ಸೈಫ್ ಅಲಿ ಖಾನ್ 
ಬಾಲಿವುಡ್

Saif Ali Khan - ತಮಾಷೆಗೆ ಹೇಳಿದ ಮಾತಿನಿಂದ ಎರಡು ವರ್ಷಗಳಷ್ಟು ತುಪ್ಪ ಮನೆಗೆ ಬಂತು!

ಬಾಲಿವುಡ್​ ನಟ ಸೈಫ್ ಅಲಿ ಖಾನ್​ ತಮಾಷೆಗೆ ಹೇಳಿದ ಮಾತೊಂದು ಜಾಲತಾಣದಲ್ಲಿ ಟ್ರೆಂಡ್​ ಆಗಿ, ಎರಡು ವರ್ಷಗಳ ತುಪ್ಪ ಅವರ ಮನೆ ಸೇರುವಂತೆ ಮಾಡಿದೆ! ಹೌದು, ಕಳೆದ ಸೆಪ್ಟೆಂಬರ್​ನಲ್ಲಿ "ಹೈವಾನ್​' ಚಿತ್ರದ ಪ್ರಚಾರದ ವೇಳೆ ನಟ ಅಕ್ಷಯ್​ ಕುಮಾರ್​ ಜತೆ ಸೈಫ್​ ಕೂಡ "ಕೌನ್​ ಬನೇಗಾ ಕರೋಡ್​ಪತಿ' ಸೀಸನ್​ 18ರಲ್ಲಿ ಪಾಲ್ಗೊಂಡಿದ್ದರು. 10ನೇ ಪ್ರಶ್ನೆಗೆ ಸರಿಯಾದ ಉತ್ತರ ನೀಡುವವರಿಗೆ "ಗೋವರ್ಧನ್​ ಘೀ' ವತಿಯಿಂದ ಎರಡು ವರ್ಷಗಳ ತುಪ್ಪ ಸಿಗಲಿದೆ ಎಂದು ನಿರೂಪಕ ಅಮಿತಾಭ್​ ಬಚ್ಚನ್​ ಹೇಳಿದ್ದರು.

ಬಾಲಿವುಡ್​ ನಟ ಸೈಫ್ ಅಲಿ ಖಾನ್​ ತಮಾಷೆಗೆ ಹೇಳಿದ ಮಾತೊಂದು ಜಾಲತಾಣದಲ್ಲಿ ಟ್ರೆಂಡ್​ ಆಗಿ, ಎರಡು ವರ್ಷಗಳ ತುಪ್ಪ ಅವರ ಮನೆ ಸೇರುವಂತೆ ಮಾಡಿದೆ! ಹೌದು, ಕಳೆದ ಸೆಪ್ಟೆಂಬರ್​ನಲ್ಲಿ "ಹೈವಾನ್​' ಚಿತ್ರದ ಪ್ರಚಾರದ ವೇಳೆ ನಟ ಅಕ್ಷಯ್​ ಕುಮಾರ್​ ಜತೆ ಸೈಫ್​ ಕೂಡ "ಕೌನ್​ ಬನೇಗಾ ಕರೋಡ್​ಪತಿ' ಸೀಸನ್​ 18ರಲ್ಲಿ ಪಾಲ್ಗೊಂಡಿದ್ದರು. 10ನೇ ಪ್ರಶ್ನೆಗೆ ಸರಿಯಾದ ಉತ್ತರ ನೀಡುವವರಿಗೆ "ಗೋವರ್ಧನ್​ ಘೀ' ವತಿಯಿಂದ ಎರಡು ವರ್ಷಗಳ ತುಪ್ಪ ಸಿಗಲಿದೆ ಎಂದು ನಿರೂಪಕ ಅಮಿತಾಭ್​ ಬಚ್ಚನ್​ ಹೇಳಿದ್ದರು. ಆ ಸಂಚಿಕೆ ಮುಗಿದ ಕೆಲ ದಿನಗಳಲ್ಲೇ ಅ. 11ರಂದು ಸೈಫ್​ ಅಲಿ ಖಾನ್​ ಇನ್​ಸ್ಟಾಗ್ರಾಂನಲ್ಲಿ ಖಾತೆ ತೆರೆದರು. ಆ ಸಮಯದಲ್ಲಿ ಹಲವಾರು ಅಭಿಮಾನಿಗಳು ""ಕೆಬಿಸಿ'ಯಲ್ಲಿ ಹೇಳಿದಂತೆ ತುಪ್ಪ ದೊರೆಯಿತೇ?' ಎಂದು ಪ್ರಶ್ನಿಸತೊಡಗಿದರು. ಆದರೆ, ಅದನ್ನು ನಟ ಗಂಭೀರವಾಗಿ ಪರಿಗಣಿಸಿರಲಿಲ್ಲ. ಇನ್ನು ಕೆಲ ದಿನಗಳ ಹಿಂದಷ್ಟೇ ಸೈಫ್​ ಮತ್ತು ಕರೀನಾ ದಂಪತಿ ನಟ ಕಪಿಲ್​ ಶರ್ಮಾ ನಡೆಸಿಕೊಡುವ ಕಾಮಿಡಿ ಶೋನಲ್ಲಿ ಅತಿಥಿಗಳಾಗಿ ಬಂದಿದ್ದರು. ಆ ಸಮಯದಲ್ಲಿ ಕಪಿಲ್​ ಕೂಡ ತುಪ್ಪದ ಬಗ್ಗೆ ಪ್ರಶ್ನಿಸಿದರು. ಅದಕ್ಕೆ ಸೈಫ್​ "ತುಪ್ಪನೂ ಸಿಕ್ಕಿಲ್ಲ, ಚೆಕ್​ ಕೂಡ ಸಿಕ್ಕಿಲ್ಲ' ಎಂದು ನಗುತ್ತಾ ಹೇಳಿಕೊಂಡಿದ್ದರು. ಅದಾಗುತ್ತಲೇ ಆನ್​ಲೈನ್​ನಲ್ಲಿ ಹಲವು ಫ್ಯಾನ್​ಗಳು ಸೈಫ್​ಗೆ ತುಪ್ಪ ಕೊಡಿ ಎಂದು ಗೋವರ್ಧನ್​ ಘೀ ಹಿಂದೆ ಬಿದ್ದರು. ಟ್ರೋಲ್​ ಮಾಡಿದರು, ಹ್ಯಾಶ್​ಟ್ಯಾಗ್​ ಟ್ರೆಂಡ್​ ಮಾಡಿದರು. ಕೊನೆಗೆ ತುಪ್ಪದ ಕಂಪನಿಯವರು ಸೈಫ್​ ಮನೆಗೆ ಎರಡು ವರ್ಷಗಳಿಗೆ ಆಗುವಷ್ಟು ತುಪ್ಪದ ಬಾಟಲಿಗಳನ್ನು ಕಳುಹಿಸಿಕೊಟ್ಟಿದ್ದಾರೆ. ಸದ್ಯ, ಸೈಫ್​ ತುಪ್ಪ ಮನೆ ಸೇರಿರುವ ವಿಡಿಯೋ ಹಂಚಿಕೊಂಡಿದ್ದು, ಒಂದೇ ದಿನದಲ್ಲಿ 10 ಲಕ್ಷಕ್ಕೂ ಅಧಿಕ ಲೈಕ್ಸ್​ ಮತ್ತು ಎರಡು ಕೋಟಿಗೂ ಅಧಿಕ ವೀವ್ಸ್​ ದೊರೆತು ಮತ್ತೆ ಟ್ರೆಂಡಿಂಗ್​ನಲ್ಲಿದೆ. -ಏಜೆನ್ಸೀಸ್​

ಸೈಫ್ ಅಲಿ ಖಾನ್