- ಬಾಲಿವುಡ್ ಸ್ಟಾರ್ ದಂಪತಿ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ
- ಪ್ರಸ್ತುತ ನ್ಯೂಯಾರ್ಕ್‌ನಲ್ಲಿ ಚಳಿಗಾಲದ ರಜೆಯನ್ನು ಸಖತ್ ಆಗಿ ಆನಂದಿಸುತ್ತಿದ್ದಾರೆ
- ನ್ಯೂಯಾರ್ಕ್ನ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ನಡೆದ NBA ಪಂದ್ಯದಲ್ಲಿ ಈ ಜೋಡಿ ಮೋಡಿ ಮಾಡಿದೆ
- ಇಬ್ಬರೂ ಕಪ್ಪು ಬಣ್ಣದ ಸ್ಟೈಲಿಶ್ ಔಟ್‌ಫಿಟ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ
Ranveer Singh: ಬಾಲಿವುಡ್ ಸ್ಟಾರ್ ದಂಪತಿ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಪ್ರಸ್ತುತ ನ್ಯೂಯಾರ್ಕ್‌ನಲ್ಲಿ ಚಳಿಗಾಲದ ರಜೆಯನ್ನು ಸಖತ್ ಆಗಿ ಆನಂದಿಸುತ್ತಿದ್ದಾರೆ. ಇತ್ತೀಚೆಗೆ ನ್ಯೂಯಾರ್ಕ್ನ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ನಡೆದ NBA ಪಂದ್ಯದಲ್ಲಿ ಈ ಜೋಡಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ.
ಇಬ್ಬರೂ ಕಪ್ಪು ಬಣ್ಣದ ಸ್ಟೈಲಿಶ್ ಔಟ್‌ಫಿಟ್‌ಗಳಲ್ಲಿ ಕಾಣಿಸಿಕೊಂಡಿದ್ದು, ದೀಪಿಕಾ ಓವರ್‌ಸೈಜ್ ಲೆದರ್ ಜಾಕೆಟ್, ವೈಟ್ ಟೀ-ಶರ್ಟ್ ಮತ್ತು ಬ್ಲೂ ಜೀನ್ಸ್ ಧರಿಸಿದ್ದರೆ, ರಣವೀರ್ ಕಪ್ಪು ಬಣ್ಣದ ಜಾಕೆಟ್, ಟೀ-ಶರ್ಟ್, ಪ್ಯಾಂಟ್ಸ್ ಮತ್ತು ಬೀನಿ ಹ್ಯಾಟ್‌ನ್ನು ಧರಿಸಿದ್ದರು. ಈ ವೇಳೆ ರಣವೀರ್ ದೀಪಿಕಾ ಅವರಿಗೆ ಪಂದ್ಯದ ಬಗ್ಗೆ ವಿವರಿಸುತ್ತಿರುವುದು ಕೂಡಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವೇಳೆ ಸ್ಥಳದಲ್ಲಿದ್ದ ಅಭಿಮಾನಿಗಳು ದಂಪತಿ ಜೊತೆ ಚಿತ್ರಗಳನ್ನು ಕ್ಲಿಕ್ಕಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಆ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
NBA ಯ ಭಾರತದ ಬ್ರಾಂಡ್ ಅಂಬಾಸಿಡರ್ ಆಗಿ ರಣವೀರ್ ಸಿಂಗ್ ನೇಮಕ
ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ಅಸೋಸಿಯೇಷನ್ (NBA) 2021 ರಲ್ಲಿ ಭಾರತದ ಬ್ರಾಂಡ್ ರಾಯಭಾರಿಯಾಗಿ ರಣವೀರ್ ಸಿಂಗ್ ಅವರನ್ನು ನೇಮಕ ಮಾಡಿದ್ದು, ನಟ ಅಂದಿನಿಂದ ಭಾರತದಲ್ಲಿ ಲೀಗ್ನ ಫ್ರೊಫೈಲ್ನ್ನು ಹೆಚ್ಚಿಸಲು NBA ಜೊತೆ ಕೆಲಸ ಮಾಡುತ್ತಿದ್ದಾರೆ.
ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಅವರ ವೃತ್ತಿ ಜೀವನ
ಕೆಲಸದ ವಿಚಾರಕ್ಕೆ ಬಂದರೆ, ರಣವೀರ್ ಸಿಂಗ್ ಅವರ ಧುರಂಧರ್ ತೆರೆ ಕಂಡ ನಂತರದಿಂದ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಯಶಸ್ಸನ್ನು ಸಾಧಿಸಿದೆ. ಈ ಚಿತ್ರದಲ್ಲಿ ಅಕ್ಷಯ್ ಖನ್ನಾ, ಆರ್ ಮಾಧವನ್, ಸಂಜಯ್ ದತ್ ಮತ್ತು ಇತರರೊಂದಿಗೆ ರಣವೀರ್ ಕಾಣಿಸಿಕೊಂಡಿದ್ದಾರೆ. ಮತ್ತೊಂದೆಡೆ, ದೀಪಿಕಾ ಪಡುಕೋಣೆ ಶಾರುಖ್ ಖಾನ್ ಅವರ ಕಿಂಗ್ ಚಿತ್ರದಲ್ಲಿ ತೆರೆಯನ್ನು ಹಂಚಿಕೊಂಡಿದ್ದು, ಅಟ್ಲೀ ಅವರ ಮುಂದಿನ ಮಹತ್ವದ ಯೋಜನೆಯಾದ 'AA22 x A6' ನಲ್ಲಿ ದಕ್ಷಿಣದ ಸೂಪರ್‌ಸ್ಟಾರ್ ಅಲ್ಲು ಅರ್ಜುನ್ ಜೊತೆ ಕಾಣಿಸಿಕೊಳ್ಳಲಿದ್ದಾರೆ (ಏಜೆನ್ಸೀಸ್).