ಸಂದೀಪ್​ ರೆಡ್ಡಿ ವಂಗಾ, ರಣವೀರ್ ಸಿಂಗ್  
ಬಾಲಿವುಡ್

ದೀಪಿಕಾಗೂ ಮುಂಚೆಯೇ 'ಸ್ಪಿರಿಟ್​' ನಿರ್ದೇಶಕರ ಆಫರ್​ ರಿಜೆಕ್ಟ್​ ಮಾಡಿದ್ದ ನಟ ರಣವೀರ್​! ಹೀಗಿದೆ ಕಾರಣ

ಪ್ರಮುಖ ಮುಖ್ಯಾಂಶಗಳು

  • ಧುರಂಧರ್​ ಹಿಟ್​ನಲ್ಲಿ ಬಾಲಿವುಡ್​ ಸ್ಟಾರ್ ನಟ ರಣವೀರ್ ಸಿಂಗ್
  • ಪತ್ನಿ ದೀಪಿಕಾ ಪಡುಕೋಣೆಗೂ ಮುಂಚೆಯೇ ಸ್ಪಿರಿಟ್​ ನಿರ್ದೇಶಕನ ಆಫರ್​ ರಿಜೆಕ್ಟ್​ ಮಾಡಿದ್ದ ರಣವೀರ್
  • ಯಾವುದು ಆ ಸಿನಿಮಾ? ಯಾಕಾಗಿ ರಿಜೆಕ್ಟ್​ ಮಾಡಿದ್ದರು?
ಹೈದರಾಬಾದ್​: 2023ರಲ್ಲಿ ತೆರೆಕಂಡ ಬಾಲಿವುಡ್​ನ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಚಿತ್ರದ ಬಳಿಕ ನಟ ರಣವೀರ್ ಸಿಂಗ್ ಅವರಿಗೆ ದೊಡ್ಡ ಮಟ್ಟದ ಹಿಟ್ ಸಿಕ್ಕಿಲ್ಲ. ಆದರೆ, 2025ರಲ್ಲಿ ರಿಲೀಸ್​ ಆದ ಬಹುನಿರೀಕ್ಷಿತ 'ಧುರಂಧರ್' ಸಿನಿಮಾ ನಟನಿಗೆ ಬ್ಲಾಕ್​ಬಸ್ಟರ್​ ಹಿಟ್​ ಕೊರತೆಯನ್ನು ತುಂಬಿದ್ದಲ್ಲದೆ, ಬಾಕ್ಸ್ ಆಫೀಸ್‌ನಲ್ಲಿ ದಾಖಲೆಯ ಕಲೆಕ್ಷನ್​ಗೆ ಸಾಕ್ಷಿಯಾಗಿದೆ. ಸದ್ಯ ಭಾರತೀಯ ಚಿತ್ರೋದ್ಯಮದಲ್ಲಿ ರಣವೀರ್​ ಸಿನಿಮಾ ಭಾರೀ ಸದ್ದು ಮಾಡುತ್ತಿದೆ.
ಈಗಾಗಲೇ ಜಾಗತಿಕವಾಗಿ 1000 ಕೋಟಿ ರೂ. ಸಂಗ್ರಹಿಸಿರುವ ಸಿನಿಮಾ, ಇಂದಿಗೂ ಚಿತ್ರಮಂದಿರ ಮತ್ತು ಮಲ್ಟಿಪ್ಲೆಕ್ಸ್​ಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದೆಲ್ಲದರ ಮಧ್ಯೆ, ತೆಲುಗು ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ನೀಡಿದ ಇತ್ತೀಚಿನ ಸಂದರ್ಶನದಲ್ಲಿ, ರಣವೀರ್​ ತಾವು ಕೊಟ್ಟ ಆಫರ್​ ಅನ್ನು ರಿಜೆಕ್ಟ್​ ಮಾಡಿದ್ದರ ಬಗ್ಗೆ ಸ್ಪಿರಿಟ್​ ನಿರ್ದೇಶಕರು ಮಾತನಾಡಿದ್ದಾರೆ.
ಈ ಹಿಂದೆ 'ಐಡ್ರೀಮ್' ಮೀಡಿಯಾಕ್ಕೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿರುವ ಸಂದೀಪ್ ರೆಡ್ಡಿ, 'ಅರ್ಜುನ್ ರೆಡ್ಡಿ (2017) ಚಿತ್ರವನ್ನು ರೀಮೇಕ್ ಮಾಡಲು ನನಗೆ ಮುಂಬೈನಿಂದ ಹಲವು ಫೋನ್​ ಕಾಲ್​ಗಳು ಬಂದಿತು. ಆಗ ಬಾಲಿವುಡ್​ನಲ್ಲಿ ಕಬೀರ್ ಸಿಂಗ್ (2019) ಎಂಬ ಟೈಟಲ್​ನಡಿ ರೀಮೇಕ್​​ಗೆ ಮುಂದಾದೆವು. ಈ ಚಿತ್ರಕ್ಕೆ ನನ್ನ ಮೊದಲ ಆಯ್ಕೆ ರಣವೀರ್ ಸಿಂಗ್ ಆಗಿದ್ದರು. ಆದರೆ, ಒಂದಷ್ಟು ಕಾರಣಗಳಿಂದ, ರಣವೀರ್ ಆ ಸಿನಿಮಾ ಮಾಡಲು ನಿರಾಕರಿಸಿದರು ಎಂದರು.
"ಅದಾದ ನಂತರ 'ಕಬೀರ್ ಸಿಂಗ್' ನಟ ಶಾಹಿದ್ ಕಪೂರ್‌ಗೆ ಹೋಯಿತು. ಶಾಹಿದ್ ಅವರ ಟ್ರ್ಯಾಕ್ ರೆಕಾರ್ಡ್ ಅಷ್ಟು ಚೆನ್ನಾಗಿರಲಿಲ್ಲ. ಅವರ ಯಾವುದೇ ಸೋಲೋ ಸಿನಿಮಾಗಳು 100 ಕೋಟಿ ರೂ.ಗಿಂತ ಹೆಚ್ಚು ಸಂಗ್ರಹಿಸಿರಲಿಲ್ಲ. ಈ ವೇಳೆ ನೀವ್ಯಾಕೆ ಶಾಹಿದ್ ಜತೆ ಈ ಸಿನಿಮಾ ಮಾಡುತ್ತಿದ್ದೀರಿ ಎಂದು ಕೆಲವರು ಪ್ರಶ್ನಿಸಿದರು. ಆದರೆ, ನನಗೆ ಶಾಹಿದ್ ಮೇಲೆ ನಂಬಿಕೆಯಿದೆ. ಅವರೊಬ್ಬ ಒಳ್ಳೆಯ ನಟ ಎಂದು ತಿಳಿಸಿದೆ" ಎಂದಿದ್ದಾರೆ.

ಸ್ಪಿರಿಟ್​ಗೆ ದೀಪಿಕಾ ಪಡುಕೋಣೆ ಗುಡ್​ಬೈ

ಟಾಲಿವುಡ್​ ನಟ ಪ್ರಭಾಸ್ ನಾಯಕರಾಗಿ ನಟಿಸಿರುವ 'ಸ್ಪಿರಿಟ್' ಚಿತ್ರವನ್ನು ಸಂದೀಪ್​ ನಿರ್ದೇಶಿಸಿದ್ದಾರೆ. ಈ ಚಿತ್ರದ ಆರಂಭದಲ್ಲಿ ದೀಪಿಕಾ ಪಡುಕೋಣೆ ಸಿನಿಮಾದ ನಾಯಕಿ ಎಂದು ಹೇಳಲಾಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಅವರನ್ನು ಕೈಬಿಟ್ಟು, ಯುವನಟಿ ತ್ರಿಪ್ತಿ ದಿಮ್ರಿ ಅವರಿಗೆ ನಾಯಕಿ ಸ್ಥಾನಕ್ಕೆ ಕರೆತರಲಾಯಿತು. ದೀಪಿಕಾ ಹಾಕಿದ್ದ 8 ಗಂಟೆಗಳ ಶಿಫ್ಟ್​, ಕೆಲವು ಡಿಮಾಂಡ್​ ಮತ್ತು ಷರತ್ತುಗಳು ನಿರ್ದೇಶಕರ ಬೇಸರಕ್ಕೆ ಕಾರಣವಾಗಿ, ಅವರನ್ನು ಈ ಬಿಗ್ ಪ್ರಾಜೆಕ್ಟ್​ನಿಂದ ಕೈಬಿಡುವಂತಾಯಿತು ಎಂಬುದು ವರದಿ,(ಏಜೆನ್ಸೀಸ್).