ಜವಾನ್ ದಾಖಲೆ ಮುರಿಯಲು ರಣವೀರ್ ಸಿಂಗ್ ಇನ್ನು ಕೆಲವೇ ಹೆಜ್ಜೆ ದೂರ!(ಚಿತ್ರ File Photo) 
ಬಾಲಿವುಡ್

ಧುರಂಧರ್ ಅಬ್ಬರ: 1100 ಕೋಟಿ ಕ್ಲಬ್ ಸೇರಿದ ರಣವೀರ್ ಸಿನಿಮಾ; ಶಾರುಖ್ ದಾಖಲೆ ಉಡೀಸ್? Dhurandhar

Dhurandhar: ಆದಿತ್ಯ ಧಾರ್​ ನಿರ್ದೇಶನದ ಸ್ಪೈ ಥ್ರಿಲ್ಲರ್​ ಧುರಂಧರ್​ ಸುಮಾರು ನಾಲ್ಕು ವಾರಗಳ ಕಾಲ ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಪ್ರಾಬಲ್ಯ ಸಾಧಿಸಿದೆ. ಬಿಡುಗಡೆಯಾದಾಗಿಂದಲೂ ಅದ್ಭುತ ಪ್ರದರ್ಶನ ನೀಡಿದ ಈ ಚಿತ್ರವು ನಾಲ್ಕನೇ ವಾರದಲ್ಲೂ ಒಳ್ಳೆಯ ಪ್ರದರ್ಶನ ನೀಡುತ್ತಿದೆ. ಆದರೆ, 26 ನೇ ದಿನದಂದು ಚಿತ್ರವು ಆಯಾಸದ ಆರಂಭಿಕ ಲಕ್ಷಣಗಳನ್ನು ತೋರುತ್ತಿದ್ದು, ದೈನಂದಿನ ಸಂಖ್ಯೆಗಳಿಗಿಂತ ಎರಡು ಅಂಕೆಗಳಿಗೆ ಇಳಿದಿವೆ ಎಂದು ವರದಿಯಾಗಿದೆ.
26ನೇ ದಿನ ಸಣ್ಣ ಏರಿಕೆ – ಅಲ್ಪ ಬೆಳವಣಿಗೆಯೊಂದಿಗೆ ಮುನ್ನಡೆ ಸಾಧಿಸಿದ ಧುರಂಧರ್​!
ಉದ್ಯಮ ಟ್ರ್ಯಾಕರ್ ಸ್ಯಾಕ್ನಿಲ್ಕ್ ಪ್ರಕಾರ , ರಣವೀರ್ ಸಿಂಗ್ ಅಭಿನಯದ ಧುರಂಧರ್​ 26 ನೇ ದಿನದಂದು 11.25 ಕೋಟಿ ರೂ.ಗಳನ್ನು ಸಂಗ್ರಹಿಸಿದೆ. ಇದು ನಾಲ್ಕನೇ ಸೋಮವಾರ 10.5 ಕೋಟಿ ರೂ.ಗಳನ್ನು ಗಳಿಸಿದ್ದಕ್ಕಿಂತ ಶೇ. 7.14 ರಷ್ಟು ಹೆಚ್ಚಾಗಿದ್ದು, ಚಿತ್ರದ ಒಟ್ಟು ದೇಶೀಯ ನಿವ್ವಳ ಸಂಗ್ರಹವು 712.5 ಕೋಟಿ ರೂ. ತಲುಪಿದೆ.
ಧುರಂಧರ್​ನ ಭರ್ಜರಿ ಓಟದ ನಂತರ, ಚಿತ್ರವು ನಿಧಾನ ಗತಿಯಲ್ಲಿ ಸಾಗುತ್ತಿದೆ ಎಂದು ಅಂಕಿ ಅಂಶಗಳು ಸೂಚಿಸುತ್ತಿವೆಯಾದರೂ, ನಾಲ್ಕನೇ ವಾರದಲ್ಲಿ 10-15 ಕೋಟಿ ರೂ.ಗಳ ಗಳಿಕೆ ಮಾಡುತ್ತಿರುವುದು ಚಿತ್ರಮಂದಿರಗಳಲ್ಲಿ ಅಸಾಧಾರಾಣ ಬೆಳವಣಿಗೆಯನ್ನು ಎತ್ತಿ ತೋರಿಸುತ್ತಿದೆ.
ಜಾಗತಿಕವಾಗಿ, ಧುರಂಧರ್ ಈಗಾಗಲೇ ವಿಶ್ವಾದಾದ್ಯಂತ ಮನೆಮಾತಾಗಿದ್ದು, 1,100 ಕೋಟಿ ರೂ.ಗಳನ್ನು ದಾಟಿದೆ. ಇದು ಚೀನಾ ಮಾರುಕಟ್ಟೆಯನ್ನು ಅವಲಂಬಿಸಿ, 1,100 ಕೋಟಿ ರೂ.ಗಳನ್ನು ದಾಟಿದ ಏಕೈಕ ಬಹುಭಾಷೇತರ ಭಾರತೀಯ ಚಲನಚಿತ್ರವಾಗಿದೆ. ಈ ಚಿತ್ರವು ರಣವೀರ್​ ಸಿಂಗ್​ ಅವರ ಇಲ್ಲಿಯವರೆಗಿನ ವೃತ್ತಿ ಜೀವನದ ಅತಿದೊಡ್ಡ ಯಶಸ್ಸನ್ನು ಭದ್ರಪಡಿಸಿದೆ.
ವಿಶ್ವಾದ್ಯಂತದ ಗಳಿಕೆಯ ವಿಷಯಕ್ಕೆ ಬಂದರೆ, ಧುರಂಧರ್​ ಇತ್ತೀಚಿನ ಹಲವಾರು ಬ್ಲಾಕ್​ಬಸ್ಟರ್​ ಸಿನಿಮಾಗಳನ್ನು ಹಿಂದಿಕ್ಕಿದೆ. ಅವುಗಳೆಂದರೆ, 2023 ರಲ್ಲಿ ಗದರ್​ ತೆರೆಕಂಡ ನಂತರ 686 ಕೋಟಿ ರೂಗಳನ್ನು ಗಳಿಸಿದೆ. ಸ್ಟ್ರೀ 2 - 857 ಕೋಟಿ ರೂ, ಛಾವಾ-807 ಕೋಟಿ ರೂ, ಪಠಾಣ್ - 1,055 ಕೋಟಿ ರೂ ಗಳಿಕೆ ಮಾಡಿದೆ ಎಂದು ವರದಿಯಾಗಿದೆ.
ಇಲ್ಲಿಯವರೆಗಿನ ಗಳಿಕೆಯಲ್ಲಿ ಧುರಂಧರ್,​ ಶಾರುಖ್​ ಖಾನ್​ ಅವರ ಜವಾನ್​ ಚಿತ್ರವನ್ನು ಬೆನ್ನಟ್ಟಿದ್ದು, ಅದರ ದಾಖಲೆಯನ್ನು ಮುರಿಯುವಲ್ಲಿ ಹೆಜ್ಜೆಯನ್ನಟ್ಟಿದೆ. ಈಗಾಗಲೇ ಇದು ಜಾಗತಿಕವಾಗಿ ಸುಮಾರು 1,160 ಕೋಟಿ ರೂ.ಗಳಿಗೆ ತಲುಪಿದೆ.

ನಾಲ್ಕನೇ ವಾರಾಂತ್ಯದಲ್ಲಾದ ಬದಲಾವಣೆಗಳು!

ಸಿನಿಮಾ ಬಿಡುಗಡೆಯಾಗಿ ನಾಲ್ಕು ವಾರಗಳು ಕಳೆದ ನಂತರ ಈ ಚಿತ್ರವು ಇತಿಹಾಸವನ್ನೇ ಸೃಷ್ಟಿ ಮಾಡಿದೆ. ಆ ಅವಧಿಯಲ್ಲಿ ವಿಶ್ವಾದ್ಯಂತ 1,000 ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ಲೂಟಿ ಮಾಡಿದೆ ಎಂದು ಸಕ್ನಿಲ್ಕ್ ವರದಿ ಮಾಡಿದೆ. ಈ ಸಾಧನೆಯು ಕಲ್ಕಿ 2898 AD ಮತ್ತು ಶಾರುಖ್ ಅವರ ಪಠಾನ್​ನ್ನು ಹಿಂದಿಕ್ಕಲು ಸಹಾಯ ಮಾಡಿದ್ದು, ಇದು ಭಾರತೀಯ ಚಿತ್ರರಂಗದಲ್ಲಿ ಏಳನೇ ಅತಿ ಹೆಚ್ಚು ಗಳಿಕೆಯ ಸಿನಿಮಾ ಎಂದು ತಿಳಿದುಬಂದಿದೆ.
ಮುಂಬರುವ ವಾರಗಳಲ್ಲಿ ಚಿತ್ರದ ಉಳಿಯುವ ಶಕ್ತಿಯನ್ನು ಪರೀಕ್ಷಿಸಲಿದ್ದು, ಶ್ರೀರಾಮ್ ರಾಘವನ್ ಅವರ ಇಕ್ಕಿಸ್, ಪ್ರಭಾಸ್ ಅವರ ದಿ ರಾಜಾ ಸಾಬ್ ವಿಜಯ್ ಅವರ ಜನ ನಾಯಗನ್ ರೂಪದಲ್ಲಿ ಹೊಸ ಸ್ಪರ್ಧೆ ನಡೆಯಲಿದೆ. ಮೂಲಗಳ ಪ್ರಕಾರ, ಧುರಂಧರ್​ ಜೊತೆ ಘರ್ಷಣೆ ತಪ್ಪಿಸಲು ಇಕ್ಕಿಸ್ ಅನ್ನು ಹೊಸ ವರ್ಷಕ್ಕೆ ತಳ್ಳಲಾಯಿತು ಎಂದು ವರದಿಯಾಗಿದೆ (ಏಜೆನ್ಸೀಸ್​).