ಹನುಮ ಜಯಂತಿಯ ದಿನ ರಣಬೀರ್ ಕಪೂರ್ ಅಭಿನಯದ 'ರಾಮಾಯಣ' ಚಿತ್ರದ ಫಸ್ಟ್ ಲುಕ್ ಬಿಡುಗಡೆ 
ಬಾಲಿವುಡ್

ಹನುಮ ಜಯಂತಿಯಂದೇ 'ರಾಮಾಯಣ' ಧಮಾಕ: ಟ್ವಿಟರ್‌ನಲ್ಲಿ ರಾಮನಾಗಿ ರಣಬೀರ್, ರಾವಣನಾಗಿ ಯಶ್ ಟ್ರೆಂಡಿಂಗ್! Ramayan

ಪ್ರಮುಖ ಮುಖ್ಯಾಂಶಗಳು

  • ಹನುಮ ಜಯಂತಿಯ ದಿನ ರಣಬೀರ್ ಕಪೂರ್ ಅಭಿನಯದ 'ರಾಮಾಯಣ' ಚಿತ್ರದ ಫಸ್ಟ್ ಲುಕ್ ಬಿಡುಗಡೆ
  • ರಾಮನಾಗಿ ರಣಬೀರ್, ರಾವಣನಾಗಿ ಯಶ್ ಹಾಗೂ ಸೀತೆಯಾಗಿ ಸಾಯಿ ಪಲ್ಲವಿ ಅಭಿನಯ
  • ಟ್ವಿಟರ್​ನಲ್ಲಿ ಈ ಸಿನಿಮಾ ಫುಲ್​ ಟ್ರೆಂಡಿಂಗ್​
ಮುಂಬೈ: ಇಂದು (ಏ.2) ಪ್ರಭು ಶ್ರೀರಾಮನ ಬಂಟ ಹನುಮನ​ ಜಯಂತಿ ದಿನ ನಿತೇಶ್​ ತಿವಾರಿ ನಿರ್ದೇಶನದ ಮತ್ತು ರಣಬೀರ್​ ಕಪೂರ್​ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ರಾಮಾಯಣ (Ramayan) ದ ಫಸ್ಟ್​ ಲುಕ್​ ಹೊರಬಿದ್ದಿದ್ದು, ಈಗ #Ramayan ಎಂಬ ಹ್ಯಾಶ್​ಟ್ಯಾಗ್​ ಎಕ್ಸ್​​ (ಟ್ವಿಟರ್​) ನಲ್ಲಿ ಟ್ರೆಂಡಿಂಗ್​ನಲ್ಲಿದೆ.

ರಣವೀರ್​,ಯಶ್​, ಸಾಯಿ... ಟ್ರೆಂಡಿಂಗ್​!

ಅಮೆರಿಕದ ಲಾಸ್​ ಎಂಜಲೀಸ್​ ಮತ್ತು ಮುಂಬೈನಲ್ಲಿ ನಡೆಸ ಸ್ಕ್ರೀನಿಂಗ್​ನಲ್ಲಿ ಹೊರಬಿದ್ದ ಫಸ್ಟ್​ ಲುಕ್​, ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನವನ್ನು ಸೃಷ್ಟಿಸಿದೆ. ಈ ಸಿನಿಮಾದ ಪ್ರಮುಖ ಪಾತ್ರಧಾರಿಗಳಾದ ರಣಬೀರ್​ ಕಪೂರ್ (ಪ್ರಭು ಶ್ರೀರಾಮ) ರಾಕಿಂಗ್​ ಸ್ಟಾರ್ ಯಶ್​ (ರಾವಣ) ಮತ್ತು ಸಾಯಿ ಪಲ್ಲವಿ ( ಸೀತೆ) ಇವರುಗಳು ಟ್ವಿಟರ್​ನಲ್ಲಿ ಟಾಪ್​ ಟ್ರೆಂಡಿಂಗ್​ನಲ್ಲಿ ಪಟ್ಟಿಯಾಗಿದ್ದಾರೆ.
ಈ ಸಿನಿಮಾವನ್ನು ನಿತೇಶ್​ ತಿವಾರಿ ನಿರ್ದೇಶಿಸಿದ್ದು, ನಮಿತ್ ಮಲ್ಹೋತ್ರಾ ಈ ಚಿತ್ರದ ನಿರ್ಮಾಪಕರಾಗಿದ್ದಾರೆ. ಈ ಸಿನಿಮಾವು ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದ್ದು, ಮೊದಲ ಭಾಗವು ಈ ವರ್ಷ(2026) ದ ದೀಪಾವಳಿಗೆ ಬಿಡುಗಡೆಯಾದರೆ ಎರಡನೇ ಭಾಗವು 2027 ರ ದೀಪಾವಳಿಗೆ ತೆರೆಕಾಣಲಿದೆ.

ಪತಿಯನ್ನು ಹೊಗಳಿದ ಆಲಿಯಾ

ರಾಮಾಯಣ ಸಿನಿಮಾದ ಫಸ್ಟ್ ಲುಕ್​ ವಿಡಿಯೋ ಬಿಡುಗಡೆಗೆ ಮೊದಲು ರಣಬೀರ್​ ಪತ್ನಿ ಆಲಿಯಾ ಭಟ್​ ನೀಡಿರುವ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಸಿನಿಮಾ ಔಟ್​ ಆಫ್​ ದಿ ವರ್ಲ್ಡ್ ಎಂದು ಆಲಿಯಾ ಬಣ್ಣಿಸಿದ್ದಾರೆ. ಈ ಸಿನಿಮಾಗಾಗಿ ರಣಬೀರ್​ ಬಹಳ ಶ್ರಮ ವಹಿಸಿದ್ದು, ಭಕ್ತಿಯಿಂದ ಪ್ರಭು ಶ್ರೀರಾಮನಲ್ಲಿ ಬೇಡಿಕೊಂಡರೆ ಎಲ್ಲವೂ ದೊರೆಯುತ್ತದೆ ಎಂದು ಆಲಿಯಾ ಭಟ್​ ರಿಯಾಕ್ಷನ್​ ಕೊಟ್ಟಿದ್ದಾರೆ.

ಫಸ್ಟ್​ ಲುಕ್​ನಲ್ಲಿ ಏನಿದೆ?

ಏಪ್ರಿಲ್​ 2 ರಂದು ಬಿಡುಗಡೆಯಾಗಿರುವ ರಾಮಾಯಣದ ಫಸ್ಟ್​ ಲುಕ್​ನಲ್ಲಿ ಅಯೋಧ್ಯೆಯ ರಾಜ ವೈಭೋಗವನ್ನು, ವನ ವಾಸದಲ್ಲಿರುವ ರಾಮನನ್ನು ಮತ್ತು ವಿಡಿಯೋದ ಕೊನೆಯಲ್ಲಿ ರಾವಣನ ಪುಷ್ಪಕ ವಿಮಾನವನ್ನು ತೋರಿಸಿದ್ದಾರೆ.
ಇನ್ನು ಪಾತ್ರದ ವಿಚಾರಕ್ಕೆ ಬಂದರೆ, ಈ ಫಸ್ಟ್ ಲುಕ್​ನಲ್ಲಿ ಕೇವಲ ಪ್ರಭು ಶ್ರೀ ರಾಮನ ಪಾತ್ರಾಧಾರಿಯಾದ ರಣಬೀರ್​ ಕಪೂರ್​ನನ್ನು ಮಾತ್ರ ತೋರಿಸಿದ್ದು, ಮುಂದಿನ ದಿನಗಳಲ್ಲಿ ಇತರೆ ಪಾತ್ರಗಳನ್ನು ಪರಿಚಯಿಸುವ ಸಾಧ್ಯತೆಯಿದೆ,(ಏಜನ್ಸೀಸ್​).