- ನಮ್ಮದು ಸಿಚ್ಯುವೇಶನ್ ಶಿಪ್ ಎಂದು ಟ್ರೋಲ್ ಆದ ನಿರ್ದೇಶಕ ಜಾಕಿ
- 2024ರಲ್ಲಿ ಪ್ರೀತಿಸಿ ಮದುವೆಯಾಗಿದ್ದ ರಕುಲ್ ಮತ್ತು ಜಾಕಿ ಭಗ್ನಾನಿ
- ಸಿಚ್ಯುವೇಶನ್ ಶಿಪ್ ಎಂದರೆ ಸಂಬಂಧಲ್ಲಿ ಸ್ವತಂತ್ರ್ಯ ಕಾಯ್ದುಕೊಳ್ಳೋದು ಎಂದ ರಕುಲ್
Rakul Preet Singh: ರಕುಲ್ ಪ್ರೀತ್ ಮತ್ತು ನಿರ್ದೇಶ ಜಾಕಿ ಭಗ್ನಾನಿ ನಡುವಿನ ಮದುವೆ ಸಂಬಂಧವನ್ನು ಸಿಚುವೇಶನ್ ಶಿಪ್ ಎಂದು ಕರೆದುಕೊಂಡಿರುವುದು ಸದ್ಯ ಭಾರಿ ಚರ್ಚೆಗೆ ಗ್ರಾಸವಾಗಿದೆ. ಪ್ರೀತಿಸಿ ಮದುವೆಯಾಗಿರುವ ಈ ಜೋಡಿ ಎರಡನೇ ವರ್ಷದ ದಾಂಪತ್ಯ ಜೀವನಕ್ಕೂ ಕಾಲಿಟ್ಟಿದ್ದಾರೆ. ಈ ಮಧ್ಯೆ ಜಾಕಿ ಅವರ ಪಾಡ್ಕಾಸ್ಟ್ ಸಂದರ್ಶನವೊಂದರಲ್ಲಿ ನಾವು ಸಿಚ್ಯುವೇಶನ್ ಶಿಪ್ನಲ್ಲಿ ಎಂದಿರುವುದು ಟ್ರೋಲ್ಗೆ ಕಾರಣವಾಗಿದೆ.
ರಕುಲ್ ಅವರು ಕನ್ನಡದ ಗಿಲ್ಲಿ ಸಿನಿಮಾದಲ್ಲಿ ನಟಿಸಿದ್ದರು. ಜಯ ಜಾನಕಿ ನಾಯಕ, ಸರೈನೋಡು, ನಾನಕು ಪ್ರೇಮಕೋ, ಯಾರಿಯಾನ್ ಸಿನಿಮಾಗಳು ಇವರಿಗೆ ಖ್ಯಾತಿಯನ್ನು ತಂದುಕೊಟ್ಟಿತ್ತು. 2024 ಫೆಬ್ರವರಿ 21ರಂದು ಇವ್ರು ನಿರ್ದೇಶ ಜಾಕಿ ಭಗ್ನಾನಿ ಜೊತೆಗೆ ಹಸೆಮಣೆ ಏರಿದರು. ಈಗ ಸಂದರ್ಶನವೊಂದರಲ್ಲಿ ಜಾಕಿ ಭಗ್ನಾನಿ ತಮ್ಮ ಮತ್ತು ರಕುಲ್ ನಡುವಿನ ಸಂಬಂಧದ ಬಗ್ಗೆ ಮಾತನಾಡಿರುವುದು ಇದೆಂಥಾ ಸಂಬಂಧ, ಹೀಗೂ ಇರುತ್ತದೆಯೇ ಎನ್ನು ಪ್ರಶ್ನೆಗಳನ್ನು ಹುಟ್ಟಿ ಹಾಕಿವೆ. ಈ ಬಗ್ಗೆ ರಕುಲ್ ಅವರು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಜಾಕಿ ಹೇಳಿದ್ದೇನು?
ಜಾಕಿ ಭಗ್ನಾನಿ ಹೇಳಿದ್ದೇನು, ನಾವು ವಿವಾಹಿತರು ನಮ್ಮದು ಒಂದು ರೀತಿಯ 'ಸಿಚುವೇಶನ್‌ಶಿಪ್. ಇಲ್ಲಿ ಯಾವುದೇ ಒತ್ತಡ ವಿರೋಧಿಲ್ಲ. ನಾವು ಒಬ್ಬರಿಗೊಬ್ಬರು ನಿಷ್ಠರಾಗಿದ್ದೇವೆ ಎಂದು ಹೇಳಿರುವುದು ಇಂಟರ್ನೆಟ್ನಲ್ಲಿ ಟ್ರೋಲ್‌ಗಳಿಗೆ ದಾರಿ ಮಾಡಿಕೊಟ್ಟಿತ್ತು.
ರಕುಲ್ ಕಿಡಿ
ಒಂದು ಸಂದರ್ಶನದಲ್ಲಿ ಕೊಟ್ಟ ಸಾಲು ದಿಢೀರನೆ ಹೆಡ್ಲೈನ್ ಆಗಿಬಿಡುತ್ತದೆ. ಇದನ್ನು ಕಂಡು ನಮಗೆ ನಗು ಬಂತು. ಹೊಟ್ಟೆ ಹುಣ್ಣಾಗುವೆಂತೆ ನಕ್ಕೆವು. ಇದು ತಮಾಷೆಯಂತೆ ಕಾಣಬಹುದು. ಆದರೆ, ವಾಸ್ತವದಲ್ಲಿ ಹಾಗಿಲ್ಲ. ಮಾತಿನ ಸಂದರ್ಭ ಮತ್ತು ಸೂಕ್ಷ್ಮತೆ ಬಹಳ ಮುಖ್ಯ. ಕೇವಲ ಕ್ಲಿಕ್‌ಬೈಟ್‌ಗಾಗಿ ಸಂಭಾಷಣೆಯ ಗುಣಮಟ್ಟವನ್ನು ಕುಗ್ಗಿಸಬಾರದು ಎಂದು ಹೇಳಿದ್ದಾರೆ.
ನಿಜಕ್ಕೂ ಸಂದರ್ಶನಲ್ಲಿ ಹೇಳಿದ್ದೇನು?
ಸಂದರ್ಶನದಲ್ಲಿ ರಕುಲ್ ಮತ್ತು ಜಾಕಿ ಇಬ್ಬರ ಸಂಬಂಧದಲ್ಲಿ ಇರುವ ಸ್ವಾತಂತ್ರ್ಯದ ಬಗ್ಗೆ ಮಾತನಾಡಿದ್ದಾರೆ. ನಾವು ಎಲ್ಲಿಯಾದರೂ ಪ್ರಯಾಣಿಸುವಾಗ ಪತಿಯನ್ನೇ ಅವಲಂಬಿಸುವ ಅಗತ್ಯ ನನಗಿಲ್ಲ. ಎಲ್ಲಿಯಾದರೂ ಒಬ್ಬಳೆ ಓಡಾಡುತ್ತೇನೆ. ನಾವು ಕೊರೆತಯನ್ನು ಫುಲ್ಫಿಲ್ ಮಾಡಿಕೊಳ್ಳಲು ಮದುವೆ ಮಾಡಿಕೊಂಡಿಲ್ಲ. ನಾವು ಸ್ವತಂತ್ರ್ಯವಾಗಿ ಸಂತೋಷವಾಗಿದ್ದೇವೆ. ರಕುಲ್ ಮುಂದೆಯೇ ಜಾಕಿ ಅವರು ತಮ್ಮ ಮಾಜಿ ಗೆಳತಿಯೊಂದಿಗೆ ಮಾತನಾಡುವಷ್ಟು ಪಾರದರ್ಶಕರಾಗಿದ್ದಾರೆ ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ, (ಏಜೆನ್ಸೀಸ್).