ರಾಷ್ಟ್ರೀಯ ಸ್ವಯಂಸೇವಕ ಸಂ ನೂರು ವರ್ಷಗಳನ್ನು ಪೂರೈಸಿರುವ ಸಮಯದಲ್ಲಿ ಬಾಲಿವುಡ್ನಲ್ಲಿ ಬ್ಯಾಕ್ ಟು ಬ್ಯಾಕ್ ಸಂದ ಕುರಿತ ಚಿತ್ರಗಳು ಬರುತ್ತಿವೆ. ಆಶಿಶ್ ಮಾಲ್ ನಿರ್ದೇಶನದ "ಶತಕ್' ಸಾಕ್ಷ್ಯಚಿತ್ರವಾಗಿದ್ದರೂ ಸಿನಿಮಾಗಳಂತೆಯೇ ಇದೇ ಫೆ. 20ರಂದು ದೇಶಾದ್ಯಂತ ಬಿಡುಗಡೆ ಮಾಡಲಾಗಿತ್ತು. ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿತ್ತು. ಅದರ ಬೆನ್ನಲ್ಲೇ ಮತ್ತೊಂದು ಚಲನಚಿತ್ರ ತೆರೆಗೆ ಬರಲು ರೆಡಿಯಾಗಿದೆ. ಹೆಸರು "ಆಖ್ರೀ ಸವಾಲ್'. ತಮ್ಮ ಕರಿಯರ್ನ ಎರಡನೇ ಇನ್ನಿಂಗ್ಸ್ನಲ್ಲಿ ಭಿನ್ನ, ವಿಭಿನ್ನ ಪಾತ್ರಗಳಲ್ಲಿ ಮಿಂಚುತ್ತಿರುವ ಬಾಲಿವುಡ್ ನಟ ಸಂಜಯ್ ದತ್, ಈ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಜತೆಗೆ ನಿಖಿಲ್ ನಂದಾ ಜತೆ ಚಿತ್ರದ ನಿರ್ಮಾಣದಲ್ಲೂ ಕೈಜೋಡಿಸಿದ್ದಾರೆ. ಮರಾಠಿ ಸಿನಿಮಾ "ಪಿಕಾಸೋ' ಖ್ಯಾತಿಯ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಅಭಿಜೀತ್ ಮೋಹನ್ ವಾರಂಗ್ ಈ ಚಿತ್ರ ನಿರ್ದೇಶಿಸಿದ್ದು, ಸಂಜಯ್ ದತ್ ಜತೆ ಅಮಿತ್ ಸಧ್, ನಮಷಿ ಚಕ್ರಬೊರ್ತಿ, ಸಮೀರಾ ರೆಡ್ಡಿ, ನೀತುಚಂದ್ರ, ತ್ರಿಧಾ ಚೌಧರಿ ಪ್ರಮುಖ ತಾರಾಗಣದಲ್ಲಿ ನಟಿಸಿದ್ದಾರೆ. ಇತ್ತೀಚೆಗಷ್ಟೆ ಟೀಸರ್ ಬಿಡುಗಡೆಯಾಗಿದ್ದು, ಕುತೂಹಲ ಮೂಡಿಸುವಂತಿದೆ. ಇದೇ ಮೇ.8ರಂದು "ಆಖ್ರೀ ಸವಾಲ್' ಬಿಡುಗಡೆಯಾಗಲಿದೆ.
ಚಿತ್ರದಲ್ಲೇನಿದೆ?
ಪ್ರೊೆಸರ್ ಗೋಪಾಲ್ ನಾಡಕರ್ಣಿ ಪಾತ್ರದಲ್ಲಿ ಸಂಜಯ್ ದತ್ ನಟಿಸಿದ್ದು, ಅವರ ಶಿಷ್ಯ ವಿಕ್ಕಿಯಾಗಿ ನಮಷಿ ಚಕ್ರಬೊರ್ತಿ ಕಾಣಿಸಿಕೊಳ್ಳಲಿದ್ದಾರೆ. ಆರ್ಎಸ್ಎಸ್ 100 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಒಂದು ಥೀಸೀಸ್ ಬರೆಯಬೇಕೆಂದುಕೊಂಡಿದ್ದೇನೆ ಎಂದು ವಿಕ್ಕಿ, ತನ್ನ ಗುರು ಪ್ರೊ. ಗೋಪಾಲ್ ಬಳಿ ಕೇಳುತ್ತಾನೆ. ಅದಕ್ಕೆ ಗುರು ಒಪು$್ಪತ್ತಾರೆ. ಆದರೆ, ವಿಕ್ಕಿ ಬರೆದ ಪ್ರಬಂಧವು ಸತ್ಯಕ್ಕೆ ದೂರವಾಗಿದ್ದು, ಹಲವು ವಿವಾದಾತ್ಮಕ ಅಂಶಗಳಿರುವುದನ್ನು ಮನಗಂಡು, ಪ್ರೊಫೆಸರ್ ಆತನ ಪ್ರಬಂಧವನ್ನು ತಿರಸ್ಕರಿಸುತ್ತಾರೆ. ಮತ್ತೊಂದೆಡೆ ತನ್ನ ಪ್ರಬಂಧವೇ ಸತ್ಯವೆಂದು ಶಿಷ್ಯ, ಗುರುವಿನ ವಿರುದ್ಧ ತಿರುಗಿಬೀಳುತ್ತಾನೆ. ಕ್ರಮೇಣ ಈ ವಿಷಯ ದೊಡ್ಡ ಮಟ್ಟದಲ್ಲಿ ಪ್ರಚಾರ ಪಡೆದು, ಕೆಲವರು ಗುರು ಬೆಂಬಲಕ್ಕೆ ನಿಂತರೆ, ಕೆಲವರು ಶಿಷ್ಯನೇ ಸರಿ ಎನ್ನುತ್ತಾರೆ. 1948ರಲ್ಲಿ ಆರ್ಎಸ್ಎಸ್ಅನ್ನು ಏಕೆ ಬ್ಯಾನ್ ಮಾಡಲಾಗಿತ್ತು? ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಸಂದ ಪಾತ್ರವೇನು? ಇದೊಂದು ರಾಷ್ಟ್ರವಿರೋಧಿ ಸಂಟನೆ ಅಲ್ಲವೇ? ಎಂಬೆಲ್ಲ ಪ್ರಶ್ನೆಗಳನ್ನು ಶಿಷ್ಯ, ಗುರು ಬಳಿ ಕೇಳುತ್ತಾನೆ. ಹಾಗಾದರೆ, ತನಗೇ ತಿರುಮಂತ್ರ ಹೇಳಿದ ಶಿಷ್ಯನಿಗೆ ಈ ಗುರು ಸರಿಯಾದ ಉತ್ತರ ನೀಡುತ್ತಾನಾ? ಎಂಬುದರ ಸುತ್ತ "ಆಖ್ರೀ ಸವಾಲ್' ಸಾಗುತ್ತದೆ.
ಸಮೀರಾ, ನೀತು ಕಮ್ಬ್ಯಾಕ್
ಕನ್ನಡದ ಜತೆಗೆ ತಮಿಳು, ತೆಲುಗು, ಹಿಂದಿಯಲ್ಲಿ 30ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದ ಬಾಲಿವುಡ್ ನಟಿ ಸಮೀರಾ ರೆಡ್ಡಿ, ಇದೀಗ "ಆಖ್ರೀ ಸವಾಲ್' ಮೂಲಕ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. 2013ರಲ್ಲಿ ಬಿಡುಗಡೆಯಾಗಿದ್ದ "ವರದನಾಯಕ' ಬಳಿಕ ಅವರು 2024ರಲ್ಲಿ "ನಾಮ್' ಎಂಬ ಚಿತ್ರದಲ್ಲಿ ನಟಿಸಿದ್ದರೂ, ಅದು ರಿಲೀಸ್ ಆಗಿರಲಿಲ್ಲ. ಹೀಗಾಗಿ 47 ವರ್ಷದ ಸಮೀರಾ 13 ವರ್ಷಗಳ ಬಳಿಕ ಮತ್ತೆ ಬೆಳ್ಳಿತೆರೆಯಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಹಾಗೇ ಕನ್ನಡದ "ಪವರ್' ಚಿತ್ರದಲ್ಲಿ "ವೈ ವೈ' ಹಾಡಿಗೆ ಕುಣಿದು ಕುಪ್ಪಳಿಸಿದ್ದ ಮತ್ತೊಬ್ಬ ಬಹುಭಾಷಾ ನಟಿ ನೀತು ಚಂದ್ರು ಸಹ "ಆಖ್ರೀ ಸವಾಲ್' ಮೂಲಕ ಐದು ವರ್ಷಗಳ ನಂತರ ಕಮ್ಬ್ಯಾಕ್ ಮಾಡುತ್ತಿದ್ದಾರೆ. 2017ರಲ್ಲಿ ತೆರೆಗೆ ಬಂದ ತಮಿಳಿನ "ಬ್ರಹ್ಮ.ಕಾಂ' ಬಳಿಕ ಹಾಲಿವುಡ್ಗೆ ಹಾರಿದ್ದ ನೀತು 2021ರಲ್ಲಿ "ನೆವರ್ ಬ್ಯಾಕ್ ಡೌನ್- ರಿವೋಲ್ಟ್'ನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಐದು ವರ್ಷಗಳ ನಂತರ ಮತ್ತೆ ಬಾಲಿವುಡ್ಗೆ ಕಮ್ಬ್ಯಾಕ್ ಮಾಡಿದ್ದಾರೆ.