ಪಂಜಾಬಿ ನಟಿ ಇಶಾ ರಾಖಿಯನ್ನು ಮದುವೆಯಾದ ಬಾದ್ಶಾ
- ವಿಚ್ಛೇದನದ ನಂತರ ಮತ್ತೆ ಹಸೆಮಣೆ ಏರಿದ ರ‍್ಯಾಪರ್
- ಪಂಜಾಬಿ ನಟಿ ಇಶಾ ರಾಖಿಯನ್ನು ಮದುವೆಯಾದ ಬಾದ್ಶಾ
- 2020 ರಲ್ಲಿ ಮೊದಲ ಪತ್ನಿ ಜಾಸ್ಮಿನ್ ಮಸಿಹ್ ರಿಂದ ದೂರವಾಗಿದ್ದ ಸಿಂಗರ್
ಪಂಜಾಬ್: ಸದಾ ತನ್ನ ತೂಕಡಿಸುವ ಹಾಡುಗಳ ಮೂಲಕ ಯುವಕರ ಮನಸ್ಸನ್ನು ಗೆದ್ದಿರುವ ರ್ಯಾವರ್ ಬಾದ್ಶಾ(Badshah), ಈದೀಗ ದಿಢೀರ್ ಆಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಸದ್ಯ ತನ್ನ ತಟೀರಿ ಹಾಡಿನ ವಿವಾದಕ್ಕೆ ಸಿಲುಕಿದ್ದ ಬಾದ್ಶಾ ಈಗ ತನ್ನ ಬಹುಕಾಲದ ಗೆಳತಿ ಹಾಗೂ ಪಂಜಾಬಿ ಚಿತ್ರರಂಗದ ನಟಿ ಇಶಾ ರಿಖಿರನ್ನು ಸೈಲಂಟಾಗಿ ಮದುವೆಯಾಗಿದ್ದಾರೆ.
ಅತ್ತೆ ಮೂಲಕ ಜಗಜ್ಜಾಹಿರಾದ ಮದುವೆ
ಬಾದ್ಷಾ ಅವರ ಮದುವೆ ಕುರಿತು ವದಂತಿಗಳಾಗಲಿ ಅಥವಾ ಅವರಿಂದ ಯಾವುದೇ ಹೇಳಿಕೆಯಾಗಲಿ ಇಲ್ಲಿವರೆಗೆ ಬಂದಿರಲಿಲ್ಲ. ಹಾಗೆಯೇ ಬಾದ್ಶಾ, ಇಶಾ ರಿಖಿ ಅವರನ್ನು ಖಾಸಗಿಯಾಗಿಯೇ ವಿವಾಹವಾದ ಕಾರಣ, ಈ ಬಗ್ಗೆ ಯಾರಿಗೂ ಸಹ ಯಾವುದೇ ಮಾಹಿತಿ ಇರಲಿಲ್ಲ. ಆದರೆ ಇಶಾ ರಿಖಿ ಅವರ ತಾಯಿ ಅಂದರೆ ಬಾದ್ಶಾ ಅವರ ಅತ್ತೆ ಪೂನಂ ರಿಖಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ನವ ಜೋಡಿಗಳ ಫೋಟೊಗಳನ್ನು ಹಂಚಿಕೊಂಡ ನಂತರ ಗಾಯಕ ಮದುವೆ ನಡೆದಿದೆ ಎಂದು ಜನರಿಗೆ ತಿಳಿದಿದೆ.
ವಿಚ್ಛೇದನ ನಂತರ ಮತ್ತೆ ಹಸೆಮಣೆ ಏರಿದ ಗಾಯಕ!
ಹೌದು, ಬಾದ್ಶಾ ಈಗಾಗಲೇ ವಿವಾಹವಾಗಿ ವಿಚ್ಛೇದನನ್ನು ಸಹ ಪಡೆದಿದ್ದಾರೆ. ಬಾದ್ಶಾ 2012 ರಲ್ಲಿ ಜಾಸ್ಮಿನ್ ಮಸಿಹ್ ಅವರನ್ನು ಮದುವೆಯಾಗಿ ಜೆಸ್ಸಿಮಿ ಗ್ರೇಸ್ ಎಂಬ ಮಗಳನ್ನು ಸಹ ಈ ದಂಪತಿ ಹೊಂದಿದೆ. ಆದರೆ ಬಾದ್ಶಾ ತಮ್ಮ ಮೊದಲ ಪತ್ನಿತಿಂದ 2020 ರಲ್ಲಿ ಬೇರ್ಪಟ್ಟ ಬಳಿಕ ಈಗ ಇಶಾ ರಿಖಿ ಅವರನ್ನು ತಮ್ಮ ಪತ್ನಿಯಾಗಿ ಸ್ವೀಕರಿಸಿದ್ದಾರೆ.
ಇಶಾ ಮತ್ತು ಬಾದ್ಶಾ ಪರಿಚಯ-ಸಂಬಂಧ
ವರದಿಗಳ ಪ್ರಕಾರ, ಬಾದ್ಶಾ ಮತ್ತು ಇಶಾ ರಿಖಿ ಸುಮಾರು ನಾಲ್ಕು ವರ್ಷಗಳಿಂದ ಡೇಂಟಿಂಗ್ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಇವರು 2022 ರಲ್ಲಿ ಸ್ನೇಹಿತರೊಬ್ಬರ ಪಾರ್ಟಿಯಲ್ಲಿ ಬೇಟಿಯಾಗಿದ್ದು, ಬೇಟಿ ಪರಿಚಯವಾಗಿ, ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಯಾಗಿ ಬದಲಾಗಿ ಈಗ ಇವರಿಬ್ಬರು ದಂಪತಿಗಳಾಗಿ ಬದಲಾಗಿದ್ದಾರೆ,(ಏಜನ್ಸೀಸ್).