- ತಮಾಷಾ ಸಿನಿಮಾದ ನಂತ್ರ ಒಟ್ಟಾಗಿ ನಟಿಸಲಿದ್ದಾರೆ ರಣಬೀರ್-ದೀಪಿಕಾ ಪಡುಕೋಣೆ
- ಬ್ರಹ್ಮಾಸ್ತ್ರ-2 ಸಿನಿಮಾ ಶೂಟಿಂಗ್ ಡಿಸೆಂಬರ್ ಕೊನೆ ವಾರದಿಂದ ಶುರು
- ಅಯಾನ್ ಮುಖರ್ಜಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬ್ರಹ್ಮಾಸ್ತ್ರ -2
Brahmastra 2: 2007ರಲ್ಲಿ ಹಾಟ್ ಟಾಪಿಕ್ ಎಂದರೆ ಅದು ರಣಬೀರ್ ಕಪೂರ್ ಹಾಗೂ ದೀಪಿಕಾ ಪಡುಕೋಣೆಯ ಪ್ರೀತಿ ವಿಚಾರ..ಆದರೆ, ಇದು ಹೆಚ್ಚು ಕಾಲ ಉಳಿದಿಲ್ಲ. ದೀಪಿಕಾ ಜೊತೆ ಡೇಟಿಂಗ್ನಲ್ಲಿರುವಾಗಲೇ ಕತ್ರಿನಾ ಕೈಫ್ನೊಂದಿಗೂ ಸಂಬಂಧವಿಟ್ಟುಕೊಂಡಿದ್ದ ಕಾರಣ ಆ ಸಂಬಂಧವನ್ನು ಡಿಂಪಲ್ ಕ್ವೀನ್ ದೀಪಿಕಾ ಪಡುಕೋಣೆ ಕಡೆದುಕೊಂಡಿದ್ದರು. ಸದ್ಯ ಇಬ್ಬರು ಪ್ರತ್ಯೇಕವಾಗಿ ದಾಂಪತ್ಯ ಜೀವನ ನಡೆಸುತ್ತಿದ್ದು ಸುಖವಾಗಿದ್ದಾರೆ.
ದೀಪಿಕಾ ಪಡುಕೋಣೆ ಮತ್ತು ರಣಬೀರ್ ಕಪೂರ್ ಫ್ಯಾನ್ಸ್ಗೆ ಸಿಹಿಸುದ್ದಿ ಏನಂದರೆ ಇವರಿಬ್ಬರ ಕಾಂಬಿನೇಷನ್ನಲ್ಲಿ ಬ್ರಹ್ಮಾಸ್ತ್ರ 2 ಸಿನಿಮಾದ ಶೂಟಿಂಗ್ ಈ ವರ್ಷದ ಕೊನೆಯಲ್ಲಿ ಶುರುವಾಗಲಿದೆ ಎನ್ನಲಾಗುತ್ತಿದೆ.
2022ರಲ್ಲಿ ತೆರೆಗೆ ಬಂದಿದ್ದ ಬ್ರಹ್ಮಾಸ್ತ್ರ ಸಿನಿಮಾದಲ್ಲಿ ಆಲಿಯಾ ಭಟ್, ರಣಬೀರ್ ಕಪೂರ್, ದೀಪಿಕಾ ಪಡುಕೋಣೆ, ಅಮಿತಾ ಬಚ್ಚನ್, ಮೌನಿರಾಯ್, ನಾಗಾರ್ಜುನ್ ಸಕ್ಕಿನೇನಿ ಸೇರಿದಂತೆ ತಾರಾ ಬಣವೇ ಬಣ್ಣ ಹಚ್ಚಿತ್ತು. ಶಿವ ಭಾರತೀಯ ಪುರಾಣ ಆಧುನಿಕ ಜಗತ್ತನ್ನು ಬೆರೆಸುವ ಫ್ಯಾಂಟಿಸಿ ಚಿತ್ರ ಬ್ರಹ್ಮಾಸ್ತ್ರ 1ರದ್ದಾಗಿತ್ತು. ಶಿವ ಎಂಬ ಯುವಕ ಬ್ರಹ್ಮಾಂಡದ ಶಕ್ತಿ ಶಾಲಿ ಅಸ್ತ್ರವನ್ನು ದುಷ್ಟಶಕ್ತಿಯಿಂದ ರಕ್ಷಿಸಲು ನಡೆಸುವ ಹೋರಾಟವೇ ಕಥಾ ಹಂದರ. ಈ ಸಿನಿಮಾಗೆ ಪಾಸಿಟಿವ್ ಮತ್ತು ನೆಗೆಟಿವ್ ಕಾಮೆಂಟ್ಗಳು ಸಿಕ್ಕಿದ್ದವು.
ಬ್ರಹ್ಮಾಸ್ರ-2 ; ದೇವ್
ಅಯಾನ್ ಮುಖರ್ಜಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬ್ರಹ್ಮಾಸ್ರ-2 ; ದೇವ್ ಸಹ ಫ್ಯಾಂಟಸಿ ಸಾಹಸ ಕತೆಯಾಗಿದ್ದು, ಈ ಭಾಗದಲ್ಲಿ ದೀಪಿಕಾ ಪಡುಕೋಣೆ ಮತ್ತು ರಣಬೀರ್ರಿಗೆ ಹೆಚ್ಚು ಒತ್ತು ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ದೇವ್ ಮತ್ತು ಅಮೃತ ಪಾತ್ರ ಹೆಚ್ಚು ಇರಲಿದೆ ಎನ್ನಲಾಗಿದೆ. ಅಂತೂ ತಮಾಷಾ ಸಿನಿಮಾ ಸಕ್ಸಸ್ ಕಂಡ 11 ವರ್ಷಗಳ ನಂತರ ಮುಖ್ಯ ಭೂಮಿಕೆಯಲ್ಲಿ ಮಾಜಿ ಪ್ರೇಮಿಗಳು ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ರಾಮಾಯಣ ಸಿನಿಮಾದ ಶೂಟಿಂಗ್ ಪೂರ್ಣಗೊಂಡಿದೆ ರಣಬೀರ್ ಅವರು ಸಿನಿಮಾದ ಪ್ರಚಾರಕ್ಕೆಂದು ಅಮೆರಿಕದಲ್ಲಿ ಬೀಡುಬಿಟ್ಟಿದ್ದಾರೆ. ಅದೇನೆ ಇರಲಿ ಈ ವರ್ಷದ ಅಂತ್ಯದಲ್ಲಿ ಸಿನಿಮಾ ಶೂಟಿಂಗ್ ಆರಂಭಿಸಲಾಗುತ್ತದೆ ಎಂದು ಸಿನಿಮಾ ತಂಡ ಹೇಳಿದೆ. ದೀಪಿಕಾ ಮತ್ತು ರಣಬೀರ್ ಪುನರ್ಮಿಲನವು ಸದ್ಯ ಅವರ ಅಭಿಮಾನಿಗಳಲ್ಲಿ ಸಂತಸವನ್ನು ಮೂಡಿಸಿದೆ.
ದೀಪಿಕಾ -ರಣಬೀರ್ ನಟನೆಯ ಸಿನಿಮಾ ಯಾವುದು?
ರಣಬೀರ್ ಮತ್ತು ದೀಪಿಕಾ ಪಡುಕೋಣೆ ಸದ್ಯ ದೂರವಿರಬಹುದು ಆದರೆ, ಅವರಿಬ್ಬರ ಕಾಂಬಿನೇಷನ್ನಲ್ಲಿ ತೆರೆ ಮೇಲೆ ಮೂಡಿಬಂದಂತಹ 2013ರಲ್ಲಿ ರಿಲೀಸ್ ಆದ ಯೇ ಜವಾನಿ ಹೈ ದಿವಾನಿ. 2008ರಲ್ಲಿ ಬಿಡುಗಡೆಯಾದ ಬಚ್ನಾ ಏ ಹಸೀನೋ ಹಾಗೂ 2015ರಲ್ಲಿ ರಿಲೀಸ್ ಆದ ತಮಾಷಾ ಬ್ಲಾಕ್ ಬ್ಲಸ್ಟರ್ ಹಿಟ್ ಕಂಡಿತ್ತು.
ರಣಬೀರ್ನಿಂದ ದೀಪಿಕಾ ದೂರವಾಗಿದ್ಯಾಕೆ?
2007ರಲ್ಲಿ ದೀಪಿಕಾ ಪಡುಕೋಣೆ ಮತ್ತು ರಣಬೀರ್ ನಡುವಿನ ಸಂಬಂಧ ಪ್ರಚಾರವಾಗಿತ್ತು. ಇಬ್ಬರು ಅಲ್ಲಲ್ಲಿ ಕಾಣಿಸಿಕೊಂಡು ಸುದ್ದಿಯಲ್ಲಿರುತ್ತಿದ್ದರು. ಆದರೆ, 2009ರಲ್ಲಿ ಬೇರೆಯವರ ಜೊತೆಗೆ ದೈಹಿಕ ಸಂಪರ್ಕ ಹೊಂದುವ ಮೂಲಕ ದ್ರೋಹ ಮಾಡಲಾಗಿದೆ ಎಂದು ದೂರ ಉಳಿದರು. ಇಷ್ಟಾಗಿಯೂ ಅವರು ತಮಾಶಾ ಸೇರಿದಂತೆ ಯೇ ಜವಾನಿ ಹೈ ದಿವಾನಿಯಲ್ಲಿ ನಟಿಸಿದ್ದರು,(ಏಜೆನ್ಸೀಸ್).