ನಟಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ದಂಪತಿ (ಚಿತ್ರ Instagram) 
ಬಾಲಿವುಡ್

ಪತ್ನಿ ದೀಪಿಕಾ ಜೊತೆ ನ್ಯೂಯಾರ್ಕ್‌ನಲ್ಲಿ ರಣವೀರ್ ಮಸ್ತಿ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಸಂಭ್ರಮದ ಕ್ಷಣಗಳು! Ranveer Singh

Ranveer Singh: ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ದಂಪತಿ ಇತ್ತೀಚೆಗೆ ನ್ಯೂಯಾರ್ಕ್‌ನಲ್ಲಿ ನಡೆದ ಅದ್ಧೂರಿ ಮದುವೆಯೊಂದರಲ್ಲಿ ಭಾಗವಹಿಸಿದ್ದು, ಅವರ ಸಂಭ್ರಮದ ಫೋಟೋಗಳು ಈಗ ಸಾಮಾಜಿಕ ಮಾಧ್ಯಮದಲ್ಲಿ ಸಖತ್​ ವೈರಲ್​​ ಆಗುತ್ತಿವೆ.

ವೈರಲ್​ ಆಗುತ್ತಿರುವ ಕ್ಯಾಂಡಿಡ್​ ಫೋಟೋಗಳು!

ಅಭಿಮಾನಿಗಳು ಹಂಚಿಕೊಂಡಿರುವ ಫೋಟೋಗಳಲ್ಲಿ ದೀಪಿಕಾ ತಮ್ಮ ಸ್ನೇಹಿತರೊಂದಿಗೆ ಸೆಲ್ಫಿ ಕ್ಲಿಕ್ಕಿಸುತ್ತಿರುವ ಆ ಕ್ಷಣ ಅವರ ಸೌಂದರ್ಯ ಮತ್ತು ವಿನಯಂತಿಕೆಯನ್ನು ಎತ್ತಿ ತೋರಿಸಿದೆ. ಇನ್ನೊಂದು ಕಡೆ ರಣವೀರ್​ ಮತ್ತೊಂದು ಕ್ಯಾಮರಾಗೆ ಪೋಸ್​ ಕೊಡುತ್ತಿರುವುದನ್ನು ಕಾಣಬಹುದಾಗಿದೆ. ಈ ದಂಪತಿ ಬಿಡುವಿಲ್ಲದ ಸಮಯದಲ್ಲೂ ತಮ್ಮ ಆತ್ಮೀಯರ ಮದುವೆಯಲ್ಲಿ ಸಂಭ್ರಮಿಸುವ ಫೋಟೋಗಳನ್ನು ಹಂಚಿಕೊಂಡಿದ್ದು. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್​ ಆಗುತ್ತಿವೆ.
ಮದುವೆ ಸಂಭ್ರಮದಲ್ಲಿ ನಟಿ ದೀಪಿಕಾ ಕೆಂಪು ಮತ್ತು ಚಿನ್ನದ ಬಣ್ಣ ಇರುವ ಸೀರೆಯನ್ನು ಧರಿಸಿ ಮಿಂಚುತ್ತಿದ್ದರೆ, ರಣವೀರ್​ ನೀಲಿ ಬಣ್ಣದ ಸಾಪ್ರದಾಯಿಕ ಸೂಟ್​ ಧರಿಸಿ ಕಂಗೊಳಿಸುತ್ತಿದ್ದರು. ಈ ಉಡುಗೆ ದಂಪತಿಯ ಅಂದವನ್ನು ಇನ್ನಷ್ಟು ಹೆಚ್ಚು ಮಾಡಿತು.
ಈ ಹಿಂದೆ ಈ ದಂಪತಿ ಧುರಂಧರ್​ ಯಶಸ್ಸನ್ನು ನ್ಯೂಯಾರ್ಕ್‌ನಲ್ಲಿ ವಿಶೇಷವಾಗಿ ಆಚರಿಸಿಕೊಂಡಿದ್ದರು. ಈ ವೇಳೆ ಅವರು ಪ್ರಸಿದ್ಧ ಶೆಫ್ ವಿಕಾಸ್ ಖನ್ನಾ ಅವರ NYC ರೆಸ್ಟೋರೆಂಟ್ ಬಂಗ್ಲೋಕ್ಕೆ ಭೇಟಿ ನೀಡಿ ಭಾರತೀಯ ಸಾಂಪ್ರದಾಯಕ ಮೋದಕಗಳನ್ನು ತಯಾರಿಸಿ, ರುಚಿ ಸವಿದಿದ್ದರು.
ಇದಾದ ನಂತರ ವಿಕಾಸ್​ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ದೀಪಿಕಾ ಮೋದಕ ಆಕಾರಕ್ಕೆ ತರಲು ಪ್ರಯತ್ನಿಸುತ್ತಿರುವುದು, ರಣವೀರ್ ಅವರನ್ನು ಶೆಫ್ ಮೋದಕ ತಿನ್ನಿಸುವ ಸಿಹಿ ಕ್ಷಣಗಳ ವಿಡಿಯೋವನ್ನು ಹಂಚಿಕೊಂಡಿದ್ದರು.
ರಣವೀರ್ ಅವರ ' ಧುರಂಧರ್' ಸಧ್ಯ ಭಾರೀ ಸದ್ದು ಮಾಡುತ್ತಿದೆ. ಇದು ಬಿಡುಗಡೆಯಾದ ಒಂದು ತಿಂಗಳ ನಂತರವೂ ಬಾಕ್ಸ್ ಆಫೀಸ್‌ನಲ್ಲಿ ಪ್ರಾಬಲ್ಯ ಸಾಧಿಸಿದ್ದು, ಇದು 1200 ಕೋಟಿಗೂ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಆಗಿ ಹೊರಹೊಮ್ಮಿದೆ. ಇದು ಇಲ್ಲಿಯವರೆಗಿನ ಅತಿ ಹೆಚ್ಚು ಗಳಿಕೆ ಮಾಡಿದ ಹಿಂದಿ ಚಿತ್ರವಾಗಿದೆ. ಅವರು ಮುಂದಿನ ಬಾರಿ ' ಪ್ರಲೇ' ಎಂಬ ಜೊಂಬಿ ಚಿತ್ರದಲ್ಲಿ ರಣವೀರ್​ ಕಾಣಿಸಿಕೊಳ್ಳಲಿದ್ದಾರೆ .
ನಟಿ ದೀಪಿಕಾ ಕಿಂಗ್​ ಚಿತ್ರದಲ್ಲಿ ಶಾರುಖ್ ಖಾನ್ ಅವರೊಂದಿಗೆ ತೆರೆ ಹಂಚಿಕೊಳ್ಳಲಿದ್ದು, ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ಚಿತ್ರವು 2026ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಅಟ್ಲೀ ಅವರ ' AA22xA6' ಚಿತ್ರದಲ್ಲಿ ಅಲ್ಲು ಅರ್ಜುನ್ ಅವರೊಂದಿಗೆ ಪರದೆ ಹಂಚಿಕೊಳ್ಳಲಿದ್ದಾರೆ (ಏಜೆನ್ಸೀಸ್​).