ಇದೊಂದು ಸುಳ್ಳು ಸುದ್ದಿ: ಅಮಿಶ್ ತ್ರಿಪಾಠಿ
- ಶಿವನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರಾ ನಟ ರಣವೀರ್ ಸಿಂಗ್?
- ಇದೊಂದು ಸುಳ್ಳು ಸುದ್ದಿ: ಅಮಿಶ್ ತ್ರಿಪಾಠಿ
- ನಮ್ಮ ನಡುವೆ ಯಾವುದೇ ಒಪ್ಪಂದವಾಗಿಲ್ಲ
- ನಾನು ಕೂಡ ರಣವೀರ್ ಅಭಿಮಾನಿ ಆದರೆ ಈ ಸುದ್ದಿ ಸುಳ್ಳೆಂದ ಲೇಖಕ
ಮುಂಬೈ: ಧುರಂಧರ್ ಸಿನಿಮಾದ ಯಶಸ್ಸಿನ ಬೆನ್ನಲ್ಲೆ ನಟ ರಣವೀರ್ ಸಿಂಗ್, ಅಮಿಶ್ ತ್ರಿಪಾಠಿ ಅವರ ಖ್ಯಾತ ಕಾದಂಬರಿಯಾದ ದಿ ಇಮ್ಮಾರ್ಟಲ್ಸ್ ಆಫ್ ಮೆಲುಹಾವನ್ನು ಸಿನಿಮಾ ರೂಪಕ್ಕೆ ತಂದು ಶಿವನ ಪಾತ್ರದಲ್ಲಿ ಕಾಣಿಸಿ ಕೊಳ್ಳಲಿದ್ದಾರೆ ಎಂಬ ವದಂತಿ ಎಲ್ಲೆಡೆ ಹಬ್ಬಿತ್ತು.
ಆದರೆ ಈ ವದಂತಿಗಳಿಗೆ ತೆರೆ ಎಳೆದಿರುವ ಲೇಖಕ ಅಮಿಶ್ ತ್ರಿಪಾಠಿ (Amish Tripathi on Ranveer Singh), ಶಿವನ ಸರಣಿಯ ಪುಸ್ತಕದ ಎಲ್ಲಾ ಹಕ್ಕುಗಳು ಕೇವಲ ನನ್ನ ಬಳಿ ಮಾತ್ರವಿದೆ ನಟ ರಣವೀರ್ ಸಿಂಗ್ ಯಾವುದನ್ನು ಇಲ್ಲಿವರೆಗೆ ಖರೀದಿ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ನಾನು ರಣವೀರ್ ಅಭಿಮಾನಿ; ಆದರೆ ಇದು ಸುಳ್ಳು!
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವರದಿಗಳಿಗೆ ಪ್ರತಿಕ್ರಿಯಿಸಿರುವ ಅಮಿಶ್ ತ್ರಿಪಾಠಿ, ನಾನು ಕೂಡ ರಣವೀರ್ ಸಿಂಗ್ ಅಭಿಮಾನಿ, ನನಗೆ ಅವರ ಮೇಲೆ ಅಪಾರ ಗೌರವವಿದೆ ಆದರೆ, ನನ್ನ ಯಾವುದೇ ಪುಸ್ತಕದ ಹಕ್ಕನ್ನು ಅವರು ಖರೀದಿಸಿಲ್ಲ ಹಾಗೂ ದಿ ಇಮ್ಮಾರ್ಟಲ್ಸ್ ಆಫ್ ಮೆಲುಹಾ ಸಿನಿಮಾ ಆಗುತ್ತಿರುವುದು ಸುಳ್ಳೆಂದು ಅವರು ಹೇಳಿದ್ದಾರೆ.
ಕೆಲ ದಿನಗಳ ಹಿಂದೆ ನಟ ರಣವೀರ್ ಸಿಂಗ್ ಲೇಖಕ ಅಮಿಶ್ ತ್ರಿಪಾಠಿ ಅವರಿಂದ ದಿ ಇಮ್ಮಾರ್ಟಲ್ಸ್ ಆಫ್ ಮೆಲುಹಾ ಸೇರಿದಂತೆ ಶಿವನ ಸರಣಿಯ ಒಟ್ಟು ಮೂರು ಪುಸ್ತಕಗಳ ಹಕ್ಕನ್ನು 40 ಕೋಟಿ ರೂಪಾಯಿ ನೀಡಿ ಖರೀದಿಸಿದ್ದಾರೆ. ಹಾಗೆಯೇ ತಮ್ಮ ನಿರ್ಮಾನ ಸಂಸ್ಥೆ ಮಾ ಕಸಮ್ ಫಿಲ್ಮ್ಸ್ ಅಡಿಯಲ್ಲಿ ಈ ಸಿನಿಮಾಗಳನ್ನು ನಿರ್ಮಿಸಲಿದ್ದಾರೆ ಎಂದು ಹೇಳಲಾಗುತ್ತಿತ್ತು. ತೆರೆಕಾಣುವ ಸಿನಿಮಾಗಳಲ್ಲಿ ನಟ ರಣವೀರ್ ಸಿಂಗ್ ಶಿವನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿತ್ತು.
ಸದ್ಯ ತಂದೆಯಾಗಿರುವ ರಣವೀರ್ ಮಗು ಹಾಗೂ ಪತ್ನಿಯ ಜೊತೆ ಸಮಯ ಕಳೆಯುತ್ತಿದ್ದು, 2026 ರಲ್ಲಿ ಈ ಸಿನಿಮಾದ ಚಿತ್ರಿಕರಣವನ್ನು ಆರಂಭಿಸಲಿದ್ದು, ಈಗ ಇದು ಬರವಣಿಗೆ ಹಂತದಲ್ಲಿದೆ ಎಂಬ ವದಂತಿ ಬಾಲಿವುಡ್ನಲ್ಲಿ ಹಬ್ಬಿದೆ, (ಏಜನ್ಸೀಸ್).