4000 ಕೋಟಿ ಬಜೆಟ್ ಓಕೆ ಆದ್ರೆ ಈ ಒಂದು ಎಡವಟ್ಟು ಹೇಗಾಯ್ತು? ರಾಮಾಯಣ ಟೀಸರ್‌ನಲ್ಲಿ ಇದನ್ನು ಗಮನಿಸಿದ್ದೀರಾ? Ramayana Teaser
- ಹನುಮಾನ್ ಜಯಂತಿಯ ಸಂದರ್ಭದಲ್ಲಿ ಗುರುವಾರ ರಾಮಾಯಣ ಸಿನಿಮಾ ಟೀಸರ್ ಬಿಡುಗಡೆಯಾಯಿತು
- ನಿನ್ನೆ ಬಿಡುಗಡೆಯಾದ ಅದ್ಧೂರಿ ಟೀಸರ್‌ನಲ್ಲಿ ಶ್ರೀರಾಮನ ಪಾತ್ರವನ್ನು ಪರಿಚಯಿಸಲಾಯಿತು
- ಆದರೆ, ಶ್ರೀರಾಮನು ನಡೆದು ಹೋಗುವಾಗ ಹೂವುಗಳಿಂದ ಸ್ವಾಗತಿಸುವ ದೃಶ್ಯದಲ್ಲಿ ಒಂದು ತಪ್ಪಿತ್ತು
- 4 ಸಾವಿರ ಕೋಟಿ ರೂ.ಗಳ ಬೃಹತ್ ಬಜೆಟ್ ಚಿತ್ರದಲ್ಲಿ ಈ ಸಣ್ಣ ತಪ್ಪು ಹೇಗಾಯ್ತು ಎಂದು ನೆಟ್ಟಿಗರು ಕೇಳುತ್ತಿದ್ದಾರೆ
Ramayana Teaser : ಕೆಲವು ಕತೆಗಳನ್ನು ಸಾಕಷ್ಟು ಬಾರಿ ಬೆಳ್ಳಿ ಪರದೆಯ ಮೇಲೆ ತೋರಿಸಲಾಗುತ್ತದೆ. ಅದು ಎಲ್ಲರಿಗೂ ಪರಿಚಿತ ಕತೆಯಾಗಿದ್ದರು ಕೂಡ ನೀವು ಅದನ್ನು ಮತ್ತೆ ಮತ್ತೆ ನೋಡಲು ಬಯಸುತ್ತೀರಿ. ಅಂತಹ ಕತೆಗಳಲ್ಲಿ ಮಹಾಕಾವ್ಯ ರಾಮಾಯಣವು ಕೂಡ ಒಂದು. ಇದೀಗ ಮತ್ತೊಮ್ಮೆ ರಾಮನ ಕತೆಯನ್ನು ಕಣ್ತುಂಬಿಕೊಳ್ಳುವ ಅವಕಾಶ ಬರುತ್ತಿದೆ.
ಸಿನಿಮಾದ ಹೆಸರೇ ರಾಮಾಯಣ. ಈ ಸಿನಿಮಾದಲ್ಲಿ ರಣಬೀರ್ ಕಪೂರ್ ಅವರು ರಾಮನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ, ಸಾಯಿ ಪಲ್ಲವಿ ಸೀತೆಯ ಪಾತ್ರವನ್ನು ಮತ್ತು ಕನ್ನಡದ ರಾಕಿಂಗ್ ಸ್ಟಾರ್ ಯಶ್ ರಾವಣನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರಕ್ಕಾಗಿ ಬರೋಬ್ಬರಿ 4000 ಕೋಟಿ ರೂ. ಬಜೆಟ್ ಖರ್ಚು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಚಿತ್ರತಂಡವಾಗಲಿ ಅಧಿಕೃತವಾಗಿ ಹೇಳಿಲ್ಲ. ಖರ್ಚಿನ ವಿಚಾರ ಕೇವಲ ವದಂತಿಯಷ್ಟೇ. ಈ ಚಿತ್ರದ ನಿರ್ಮಾಪಕರಲ್ಲಿ ನಟ ಯಶ್ ಕೂಡ ಒಬ್ಬರು.
ಟೀಸರ್‌ನಲ್ಲಿ ನೀವಿದನ್ನು ಗಮನಿಸಿದ್ದೀರಾ?
ಹನುಮಾನ್ ಜಯಂತಿಯ ಸಂದರ್ಭದಲ್ಲಿ, ಗುರುವಾರ (ಏಪ್ರಿಲ್ 2) ರಾಮಾಯಣ ಸಿನಿಮಾ ಟೀಸರ್ ಬಿಡುಗಡೆಯಾಯಿತು. ಅದರಲ್ಲಿ, ಶ್ರೀರಾಮನ ಪಾತ್ರವನ್ನು ಪರಿಚಯಿಸಲಾಯಿತು. ರಾಮನು ಶಿವ ಧನುಸ್ಸು ಮುರಿಯುವುದರಿಂದ ಹಿಡಿದು ಕಾಡಿಗೆ ವನವಾಸ ಹೋಗುವವರೆಗಿನ ಅನೇಕ ದೃಶ್ಯಗಳ ಝಲಕ್ ಅನ್ನು ಟೀಸರ್‌ನಲ್ಲಿ ಪ್ರದರ್ಶಿಸಲಾಗಿದೆ. ಆದಾಗ್ಯೂ, ಶ್ರೀರಾಮನು ನಗರದ ಬೀದಿಗಳಲ್ಲಿ ನಡೆಯುವಾಗ ಜನರು ಶ್ರೀರಾಮನನ್ನು ಹೂವುಗಳಿಂದ ಸ್ವಾಗತಿಸುವ ದೃಶ್ಯದಲ್ಲಿ ಒಂದು ತಪ್ಪಿತ್ತು. ಅದೇನೆಂದರೆ, ವ್ಯಕ್ತಿಯ ಪೇಟದ ಬಣ್ಣ ಬದಲಾಗುತ್ತದೆ. ಮೊದಲು ಅದು ನೀಲಿ ಬಣ್ಣಕ್ಕೆ ತಿರುಗಿತ್ತದೆ. ಆನಂತರ ಬದನೆಕಾಯಿ ಬಣ್ಣ ಮತ್ತು ನಂತರದಲ್ಲಿ ಮತ್ತೆ ನೀಲಿ ಬಣ್ಣಕ್ಕೆ ಬದಲಾಗುತ್ತದೆ.
ಇದು ಹೇಗಾಯ್ತು?
ಟೀಸರ್ನ 34 ಸೆಕೆಂಡುಗಳಿಂದ 38 ಸೆಕೆಂಡುಗಳ ನಡುವೆ ಇದು ಸ್ಪಷ್ಟವಾಗಿ ಗೋಚರಿಸುತ್ತದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 4 ಸಾವಿರ ಕೋಟಿ ರೂ.ಗಳ ಬೃಹತ್ ಬಜೆಟ್ ಚಿತ್ರದಲ್ಲಿ ಈ ಸಣ್ಣ ತಪ್ಪನ್ನು ಹಾಗೆ ಬಿಡಲು ಕಾರಣವೇನು? ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು ಇದನ್ನು VFX ಸಮಸ್ಯೆಯಲ್ಲ ಆದರೆ ಕಲರ್ ಗ್ರೇಡಿಂಗ್ ಸಮಸ್ಯೆ ಮತ್ತು ಇದನ್ನು ಗಂಭೀರವಾಗಿ ಪರಿಗಣಿಸಬಾರದು ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನೆಂದು ಕಾಮೆಂಟ್ ಮೂಲಕ ನಮಗೆ ತಿಳಿಸಿ.
ಇನ್ನು ರಾಮಾಯಣ ಚಿತ್ರದ ವಿಷಯಕ್ಕೆ ಬರೋಣ. ನಿತೀಶ್ ತಿವಾರಿ ನಿರ್ದೇಶನದ ಈ ಚಿತ್ರವನ್ನು ನಮಿತ್ ಮಲ್ಹೋತ್ರಾ ನಿರ್ಮಿಸುತ್ತಿದ್ದಾರೆ. ಮೊದಲ ಭಾಗ ಈ ವರ್ಷದ ದೀಪಾವಳಿಗೆ ಮತ್ತು ಎರಡನೇ ಭಾಗ ಮುಂದಿನ ವರ್ಷದ ದೀಪಾವಳಿಗೆ ಬಿಡುಗಡೆಯಾಗಲಿದೆ. 8 ಆಸ್ಕರ್ ಪ್ರಶಸ್ತಿಗಳನ್ನು ಗೆದ್ದಿರುವ ಡಿಎನ್‌ಇಜಿ ಈ ಸಿನಿಮಾದ ವಿಎಫ್‌ಎಕ್ಸ್ ಮಾಡುವ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ಹನುಮ್ ಜಿಮ್ಮರ್ ಮತ್ತು ಎಆರ್ ರೆಹಮಾನ್ ಸಂಗೀತ ನೀಡುತ್ತಿದ್ದಾರೆ, (ಏಜೆನ್ಸೀಸ್).