ಬಾಲಿವುಡ್ ನಟ ಸಲ್ಮಾನ್ ಖಾನ್, ನಿರ್ದೇಶಕ ಅಭಿನವ್ ಕಶ್ಯಪ್ 
ಬಾಲಿವುಡ್

ದಬಾಂಗ್​ ನಿರ್ದೇಶಕನ ವಿರುದ್ಧ ಸಿಡಿದೆದ್ದ ಸಲ್ಮಾನ್​​: ಮಾನನಷ್ಟ ಮೊಕದ್ದಮೆ ಹೂಡಿದ್ದೇಕೆ ಭಾಯಿಜಾನ್? Salman Khan

ಪ್ರಮುಖ ಮುಖ್ಯಾಂಶಗಳು

  • ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ಅವರ ಸಹೋದರ ಅಭಿನವ್ ಕಶ್ಯಪ್
  • ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿರುವ ಅಭಿನವ್ ಕಶ್ಯಪ್
  • 9 ಕೋಟಿ ಮಾನನಷ್ಟ ಮೊಕದ್ದಮೆ ಪ್ರಕರಣ ಹೂಡಿರುವ ಸಲ್ಮಾನ್​ ಖಾನ್​
ಮುಂಬೈ: ಬಾಲಿವುಡ್​ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ಅವರ ಸಹೋದರ ಅಭಿನವ್ ಕಶ್ಯಪ್, ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ (Salman Khan) ವಿರುದ್ಧ ಹಲವಾರು ಗಂಭೀರ ಆರೋಪಗಳನ್ನು ಮಾಡಿದ ಹಿನ್ನಲೆ ಸಲ್ಮಾನ್​​ ಅಭಿನವ್​ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ, ನ್ಯಾಯಾಲಯ ಹೊರಡಿಸಿರುವ ತಡೆಯಾಜ್ಞೆಯಲ್ಲಿ, ವಾಕ್ ಸ್ವಾತಂತ್ರ್ಯದ ಹೆಸರಿನಲ್ಲಿ ಯಾವುದೇ ವ್ಯಕ್ತಿಯ ವಿರುದ್ಧ ನಿಂದನೀಯ ಅಥವಾ ಬೆದರಿಕೆ ಭಾಷೆಯನ್ನು ಬಳಸುವಂತಿಲ್ಲ ಎಂದು ಹೇಳಿದೆ. ಇತ್ತೀಚೆಗೆ ಪ್ರಸಾರವಾದ ವಿವಿಧ ಸಂದರ್ಶನಗಳಲ್ಲಿ ಕಶ್ಯಪ್ ನೀಡಿದ ಹೇಳಿಕೆಗಳು, ಅವಮಾನಕರ, ಸುಳ್ಳು ಮತ್ತು ಮಾನನಷ್ಟಕರವಾಗಿದ್ದ ಹಿನ್ನಲೆ ಸಲ್ಮಾನ್ ಖಾನ್ ನ್ಯಾಯಾಲಯದ ಮೊರೆ ಹೋಗಿದ್ದಾರೆ ಎಂದು ಹೇಳಲಾಗಿದೆ.
ಸಲ್ಮಾನ್​ ಖಾನ್ ಪರ ವಾದ ಮಂಡಿಸಿದ ವಕೀಲ ಪ್ರದೀಪ್ ಗಾಂಧಿ, ಈ ಸಂದರ್ಶನಗಳ ವಿಡಿಯೋಗಳನ್ನು ಕೂಡಲೇ ತೆಗೆದು ಹಾಕಬೇಕು ಮತ್ತು ಈ ರೀತಿಯ ಸಂದರ್ಶಗಳನ್ನು ನಿಲ್ಲಿಸಬೇಕು. ಇಲ್ಲಿಯ ವರೆಗೆ ಸಲ್ಮಾನ್ ಖಾನ್ ಮತ್ತು ಅವರ ಕುಟುಂಬದ ವಿರುದ್ಧ ಕಶ್ಯಪ್ ನೀಡಿರುವ ಹೇಳಿಕೆಗಳಿಗೆ 9 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಕೋರಿದ್ದಾರೆ.

ಯಾರು ಈ ಅಭಿನವ್ ಕಶ್ಯಪ್?

ಅಭಿನವ್​ ಕಶ್ಯಪ್​ ಖ್ಯಾತ ನಿರ್ದೇಶಕ ಅನುರಾಗ್​ ಕಶ್ಯಪ್​ ಅವರ ಸಹೋದರ. ಅಭಿನವ್​ ಚಲನಚಿತ್ರ ರಂಗದಲ್ಲಿ ಬರಹಗಾರರಾಗಿ ಕೆಲಸವನ್ನು ಪ್ರಾರಂಭಿಸಿ ಜಂಗ್, ಯುವಾ, ಮನೋರಮಾ ಮತ್ತು 13 ಬಿ ಸಿನಿಮಾಗಳಿಗೆ ಸಂಭಾಷಣೆಗಳನ್ನು ಬರೆದಿದ್ದಾರೆ. 2010 ರಲ್ಲಿ ಅಭಿನವ್​ ನಿರ್ದೇಶಿದ್ದ ದಬಾಂಗ್​ ಸಿನಿಮಾದಲ್ಲಿ ಸಲ್ಮಾನ್​ ಖಾನ್​ ಚುಲ್ಬುಲ್ ಪಾಂಡೆ ಎಂಬ ಪೊಲೀಸ್​ ಪಾತ್ರದ ಮೂಲಕ ಜನಪ್ರೀಯರಾಗಲು ಸಹಾಯಕವಾಯಿತು. ಈ ಸಿನಿಮಾದ ಮೂಲಕವೇ ಸೋನಾಕ್ಷಿ ಸಿನ್ಹಾ ಬಾಲಿವುಡ್​ಗೆ ಪಾದಾರ್ಪಣೆ ಮಾಡಿದರು. ಈ ಸಿನಿಮಾವು ಸೂಪರ್​ ಹಿಟ್​ ಆಗಿ ಸಲ್ಮಾನ್​ ಮತ್ತು ಅಭಿನವ್​ ಇಬ್ಬರ ಖ್ಯಾತಿಯನ್ನು ಹೆಚ್ಚಿಸಿತು.
ದಬಾಂಗ್​ನ ಭಾರಿ ಯಶಸ್ಸಿನ ಹೊರತಾಗಿಯೂ ಅಭಿನವ್​ ಕಶ್ಯಪ್ ದಬಾಂಗ್ 2 ನ್ನು ನಿರ್ದೇಶಿಸದಿರಲು ನಿರ್ಧರಿಸಿದರು. ಇತ್ತೀಚೆಗೆ ಅಭಿನವ್​ ನೀಡಿರುವ ಸಂದರ್ಶನಲ್ಲಿ ಸಲ್ಮಾನ್​ ಖಾನ್​ ಬಗ್ಗೆ ಬಹಳ ಕನಿಷ್ಟವಾಗಿ ಮಾತನಾಡಿರುವ ಅಭಿನವ್​, ಸಲ್ಮಾನ್​ ಒಬ್ಬ ಗೂಂಡಾ, ಅವನಿಗೆ ನಟನೆ ಏನು ಎನ್ನುವುದೇ ಗೊತ್ತಿಲ್ಲ, ಅವನು ಗಂಡಸೇ ಅಲ್ಲ ಎಂದು ಹೇಳಿಕೆ ನೀಡಿದ್ದರು,(ಏಜನ್ಸೀಸ್​).