ಅರ್ಮಾನ್​ ಮಲಿಕ್​ ಚಿತ್ರವನ್ನು (Instagram ನಿಂದ ತೆಗೆದುಕೊಳ್ಳಲಾಗಿದೆ) 
ಬಾಲಿವುಡ್

ಸಲ್ಮಾನ್ ಖಾನ್ ಅವರ ಕಠಿಣ ವ್ಯಾಯಾಮ ವೇಳಾಪಟ್ಟಿ ಅನುಸರಿಸಿ 15 ಕೆ.ಜಿ ತೂಕ ಇಳಿಸಿಕೊಂಡೆ: ಗಾಯಕ ಅರ್ಮಾನ್​ ಮಲಿಕ್​ Bollywood

ಪ್ರಮುಖ ಮುಖ್ಯಾಂಶಗಳು

  • ಅರ್ಮಾನ್​ ಮಲಿಕ್​ ತಮ್ಮ ಗೀತರಚನೆ ಮೂಲಕ ಜನರ ಮನಸ್ಸನ್ನು ಕದ್ದಿದ್ದಾರೆ
  • ಯೂಟ್ಯೂಬ್ ಮೂಲಕ ಖ್ಯಾತಿ ಪಡೆದ ಅರ್ಮಾನ್, ಜೈ ಹೋ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ
  • ಸಲ್ಮಾನ್ ತನ್ನ ಮ್ಯೂಸಿಕ್ ವಿಡಿಯೋದಲ್ಲಿ ಶರ್ಟ್‌ಲೆಸ್ ಆಗಿ ಕಾಣಿಸಿಕೊಳ್ಳುವ ಸಲುವಾಗಿ ವ್ಯಾಯಾಮ ಮಾಡುತ್ತಿದ್ದರು
  • ಈ ಪ್ರಕ್ರಿಯೆಯಲ್ಲಿ ಸುಮಾರು 10-15 ಕೆಜಿ ತೂಕ ಇಳಿಸಿಕೊಂಡಿದ್ದೇನೆ
ಮುಂಬೈ: ಗಾಯಕ ಅರ್ಮಾನ್​ ಮಲಿಕ್​ ಗೀತರಚನೆ ಮತ್ತು ಸಂಗೀತ ಸಂಯೋಜಕರಾಗಿ ತಮ್ಮ ಧ್ವನಿಯ ಮೂಲಕ  ಲಕ್ಷಾಂತರ ಅಭಿಮಾನಿಗಳ ಹೃದಯಗಳಲ್ಲಿ ನೆಲೆಸಿದ್ದಾರೆ. ತಮ್ಮ ಯೂಟ್ಯೂಬ್ ಕವರ್‌ಗಳ ಮೂಲಕ ಖ್ಯಾತಿ ಪಡೆದ ಅರ್ಮಾನ್, ಸಲ್ಮಾನ್ ಖಾನ್ ಅವರ ಜೈ ಹೋ ಚಿತ್ರದ ಮೂಲಕ ಬಾಲಿವುಡ್‌ಗೆ (Bollywood) ಪಾದಾರ್ಪಣೆ ಮಾಡಿದರು. 
ಸಲ್ಮಾನ್ ತನ್ನ ಮ್ಯೂಸಿಕ್ ವಿಡಿಯೋದಲ್ಲಿ ಶರ್ಟ್‌ಲೆಸ್ ಆಗಿ ಕಾಣಿಸಿಕೊಳ್ಳುವ ಸಲುವಾಗಿ ಕಠಿಣ ನೃತ್ಯ ಮತ್ತು ವ್ಯಾಯಾಮ ವೇಳಾಪಟ್ಟಿಯನ್ನು ಮಾಡುವಂತೆ ಸೂಚಿಸಿದ್ದರು. ಈ ಪ್ರಕ್ರಿಯೆಯಲ್ಲಿ ಸುಮಾರು 10-15 ಕೆಜಿ ತೂಕ ಇಳಿಸಿಕೊಂಡಿದ್ದೇನೆ ಎಂದು ಗಾಯಕ ಅರ್ಮಾನ್​ ಬಹಿರಂಗಪಡಿಸಿದ್ದಾರೆ.
ಫರಹಾ ಖಾನ್ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ನಡೆದ ಸಂವಾದದಲ್ಲಿ ಅರ್ಮಾನ್​, ನನಗೆ ಭಾರತದ ಜಸ್ಟಿನ್ ಬೀಬರ್ ಆಗಬೇಕೆಂಬ ಆಸೆ ಇತ್ತು ಎಂದು ಹೇಳಿದರು. ಸಲ್ಮಾನ್ ಖಾನ್‌ಗೆ ತಮ್ಮ ಆಲ್ಬಮ್ ತೋರಿಸಿದ ಬಗ್ಗೆ ನೆನಪಿಸಿಕೊಂಡಿದ್ದು,  ನನ್ನ ಎರಡು ಹಾಡುಗಳು ಸಲ್ಮಾನ್​ ಅವರಿಗೆ ತುಂಬಾ ಇಷ್ಟವಾಗಿದ್ದವು. ಅವರು ತಮ್ಮ ಚಿತ್ರಕ್ಕೆ ಒಂದು ಅಥವಾ ಎರಡು ಹಾಡುಗಳನ್ನು ಬಳಸಲು ಇಷ್ಟಪಟ್ಟಿದ್ದರಿಂದ ಆಲ್ಬಮ್​ ಬಿಡುಗಡೆ ಮಾಡಬಾರದು ಎಂದು ತಿಳಿಸಿದ್ದರು. ಈ ರೀತಿಯಾಗಿ ಬಾಲಿವುಡ್​ಗೆ ಚೊಚ್ಚಲ ಪ್ರವೇಶ ಪಡೆದೆ ಎಂದು ಹೇಳಿದ್ದಾರೆ.
ಸಲ್ಮಾನ್ ತನ್ನ ಮ್ಯೂಸಿಕ್ ವಿಡಿಯೋದಲ್ಲಿ ಶರ್ಟ್ ಇಲ್ಲದೆ ಕಾಣಿಸಿಕೊಳ್ಳಬೇಕೆಂದು ಬಯಸಿದ್ದರು ಎಂದು ಅರ್ಮಾನ್ ಬಹಿರಂಗಪಡಿಸಿದ್ದಾರೆ. ಪ್ರಾರಂಭದಲ್ಲಿ ನನ್ನನ್ನು ಮತ್ತು ಅಮಲ್​ ಅವರನ್ನು ಸೇರಿಸಿದ್ದರು. ನೀವಿಬ್ಬರೂ ಕೊನೆಯವರೆಗೂ ವಿಡಿಯೋದಲ್ಲಿ ಪ್ರೀತಿಯಿಂದ ಇರಬೇಕೆಂದು ಎಚ್ಚರಿಕೆ ನೀಡಿದ್ದರು. ನೀವು ಶರ್ಟ್​ ಇಲ್ಲದೇ ಇರುತ್ತೀರಿ ಎಂದಿದ್ದರು. ಆದರೆ, ನನಗೆ ಇದು ಸಾಧ್ಯವಿಲ್ಲ ಎಂದು ನಾನು ಭಾವಿಸಿದೆ.
ಸಲ್ಮಾನ್ ಖಾನ್ ಅವರ ತೂಕ ಇಳಿಕೆಯ ಕ್ರಮಕ್ಕೆ ಶ್ಲಾಘನೆ ವ್ಯಕ್ತಪಡಿಸಿದ ಅರ್ಮಾನ್​, ನಟ "ಕಠಿಣ ನೃತ್ಯ ಮತ್ತು ವ್ಯಾಯಾಮ ವೇಳಾಪಟ್ಟಿ" ಅನುಸರಿಸಲು ನನ್ನನ್ನು ಒತ್ತಾಯಿಸಿದರು. ಹಾಗಾಗಿ ನಾನು ಸುಮಾರು 10-15 ಕೆಜಿ ತೂಕವನ್ನು ಕಡಿಮೆ ಮಾಡಿಕೊಂಡೆ. ಇದರಿಂದ ನಾನು ತುಂಬಾ ತೆಳ್ಳುಗೆ ಕಾಣುತ್ತಿದ್ದೆ, ಅದೃಷ್ಟವಶಾತ್​ ನಾನು ಚಿತ್ರೀಕರಣದ ಸಂದರ್ಭದಲ್ಲಿ  ನನ್ನ ಶರ್ಟ್ ತೆಗೆಯಬೇಕಾಗಿಲ್ಲ ಎಂದು ತಿಳಿಸಿದ್ದರು.
ಜೈ ಹೋ ಸಿನಿಮಾ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಅರ್ಮಾನ್​,  2016 ರ ಚಲನಚಿತ್ರ MS ಧೋನಿ: ದಿ ಅನ್‌ಟೋಲ್ಡ್ ಸ್ಟೋರಿಯಲ್ಲಿ ಕೌನ್ ತುಜೆ ಮತ್ತು ಬೆಸಾಬ್ರಿಯಾನ್ ಹಾಡುಗಳೊಂದಿಗೆ ವ್ಯಾಪಕವಾಗಿ ಯಶಸ್ಸನ್ನು ಗಳಿಸಲು ಪ್ರಾರಂಭಿಸಿದರು. ಅವರ ಧ್ವನಿಮುದ್ರಿಕೆಯು ಸೂರಜ್ ದೂಬಾ ಹೈ, ಕಾರ್ ಗಯಿ ಚುಲ್, ಆಶಿಕ್ ಸರೆಂಡರ್ ಹುವಾ ಮತ್ತು ಹೆಚ್ಚಿನವುಗಳನ್ನು  ಒಳಗೊಂಡಂತೆ ಹಲವಾರು ಚಾರ್ಟ್-ಟಾಪ್ ಹಾಡುಗಳನ್ನು ಒಳಗೊಂಡಿವೆ (ಏಜೆನ್ಸೀಸ್​).