ಚಿತ್ರ Instagram 
ಬಾಲಿವುಡ್

ಕರೀನಾ ಸಹ ನಟರೊಂದಿಗೆ ಕೆಲಸ ಮಾಡಿದಾಗ ಸೈಫ್‌ ಅಲಿ ಖಾನ್​ ಅಸೂಯೆ ಪಟ್ಟಿದ್ದರಂತೆ! Bollywood

ಮುಂಬೈ: ಬಾಲಿವುಡ್​ನ (Bollywood) ಸೂಪರ್​ ದಂಪತಿ ಕರೀನಾ ಕಪೂರ್​ ಹಾಗೂ ಸೈಫ್​ ಅಲಿ ಖಾನ್ ಮದುವೆಯಾಗಿ ಸುಮಾರು 13 ವರ್ಷಗಳನ್ನು ಪೂರೈಸಿದ್ದಾರೆ. ಅವರ ಪ್ರೇಮ ಕಥೆಯು ತಶಾನ್ ಸಿನಿಮಾ ಸೆಟ್​ನಲ್ಲಿ ಪ್ರಾರಂಭವಾಯಿತು. ಈ ಸಮಯದಲ್ಲಿ ಸೈಫ್​ ಅಲಿ ಖಾನ್​ ಕರೀನಾ ಹೆಸರಿನ ಟ್ಯಾಟೂವನ್ನು ಹಾಕಿಸಿಕೊಂಡಿದ್ದರಂತೆ.
ಇತ್ತೀಚಿನ ಸಂಬಾಷಣೆಯೊಂದರಲ್ಲಿ ಸೈಫ್​ ಅಲಿಖಾನ್​ ತಮ್ಮ ಆರಂಭಿಕ ಡೇಟಿಂಗ್​ ದಿನಗಳ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದ್ದಾರೆ. ಕರೀನಾ ಇತರ ಸಹನಟರೊಂದಿಗೆ ಸಿನಿಮಾದಲ್ಲಿ ನಟಿಸುವ ಸಂದರ್ಭದಲ್ಲಿ ಅಸೂಯೆ (Jealous) ಹಾಗೂ ಅಭದ್ರತೆ ಕಾಡುತ್ತಿದ್ದವು ಎಂದು ಹೇಳಿದ್ದಾರೆ.
ಪ್ರಸಿದ್ಧ ನಟಿಯೊಂದಿಗೆ ಪ್ರೀತಿಯಲ್ಲಿ ಇರುವಾಗ ಇಂತಹ ಸವಾಲುಗಳನ್ನು ಎದುರಿಸುವುದು ಬಹಳ ಕಷ್ಟ. ಹಾಗೆಯೇ ಇಂತಹ ಸಂಬಂಧವನ್ನು ನಿಭಾಯಿಸುವುದು ಕಷ್ಟಕರವಾಗುತ್ತಿತ್ತು ಎಂದು ಹೇಳಿದರು.
ಬಹುಶಃ ನಾನು ಆ ಸಮಯದಲ್ಲಿ ಸ್ವಲ್ಪ ಅಸೂಯೆ ಪಡುತ್ತಿದ್ದೆ, ಆಕೆ ಇತರ ಪುರುಷರೊಂದಿಗೆ ಕೆಲಸ ಮಾಡುವುದನ್ನು ಹೇಗೆ ಪ್ರತಿಕ್ರಿಯಿಸಬೇಕೆಂದು ಖಚಿತವಾಗುತ್ತಿರಲಿಲ್ಲ. ಇದೆಲ್ಲವೂ ಹೊಸ ಅನುಭವವಾಗಿತ್ತು. ಆದರೆ, ಯಾವುದೇ ವ್ಯಕ್ತಿ ಸಂಬಂಧದಲ್ಲಿದ್ದರೆ, ನಿಮಗೆ ಪರಸ್ಪರ ನಂಬಿಕೆ ಇರಬೇಕು. ನೀವೇನಾದರೂ, ಸಂಬಂಧದಲ್ಲಿ ಅಸುರಕ್ಷಿತವಾಗಿದ್ದರೆ, ಆ ಸಂಬಂಧವನ್ನು ಮುಂದೊಯ್ಯುವುದು ಬಹಳ ಕಷ್ಟವಾಗುತ್ತದೆ ಎಂದು ಹೇಳಿದರು.
ಸೈಫ್​ ಮುಂದುವರೆಸಿದಂತೆ, ಸಾಮಾನ್ಯವಾಗಿ ನಾನು ನನ್ನ ಸಹ ನಟಿಯರೊಂದಿಗೆ ಹೊರಹೋಗುತ್ತಿದ್ದೆ, ನನ್ನ ಸ್ನೇಹಿತರನ್ನು ಆಕೆಯೂ ಮಿತ್ರರಾಗಿ ಸ್ವೀಕರಿಸುತ್ತಾಳೆ ಎಂದು ನನಗೆ ಅನಿಸಿತು. ಹಾಗಾಗಿ ನಮ್ಮ ಪ್ರೀತಿ ಗೆದ್ದಿತು ಎಂದರು. 

ಕರೀನಾ ನಿಜವಾಗಿಯೂ ಅದ್ಭುತ ಮಹಿಳೆ: ಸೈಫ್​ ಅಲಿಖಾನ್​

ನಾನು ನಿಜವಾಗಿಯೂ ಕರೀನಾಳೊಂದಿಗೆ ಇರುವುದು ನನ್ನ ಅದೃಷ್ಟ ಎಂದು ಭಾವಿಸುತ್ತೇನೆ. ಏಕೆಂದರೆ ನಾನು ಭೇಟಿಯಾದ ಅತ್ಯಂತ ತಾಳ್ಮೆ ಮತ್ತು ಪ್ರೀತಿಯ ಜನರಲ್ಲಿ ಅವಳು ಒಬ್ಬಳು. ಆಕೆ ಅದ್ಭುತ ಎಂದು ನಾನು ಹೇಳುತ್ತಲೇ ಇರಬಲ್ಲೆ. ಅವಳು ಮನೆಯಲ್ಲಿ ಒಳ್ಳೆಯ ವಾತಾವರಣವನ್ನು ಒದಗಿಸುತ್ತಾಳೆ. ಕ್ಯಾಮರಾ ಮುಂದೆ ಹೇಗೆ ಸೃಜನಶೀಲಳೋ ಹಾಗೇ ಮನೆಯಲ್ಲೂ ಹಾಗೇ ಇರುತ್ತಾಳೆ ಎಂದು ಹೇಳಿದ್ದಾರೆ.
ಸೈಫ್ ಅಲಿ ಖಾನ್ 2012 ರಲ್ಲಿ ಕರೀನಾ ಕಪೂರ್ ಅವರನ್ನು ವಿವಾಹವಾದರು. ಅವರಿಗೆ ತೈಮೂರ್ ಮತ್ತು ಜೆಹ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಸೈಫ್ ಈ ಹಿಂದೆ ಅಮೃತಾ ಸಿಂಗ್ ಅವರನ್ನು ವಿವಾಹವಾಗಿದ್ದರು, ಅವರಿಗೆ ಸಾರಾ ಮತ್ತು ಇಬ್ರಾಹಿಂ ಮಕ್ಕಳು (ಏಜೆನ್ಸೀಸ್​).