ಧುರಂಧರ್​ 2 
ಬಾಲಿವುಡ್

ಬಾಕ್ಸ್ ಆಫೀಸ್​ನಲ್ಲಿ ರಣವೀರ್​ ಸಿಂಗ್ 'ರಿವೆಂಜ್'​! ಬ್ಲಾಕ್​ಬಸ್ಟರ್​ 'ಧುರಂಧರ್ 2'​ ಇಲ್ಲಿಯವರೆಗೆ ಗಳಿಸಿದ್ದೆಷ್ಟು? | Dhurandhar 2

ಪ್ರಮುಖ ಮುಖ್ಯಾಂಶಗಳು

  • ಮಾ.19ರಂದು ಜಾಗತಿಕವಾಗಿ ತೆರೆಕಂಡ 'ಧುರಂಧರ್ 2'
  • ರಣವೀರ್ ಸಿಂಗ್ ಅಭಿನಯದ ಹಾಗೂ ಆದಿತ್ಯ ಧರ್ ನಿರ್ದೇಶನದ ಸಿನಿಮಾ
  • ಭಾರತೀಯ ಹಾಗೂ ಜಾಗತಿಕ ಬಾಕ್ಸ್ ಆಫೀಸ್​ನಲ್ಲಿ ಅಬ್ಬರದ ಕಲೆಕ್ಷನ್​
  • ನಾಲ್ಕನೇ ದಿನಕ್ಕೆ ಕಾಲಿಟ್ಟ ಸಿನಿಮಾ ಒಟ್ಟು ಗಳಿಸಿದ್ದೆಷ್ಟು?
ಮುಂಬೈ: ಮಾ.19ರಂದು ಬಾಲಿವುಡ್‌ ಅಂಗಳದಲ್ಲಿ ಬಿಡುಗಡೆಯಾಗಿ, ಜಾಗತಿಕ ಮಟ್ಟದಲ್ಲಿ ಸಖತ್ ಸದ್ದು ಮಾಡುತ್ತಿರುವ ಸ್ಪೈ-ಥ್ರಿಲ್ಲರ್ 'ಧುರಂಧರ್ 2' (Dhurandhar 2) ಸಿನಿಮಾ ಇದೀಗ ಸೂಪರ್​ಹಿಟ್​ ಸಾಲಿಗೆ ಸೇರ್ಪಡೆಗೊಂಡಿದೆ. ಕೇವಲ ಬಾಕ್ಸ್ ಆಫೀಸ್​ನಲ್ಲಿ ಮಾತ್ರ ಅಬ್ಬರಿಸದ ರಣವೀರ್ ಸಿಂಗ್ ಅಭಿನಯದ ಚಿತ್ರ, ಸಿನಿಪ್ರಿಯರ ಕುತೂಹಲವನ್ನು ಭಾಗ 1ಕ್ಕಿಂತ 2ರಲ್ಲಿ ದುಪ್ಪಟ್ಟಾಗಿಸಿದೆ. ಈಗಾಗಲೇ ಸಿನಿಮಾ ನೋಡಿರುವ ಪ್ರೇಕ್ಷಕರು ಚಿತ್ರತಂಡದ ಶ್ರಮಕ್ಕೆ, ತೋರಿಸುವ ರೀತಿಗೆ ಮೆಚ್ಚುಗೆ, ಪ್ರಶಂಸೆ ಮತ್ತು ಉತ್ತಮ ವಿಮರ್ಶೆಗಳನ್ನು ನೀಡುತ್ತಿದ್ದಾರೆ. ಮತ್ತೊಂದೆಡೆ, ನಾಲ್ಕನೇ ದಿನಕ್ಕೆ ಕಾಲಿಟ್ಟಿರುವ ಆದಿತ್ಯ ಧರ್ ಚಿತ್ರ ಇಂದೇ 500 ಕೋಟಿ ರೂ. ಕ್ಲಬ್​ಗೆ ಸನ್ನಿಹಿತವಾಗಿದೆ.
ರಣವೀರ್​ ಸಿಂಗ್ ನಟನಾಗಿ ಅಭಿನಯಿಸಿರುವ ಈ ಚಿತ್ರದ ಯಶಸ್ಸಿನ ಹಿಂದೆ ನಿರ್ದೇಶಕ ಆದಿತ್ಯ ಧರ್ ಅವರ ಪಾತ್ರವು ಪ್ರಮುಖವಾಗಿದೆ ಎಂಬುದು ಇಲ್ಲಿ ಗಮನಾರ್ಹ. ಜಾಗತಿಕವಾಗಿ, ಮೊದಲ ದಿನವೇ 236 ಕೋಟಿ ರೂ. ಕಲೆಕ್ಷನ್ ಕಂಡ ಧುರಂಧರ್​ 2, ಸದ್ಯ ಭಾರತೀಯ ಬಾಕ್ಸ್ ಆಫೀಸ್​ನಲ್ಲಿ ತನ್ನ ಗಳಿಕೆಯ ಆರ್ಭಟವನ್ನು ಮುಂದುವರಿಸಿದೆ. ರಣವೀರ್ ಅಭಿನಯ, ಆದಿತ್ಯ ಅವರ ಮೇಕಿಂಗ್​ ಮತ್ತು ಪಾತಕಿಗಳ ಅಟ್ಟಹಾಸ, ರಕ್ತಸಿಕ್ತ ದೃಶ್ಯಗಳು ಪ್ರೇಕ್ಷಕರನ್ನು 3 ಗಂಟೆ 49 ನಿಮಿಷಗಳ ದೀರ್ಘ ಕಾಲದವರೆಗೂ ಸೀಟಿನ ಅಂಚಿನಲ್ಲಿ ಕುಳಿತು ಚಿತ್ರವನ್ನು ನೋಡುವಂತೆ ಮಾಡಿದೆ.

430.18* ಕೋಟಿ ರೂ.

ಸ್ಯಾಕ್ನಿಲ್ಕ್ (sacnilk) ಬಾಕ್ಸ್​ ಆಫೀಸ್​ ವರದಿ ಪ್ರಕಾರ, 4ನೇ ದಿನದ ಹೊತ್ತಿಗೆ, 'ಧುರಂಧರ್ 2: ದಿ ರಿವೆಂಜ್' ಪ್ರಸ್ತುತ 6,813 ಸ್ಕ್ರೀನ್​ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಮತ್ತು ಬೆಳಗ್ಗೆಯ ಪ್ರದರ್ಶನದವರೆಗೆ 21.73 ಕೋಟಿ ರೂ. ಗಳಿಸಿದೆ. ಜಾಗತಿಕವಾಗಿ ಇದು ಚಿತ್ರದ ಒಟ್ಟು ಗಳಿಕೆಯನ್ನು 430.18 ಕೋಟಿ ರೂ.ಗೆ ತಲುಪಿಸಿದೆ ಮತ್ತು ಭಾರತದಲ್ಲಿ ಒಟ್ಟು 361.00 ಕೋಟಿ ರೂ.ಗೆ ತಲುಪಿಸಿದೆ. ವೀಕೆಂಡ್​ ದಿನಾಂತ್ಯದ ಬಳಿಕ ಪೂರ್ತಿ ಸಂಗ್ರಹ ಎಷ್ಟಾಗಿದೆ ಎಂಬುದು ತಿಳಿಯುತ್ತೆ.

ದೇಶಿಯ ಬಾಕ್ಸ್ ಆಫೀಸ್​

  • ಮೊದಲ ದಿನ: 102.55 ಕೋಟಿ ರೂ.
  • ಎರಡನೇ ದಿನ: 80.72 ಕೋಟಿ ರೂ.
  • ಮೂರನೇ ದಿನ: 113.00 ಕೋಟಿ ರೂ.
  • ನಾಲ್ಕನೇ ದಿನ: 21.73* ಕೋಟಿ ರೂ.

ವಿದೇಶಗಳಲ್ಲಿ ಎಷ್ಟು?

'ಧುರಂಧರ್ 2: ದಿ ರಿವೆಂಜ್' ಚಿತ್ರವು ವಿದೇಶಿ ನೆಲಗಳಲ್ಲಿಯೂ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಇಲ್ಲಿಯವರೆಗೆ 15 ಡಾಲರ್​ ಮಿಲಿಯನ್ ಅಂದರೆ 140 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ.
'ಧುರಂದರ್​', ಪಾಕ್​ ಮತ್ತು ಭಾರತದ ನಡುವಿನ ಕೆಲವು ನೈಜ ಘಟನೆಗಳನ್ನು ಆಧರಿಸಿ, ಅದಕ್ಕೆ ಒಂದಷ್ಟು ಕಾಲ್ಪನಿಕ ಕಥೆಯನ್ನು ಬೆರೆಸಿ ಚಿತ್ರವನ್ನು ತೆರೆಗೆ ತರಲಾಗಿದೆ. ಆದಿತ್ಯ ಧರ್ ನಿರ್ದೇಶಿಸಿರುವ ಈ ಚಿತ್ರದಲ್ಲಿ ರಣವೀರ್ ಸಿಂಗ್, ಸಾರಾ ಅರ್ಜುನ್, ಅಕ್ಷಯ್ ಖನ್ನಾ, ಆರ್​.ಮಾಧವನ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಪ್ರಮುಖ ಪಾತ್ರಗಳು ನೋಡುಗರಿಗೆ ರೋಮಾಂಚನಕಾರಿ ಅನುಭವವನ್ನು ನೀಡಿದೆ ಎಂಬುದು ಇತ್ತೀಚಿನ ವಿಮರ್ಶೆಗಳು ಮತ್ತು ರೇಟಿಂಗ್​ಗಳೇ ಒತ್ತಿ ಹೇಳುತ್ತಿವೆ,(ಏಜೆನ್ಸೀಸ್).