇದರಲ್ಲಿ ಯುಫೋರಿಯಾ ತೆರೆಕಂಡು, ಬಾಕ್ಸ್ ಆಫೀಸ್ನಲ್ಲಿ ಮುಗ್ಗರಿಸಿತು. ಇನ್ನು ಮ್ಯಾಜಿಕ್ ತೆರೆಗೆ ಬರಲು ಸಿದ್ಧವಾಗಿದೆ. ಮತ್ತೊಂದೆಡೆ, ಕಳೆದ ಕೆಲವು ದಿನಗಳಿಂದ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳ ಕುರಿತು ಸ್ವತಃ ಸಾರಾ ಅರ್ಜುನ್ ಅವರ ಮ್ಯಾನೇಜರ್ ಮಾಹಿತಿ ನೀಡಿದ್ದಾರೆ.
ಮ್ಯಾನೇಜರ್ ಮುಖೇಶ್ ಛಾಬ್ರಾ ಎಕ್ಸ್ (ಹಿಂದಿನ ಟ್ವಿಟರ್) ಖಾತೆಯಲ್ಲಿ ಟ್ವೀಟ್ ಮಾಡಿ, ಪ್ರಸ್ತುತ ಸಾರಾ ಯಾವುದೇ ಹೊಸ ಹಿಂದಿ ಚಿತ್ರಕ್ಕೆ ಸಹಿ ಹಾಕಿಲ್ಲ ಮತ್ತು 'ಧುರಂಧರ್ 2' ಬಿಡುಗಡೆಗಾಗಿ ಕಾಯುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು. ಈ ಮೂಲಕ ಸಾರಾ ಅರ್ಜುನ್ ಎರಡು ಬಿಗ್ ಬಜೆಟ್ನ ಬಾಲಿವುಡ್ ಸಿನಿಮಾಗಳಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ ಎಂಬ ವದಂತಿಗಳನ್ನು ತಳ್ಳಿಹಾಕಿದರು,(ಏಜೆನ್ಸೀಸ್).