Sambhavna Seth ಚಿತ್ರ Instagram 
ಬಾಲಿವುಡ್

7 ಬಾರಿ IVF ವೈಫಲ್ಯ, ಗರ್ಭಪಾತದ ನೋವು; ಕೊನೆಗೂ ಸರೊಗಸಿ ಮೂಲಕ ತಾಯಿಯಾಗುತ್ತಿರುವ ನಟಿ ಸಂಭಾವನಾ ಸೇಠ್! Sambhavna Seth

Sambhavna Seth: ಹಲವು ವರ್ಷಗಳ ಕಠಿಣ ಹೋರಾಟ ಮತ್ತು ನೋವಿನ ನಂತರ ನಟಿ ಸಂಭಾವನಾ ಸೇಠ್ ಬಾಡಿಗೆ ತಾಯ್ತನದ ಮೂಲಕ ತಾಯಿಯಾಗುತ್ತಿರುವ ಸುದ್ಧಿಯನ್ನು ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಸಂತೋಷದ ಸುದ್ದಿಯನ್ನು ನೀಡಿದ್ದಾರೆ.

ಪೋಸ್ಟ್​ನಲ್ಲೇನಿದೆ?

ನಾವೀಗ ಪೋಷಕರಾಗುತ್ತಿದ್ದೇವೆ. ಪ್ರೀತಿ, ಭರವಸೆ ಮತ್ತು ಸರೊಗಸಿ ಮೂಲಕ ನಮ್ಮ ಅತ್ಯಂತ ಸುಂದರವಾದ ಬದುಕು ನಿರ್ಮಾಣವಾಗುತ್ತಿದೆ. ಈಗಾಗಲೇ ಕೌಂಟ್​ಡೌನ್​ ಆರಂಭವಾಗಿದೆ ಎಂದು ಹೇಳುವ ಮೂಲಕ ನಟಿ ಶುಭ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

ಏಳು ವಿಫಲ ಐವಿಎಫ್ (IVF) ಮತ್ತು ಗರ್ಭಪಾತದ ನೋವು

ಸಂಭಾವನಾ ಸೇಠ್ ಅವರ ತಾಯ್ತನದ ಹಾದಿ ಅಷ್ಟು ಸುಲಭವಾಗಿರಲಿಲ್ಲ. ಕಳೆದ ಕೆಲವು ವರ್ಷಗಳಿಂದ ಅವರು ಮಗುವಿಗಾಗಿ ಸತತ ಪ್ರಯತ್ನ ನಡೆಸಿದ್ದರು. ಈ ಪ್ರಕ್ರಿಯೆಯಲ್ಲಿ ಅವರು ಬರೋಬ್ಬರಿ ಏಳು ಬಾರಿ ಐವಿಎಫ್ (IVF) ಕಾರ್ಯವಿಧಾನಗಳಿಗೆ ಒಳಗಾಗಿದ್ದರು. ದುರದೃಷ್ಟವಶಾತ್, ಈ ಎಲ್ಲಾ ಪ್ರಯತ್ನಗಳು ವಿಫಲವಾಗಿದ್ದರಿಂದ ಗರ್ಭಪಾತದ ಕಹಿ ನೋವನ್ನು ಅನುಭವಿಸಿದ್ದರು.
ಆದಾಗ್ಯೂ, ಈ ಪ್ರಕ್ರಿಯೆ ತುಂಬಾ ನೋವಿನಿಂದ ಕೂಡಿತ್ತು. ನನ್ನ ದೇಹದಲ್ಲಿ ತೂಕ ಹೆಚ್ಚಾಯಿತು. ಇದು ಸುಮಾರು 8-10 ದಿನಗಳ ಕಾಲ ನಡೆಯುತ್ತದೆ. ಜೊತೆಗೆ ಹೊಟ್ಟೆ ಅಥವಾ ತೊಡೆಗಳಿಗೆ ಇಂಜೆಕ್ಷನ್​ ಅನ್ನು ನೀಡುತ್ತಾರೆ. ಇದಾದ ಬಳಿಕ ವೈದ್ಯರು 10 ದಿನಗಳ ಕಾಲ ವಿಶ್ರಾಂತಿ ಪಡೆಯಲು ಸೂಚನೆ ನೀಡುತ್ತಾರೆ.
ಈ ಇಂಜೆಕ್ಷನ್​ಗಳು ತೂಕವನ್ನು ಹೆಚ್ಚಿಸಿ, ದೇಹವನ್ನು ಆಘಾತಕ್ಕೆ ಒಳಗಾಗಿಸುತ್ತವೆ. ಇದರಿಂದ ಮಾನಸಿಕ ಸ್ಥಿತಿಯೂ ದುರ್ಬಲಗೊಳ್ಳುತ್ತದೆ. ನಂತರ ಅದರಿಂದ ಹೊರಬರಲು ನೀವು ಅನೇಕ ರೀತಿಯಲ್ಲಿ ಪ್ರಯತ್ನಪಡಬೇಕಾಗುತ್ತದೆ ಎಂದು ಪೋಸ್ಟ್​ನಲ್ಲಿ ಹಂಚಿಕೊಂಡಿದ್ದಾರೆ.
ಅವಿನಾಶ್ ದ್ವಿವೇದಿ ಕೂಡ ಯಾವಾಗಲೂ ಮಗುವನ್ನು ಬಯಸುತ್ತಿದ್ದರು. ಆದರೆ, ಅವರು ಎಂದಿಗೂ ಒತ್ತಡವನ್ನು ಹೇರಲಿಲ್ಲ. ಬದಲಾಗಿ ಪ್ರತಿ ಹಿನ್ನಡೆಯ ನಂತರವೂ ನಾನು ಆಶಾವಾದಿಯಾಗುವಂತೆ ಮಾಡಿದರು ಎಂದು ಸಂಭಾವನಾ ಸಂದರ್ಶನದಲ್ಲಿ ಹೇಳಿದರು.
ಕೆಲಸದ ವಿಚಾರದಲ್ಲಿ, ಸಂಭಾವನಾ ಕೊನೆಯ ಬಾರಿಗೆ 2025 ರಲ್ಲಿ ವಾಣಿ ಕಪೂರ್ ನಿರ್ದೇಶನದ ಮಂಡಲ ಮರ್ಡರ್ಸ್ ಚಿತ್ರದಲ್ಲಿ ಕಾಣಿಸಿಕೊಂಡರು (ಏಜೆನ್ಸೀಸ್​).