Juhi Bhatt Ranveer Allahbadia 
ಬಾಲಿವುಡ್

'ಗರ್ಲ್​ಫ್ರೆಂಡ್ ಜೊತೆ ಇದಿನಿ ಬಿಟ್ಬಿಡ್ರಪ್ಪ' ಎಂದ ರಣವೀರ್​; ಯೂಟ್ಯೂಬರ್ ಜೊತೆ ಕಂಡ Juhi Bhatt ಯಾರು?

ಪ್ರಮುಖ ಮುಖ್ಯಾಂಶಗಳು

  • ಮುಂಬೈ ವಾಖೆಂಡೆ ಸ್ಟೇಡಿಯಂನಲ್ಲಿ ಗರ್ಲ್​ಫ್ರೆಂಡ್ ಜೊತೆ ಬಂದ ಯೂಟ್ಯೂಬರ್ ರಣವೀರ್
  • ಸೆಲ್ಫಿಗೆ ಕರ್ದಿದ್ದಕ್ಕೆ ಗರ್ಲ್​ಫ್ರೆಂಡ್ ಜೊತೆ ಇದಿನಿ ಎಂದು ತಿರಸ್ಕಾರ
  • ಬಾಲಿವುಡ್​ ನಟಿ, ಡ್ಯಾನ್ಸರ್​ ಆಗಿರುವ ಜೂಹಿ ಭಟ್ ಜೊತೆ ಸಂಬಂಧ
ಮುಂಬೈ: ಪೋಷಕರ ಲೈಂಗಿಕತೆ ಬಗ್ಗೆ ಮಾತನಾಡಿ ಕೋರ್ಟ್​ನಿಂದ ಛೀಮಾರಿ ಹಾಕಿಸಿಕೊಂಡಿದ್ದ ಯೂಟ್ಯೂಬರ್ ರಣವೀರ್​ ಅಲ್ಲಾಬಾಡಿಯಾ(Ranveer Allahbadia) ಸದ್ಯ ಗರ್ಲ್​ ಫ್ರೆಂಡ್​ ಜೂಹಿ ಭಟ್​​ ಜೊತೆಗೆ ರೌಂಡ್ಸ್​ ತಿರುಗುತ್ತಿರುವ ವಿಡಿಯೋಗಳು ಹಾಗೂ ಆಕೆಯೊಂದಿಗೆ ಸಂಬಂಧ ಇರುವ ಬಗ್ಗೆ ದೃಢಪಡಿಸಿರುವುದು ಸದ್ಯ ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಸ್ಟೇಡಿಯಂನಲ್ಲಿ ಡೇಟಿಂಗ್

ಏಪ್ರಿಲ್​ 12ರಂದು Mumbai Indians ಮತ್ತು Royal Challengers ನಡುವೆ ನಡೆದ ಐಪಿಎಲ್​ ಪಂದ್ಯ ವೀಕ್ಷಿಸಲು ಜೂಹಿ ಭಟ್​ ಜೊತೆಗೆ ಮುಂಬೈನ ವಾಂಖೆಡೆ ಕ್ರೀಡಾಂಗಣಕ್ಕೆ ಭೇಟಿ ಕೊಟ್ಟಿದ್ದರು. ಅವರು ವೈಟ್​ ಟೀ ಶರ್ಟ್​, ಆಕೆಯೂ ವೈಟ್ ಶರ್ಟ್​ ಧರಿಸಿ ಸ್ಟೇಡಿಯಂಗೆ ಎಂಟ್ರಿ ಕೊಟ್ಟಿದ್ದಾರೆ. ಆ ಮೂಲಕ ಒಂದೇ ರೀತಿ ಬಟ್ಟೆ ಧರಿಸಿದ್ದ ಅವರು ಗಮನಸೆಳೆದರು. ಅವರಿಬ್ಬರ ಆಗಮನವಾಗುತ್ತಲೇ ಬಪಾಪರಾಜಿಗಳು ಅವರಿಬ್ಬರ ವಿಡಿಯೋ ಮಾಡಲು ಮುಂದಾಗಿದ್ದಾರೆ. ಅವರನ್ನು ದಿಕ್ಕರಿಸಿ, ಆಕೆಯ ಕೈ ಹಿಡಿದು ತೆರಳುವುದು ವಿಡಿಯೋದಲ್ಲಿದೆ.

ಗರ್ಲ್​ಫ್ರೆಂಡ್ ಜೊತೆ ಮ್ಯಾಚ್ ನೋಡಿದ ರಣವೀರ್

ಯೂಟ್ಯೂಬರ್​ ರಣವೀರ್​ ಅಲ್ಲಬಾಡಿಯಾ ವೈಯಕ್ತಿಕ ಜೀವನದ ಬಗ್ಗೆ ಇದ್ದ ಕುತೂಹಲಕ್ಕೆ ತೆರೆ ಎಳೆದಿದ್ದಾರೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ MI vs RCB ಐಪಿಎಲ್ ಪಂದ್ಯದ ವೇಳೆ ಅವರು ಜೂಹಿ ಭಟ್ ಅವರೊಂದಿಗೆ ಕಾಣಿಸಿಕೊಂಡಿದ್ದು, "ನಾನು ನನ್ನ ಗರ್ಲ್​​ಫ್ರೆಂಡ್​ ಜೊತೆಗಿದ್ದೇನೆ" ಎಂದು ಹೇಳುವ ಮೂಲಕ ತಮ್ಮ ಸಂಬಂಧವನ್ನು ಅಧಿಕೃತವಾಗಿ ದೃಢಪಡಿಸಿದ್ದಾರೆ.
ವಾಖೆಂಡೆ ಸ್ಟೇಡಿಯಂ ಬಳಿ ಅವರ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದಾಗ, ರಣವೀರ್ ನಯವಾಗಿ ನಿರಾಕರಿಸುತ್ತಾ, "ನಾನು ಈಗ ನನ್ನ ಗರ್ಲ್‌ಫ್ರೆಂಡ್ ಜೊತೆಗಿದ್ದೇನೆ" ಎಂದು ಕ್ಯಾಮೆರಾ ಮುಂದೆಯೇ ಹೇಳಿದ್ದಾರೆ.

ಯಾರು ಈ ಜೂಹಿ ಭಟ್

ಜೂಹಿ ಭಟ್​​​ ಬಾಲಿವುಡ್​ನ ನಟಿ. ವೃತ್ತಿಪರ ನೃತ್ಯಗಾರ್ತಿ ಮತ್ತು ಡಿಜಿಟಲ್ ಕ್ರಿಯೇಟರ್. ಈಕೆ ಫಕ್ರೆ3 ಎನ್ನುವ ಸಿನಿಮಾನದಲ್ಲಿನ ಒಂದು ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಹಲವು ವೆಬ್​ ಸೀರಿಸ್​ನಲ್ಲಿ ಆಕ್ಟ್​ ಮಾಡಿದ್ದಾರೆ. ಇವರಿಗೆ ಇನ್​ಸ್ಟಾಗ್ರಾಮ್​ನಲ್ಲಿ 4.5 ಲಕ್ಷಕ್ಕೂ ಹೆಚ್ಚು ಫಾಲೋವರ್‌ಗಳನ್ನು ಇದ್ದಾರೆ.

ನಿಕ್ಕಿ ಶರ್ಮಾ ಜೊತೆ ಸಂಬಂಧ

ಈ ಹಿಂದೆ ನಟಿ ನಿಕ್ಕಿ ಶರ್ಮಾ ಅವರೊಂದಿಗೆ ರಣವೀರ್ ಸಂಬಂಧ ಹೊಂದಿದ್ದರು ಎನ್ನುವ ಗಾಸಿಪ್​ ಹರಿದಾಡಿತ್ತು. ಆದರೆ ಇತ್ತೀಚೆಗಷ್ಟೇ ಅವರು ತಮ್ಮ 'ಭೀಕರ ಬ್ರೇಕಪ್' ಬಗ್ಗೆ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ್ದರು. ಈಗ ಜೂಹಿ ಜೊತೆಗಿನ ಹೊಸ ಅಧ್ಯಾಯವನ್ನು ಅವರು ಅಧಿಕೃತಗೊಳಿಸಿದ್ದಾರೆ, (ಏಜೆನ್ಸೀಸ್​).