- ಸಲ್ಮಾನ್ ಖಾನ್ ಅವರನ್ನು ದೀರ್ಘಕಾಲದಿಂದ ಟಾರ್ಗೆಟ್ ಮಾಡುತ್ತಾ ಬಂದಿರುವ ಕುಖ್ಯಾತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್
- ಆರೋಪಿ ಹ್ಯಾರಿ ಬಾಕ್ಸರ್, ಸಿಂಗ್ನಿಂದ ಬರೋಬ್ಬರಿ 10 ಕೋಟಿ ರೂಪಾಯಿ ಸುಲಿಗೆ ಮಾಡಲು ಯತ್ನ
- ರಣವೀರ್ ಸಿಂಗ್ ಅವರ ಮ್ಯಾನೇಜರ್ ವಾಟ್ಸಾಪ್ ಖಾತೆಗೆ ಕರೆ ಮತ್ತು ಧ್ವನಿ ಸಂದೇಶಗಳು ಬಂದಿವೆ
- ರಣವೀರ್ ಸಿಂಗ್ ಈ ಕೂಡಲೇ 10 ಕೋಟಿ ರೂಪಾಯಿಗಳನ್ನು ನೀಡಬೇಕು, ಇಲ್ಲದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ
ಮುಂಬೈ: ಬಾಲಿವುಡ್‌ನ 'ಸುಲ್ತಾನ್' ಸಲ್ಮಾನ್ ಖಾನ್ ಅವರನ್ನು ದೀರ್ಘಕಾಲದಿಂದ ಟಾರ್ಗೆಟ್ ಮಾಡುತ್ತಾ ಬಂದಿರುವ ಕುಖ್ಯಾತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್, ಈಗ ತನ್ನ ವಕ್ರ ದೃಷ್ಟಿಯನ್ನು ನಟ ರಣವೀರ್ ಸಿಂಗ್ (Ranveer Singh) ಮೇಲೆ ಹರಿಸಿದೆ. ಗ್ಯಾಂಗ್‌ನ ಪ್ರಮುಖ ಆರೋಪಿ ಎನ್ನಲಾದ ಹ್ಯಾರಿ ಬಾಕ್ಸರ್, ಸಿಂಗ್ನಿಂದ ಬರೋಬ್ಬರಿ 10 ಕೋಟಿ ರೂಪಾಯಿ ಸುಲಿಗೆ ಮಾಡಲು ಯತ್ನಿಸಿರುವುದು ಸಧ್ಯ ಚಿತ್ರರಂಗದಲ್ಲಿ ಭಾರೀ ಸಂಚಲನ ಮೂಡಿಸಿದೆ.
ಮಾಹಿತಿಗಳ ಪ್ರಕಾರ, ಘಟನೆಯು ಇಂದು ಬೆಳಿಗ್ಗೆ ನಡೆದಿದ್ದು, ರಣವೀರ್ ಸಿಂಗ್ ಅವರ ಮ್ಯಾನೇಜರ್ ವಾಟ್ಸಾಪ್ ಖಾತೆಗೆ ಅಮೆರಿಕದ ಫೋನ್ ಸಂಖ್ಯೆಯಿಂದ ಕರೆ ಮತ್ತು ಧ್ವನಿ ಸಂದೇಶಗಳು ಬಂದಿವೆ. ಈ ಸಂದೇಶದಲ್ಲಿ ತನ್ನನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ 'ಹ್ಯಾರಿ ಬಾಕ್ಸರ್' ಎಂದು ಪರಿಚಯಿಸಿಕೊಂಡಿದ್ದು, ರಣವೀರ್ ಸಿಂಗ್ ಈ ಕೂಡಲೇ 10 ಕೋಟಿ ರೂಪಾಯಿಗಳನ್ನು ನೀಡಬೇಕು, ಇಲ್ಲದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾನೆ.
ಪ್ರಾಥಮಿಕ ತನಿಖೆಯಲ್ಲಿ, ಸಂದೇಶ ಬಂದ ಧ್ವನಿಯು ಹ್ಯಾರಿ ಬಾಕ್ಸರ್ ಧ್ವನಿಗೆ ಹೊಂದಿಕೆಯಾಗುತ್ತಿದೆ ಎಂದು ಕಂಡುಬಂದಿದೆ. ಹಾಗಾಗಿ ಪ್ರಕರಣವನ್ನು ಇನ್ನಷ್ಟು ಬಲ ಪಡಿಸುವ ಸಲುವಾಗಿ ಅಧಿಕಾರಿಗಳು ಹೆಚ್ಚಿನ ಸಾಕ್ಷಿಗಳನ್ನು ಸಂಗ್ರಹಿಸಲು ಮುಂದಾಗಿದ್ದಾರೆ.
ರೋಹಿತ್ ಶೆಟ್ಟಿ ಮನೆಯಲ್ಲಿ ಗುಂಡಿನ ದಾಳಿ ನಡೆದ ನಂತರ ಈ ಧ್ವನಿ ಸಂದೇಶ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಘಟನೆಯ ನಂತರ ರಣವೀರ್ ಸಿಂಗ್ ಅವರ ಮ್ಯಾನೇಜರ್ ಪೋನ್ ಮೂಲಕ ಬೆದರಿಕೆ ಸಂದೇಶ ತಲುಪಿದೆ.
ಬೆದರಿಕೆ ಬಂದ ನಂತರ, ನಟನ ಸುತ್ತ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಮ್ಯಾನೇಜರ್ ಹೇಳಿಕೆಯನ್ನು ದಾಖಲಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಸದ್ಯಕ್ಕೆ ಸಂದೇಶದ ಕುರಿತು ಯಾವುದೇ ಪ್ರಕರಣಗಳು ದಾಖಲಾಗಿಲ್ಲ.
ಏತನ್ಮಧ್ಯೆ, ಕೆಲಸದ ವಿಷಯಕ್ಕೆ ಬಂದರೆ, ನಟ ರಣವೀರ್ ಅವರ ಧುರಂಧರ್ ಗಲ್ಲಾಪೆಟ್ಟಿಗೆಯಲ್ಲಿ 1000 ಕೋಟಿ ರೂ. ಗಳಿಸಿತು. ಈ ಚಿತ್ರವು ಜಾಗತಿಕವಾಗಿ 1300 ಕೋಟಿಗಳಿಗೂ ಹೆಚ್ಚು ಲೂಟಿ ಮಾಡಿತು.
ಅದರ ಮುಂದುವರಿದ ಭಾಗ ಧುರಂಧರ್: ದಿ ರಿವೆಂಜ್ ಮಾರ್ಚ್ 19 ರಂದು ಹಿಂದಿ, ಮಲಯಾಳಂ, ತೆಲುಗು, ತಮಿಳು ಮತ್ತು ಕನ್ನಡ ಭಾಷೆಗಳಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಆರ್ ಮಾಧವನ್, ಸಾರಾ ಅರ್ಜುನ್, ರಾಕೇಶ್ ಬೇಡಿ, ಅರ್ಜುನ್ ರಾಂಪಾಲ್ ಪ್ರಮುಖ ಪಾತ್ರಗಳಲ್ಲಿದ್ದಾರೆ (ಏಜೆನ್ಸೀಸ್).