ಬಾಲಿವುಡ್ ನಟಿಯರಾದ ರಾಖಿ ಸಾವಂತ್, ಪ್ರಿಯಾಂಕಾ ಚೋಪ್ರಾ
- ಮೂರನೇ ಮದುವೆ ಬಾಲಿವುಡ್ ಕಾಂಟ್ರೋವರ್ಸಿ ಕ್ವೀನ್ ರೆಡಿ
- ಈ ಕುರಿತಂತೆ ಕೇಳಿದ ಪ್ರಶ್ನೆಗೆ ಪ್ರಿಯಾಂಕಾ ಚೋಪ್ರಾ ಹೆಸರು ಎಳೆದುತಂದ ಬ್ಯೂಟಿ
ಮುಂಬೈ: ಪ್ರಸ್ತುತ, ಬಾಲಿವುಡ್ನಿಂದ ದೂರ ಉಳಿದಿರುವ ವಿವಾದಾತ್ಮಕ ಹೇಳಿಕೆಗಳಿಂದಲೇ ಹೆಚ್ಚು ಸದ್ದು ಮಾಡುತ್ತಿರುವ ಹಾಟ್ ನಟಿ ರಾಖಿ ಸಾವಂತ್, ಇದೀಗ ಸುಖಾಸುಮ್ಮನೆ ಪ್ರಿಯಾಂಕಾ ಚೋಪ್ರಾ ಅವರ ಹೆಸರನ್ನು ಎಳೆದುತಂದಿರುವುದು ಸದ್ಯ ಸ್ಟಾರ್ ಹೀರೋಯಿನ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಬಾಲಿವುಡ್‌ನ ಫೈರ್ ಬ್ರ್ಯಾಂಡ್, ಕಾಂಟ್ರೋವರ್ಸಿ ಕ್ವೀನ್ ಎಂದು ಕರೆಸಿಕೊಳ್ಳುವ ರಾಖಿ, ಕಳೆದ ವರ್ಷಗಳಲ್ಲಿ ತಮ್ಮ ವೈಯಕ್ತಿಕ ವಿಚಾರಗಳಿಂದ ಭಾರೀ ಟೀಕೆ, ವ್ಯಂಗ್ಯಗಳಿಗೆ ಸಿಲುಕಿದ್ದಾರೆ. ಪತಿ ಆದಿಲ್ ಜೊತೆಗಿನ ದಾಂಪತ್ಯ ಜೀವನವನ್ನು ಮುರಿದುಕೊಂಡ ಹಾಟ್ ಬ್ಯೂಟಿ, ಸರಣಿ ಆರೋಪಗಳ ಮೂಲಕ ಬೀದಿಯಲ್ಲಿ ಹೈಡ್ರಾಮಾ ಮಾಡಿದ ಘಟನೆಗಳು ಸಾಕಷ್ಟು ಟ್ರೋಲ್, ಛೀಮಾರಿಗಳಿಗೂ ಕಾರಣವಾಗಿತ್ತು. ಇದಾದ ಬಳಿಕ ಎಲ್ಲಿಯೂ ಹೆಚ್ಚು ಕಾಣಿಸಿಕೊಳ್ಳದ ನಟಿ, ಇದೀಗ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ಮೂಲಕ ಮುನ್ನೆಲೆಗೆ ಬಂದಿದ್ದಾರೆ.
ತಮ್ಮ ಮೂರನೇ ವಿವಾಹದ ಬಗ್ಗೆ ಕೇಳಿಬಂದ ಪ್ರಶ್ನೆಗೆ ಖಾರವಾಗಿ ಉತ್ತರಿಸಿದ ನಟಿ, ನಾನು 3ನೇ ಮದುವೆಗೆ ಓಕೆ. ಆದರೆ, ನನ್ನ ಅರ್ಧದಷ್ಟು ವಯಸ್ಸಿನ ವ್ಯಕ್ತಿಗಾಗಿ ನನ್ನ ಹುಡುಕಾಟ. ನಿಕ್ ಜೋನಾಸ್ ನನಗಿಂತ 5ರಿಂದ 6 ವರ್ಷ ಚಿಕ್ಕವನು. ನಾನೇನೂ ಪ್ರಿಯಾಂಕಾ ಚೋಪ್ರಾನಾ? ಎಂದು ಹೇಳುವ ಮೂಲಕ ಮತ್ತೊಮ್ಮೆ ತಾನು ಕಾಂಟ್ರೋವರ್ಸಿ ಕ್ವೀನ್ ಎಂಬುದನ್ನು ಸಾಬೀತುಪಡಿಸಿದ್ದಾರೆ. ಸುಖಾಸುಮ್ಮನೆ ಪ್ರಿಯಾಂಕ ದಂಪತಿಗಳನ್ನು ಉದ್ದೇಶಿಸಿ ಮಾತನಾಡಿದ ನಟಿಯ ಹೇಳಿಕೆಗೆ ನೆಟ್ಟಿಗರು ಕಿಡಿಕಾರಿದ್ದಾರೆ.
ಮುರಿದುಬಿದ್ದ ಎರಡು ದಾಂಪತ್ಯ ಜೀವನ
ಕೆಲವೇ ಕೆಲವು ಸಿನಿಮಾಗಳಲ್ಲಿ ನಟಿಸಿರುವ ರಾಖಿ, ಬಹುತೇಕ ವಿಶೇಷ ಸಾಂಗ್ಗಳಲ್ಲಿ ಹಾಟ್ ಆಗಿ ಕುಣಿಯುವ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದರು. ಅಲ್ಲಿಂದ ಹಿಂದಿಯ ಬಿಗ್ ಬಾಸ್ಗೆ ಹೋದ ಈಕೆ, ಟಾಪ್ ನಾಲ್ಕು ಸ್ಪರ್ಧಿಗಳಲ್ಲಿ ಒಬ್ಬರಾಗಿ ಹೊರಬಂದರು. ಇನ್ನು ದಾಂಪತ್ಯ ಜೀವನ ನೋಡುವುದಾದರೆ, ರಿತೇಶ್ ಸಿಂಗ್ ಎಂಬ ಅನಿವಾಸಿ ಭಾರತೀಯರನ್ನು 2019ರಲ್ಲಿ ವಿವಾಹವಾದ ನಟಿ, 2022ರಲ್ಲಿ ಅವರಿಂದ ವಿಚ್ಛೇದನ ಪಡೆದರು.
ಅದೇ ವರ್ಷದಲ್ಲಿ ಉದ್ಯಮಿ ಆದಿಲ್ ಖಾನ್ ದುರಾನಿ ಎಂಬುವವರ ಕೈಹಿಡಿದ ರಾಖಿ ಸಾವಂತ್, ಫೆಬ್ರವರಿ 2023ರಲ್ಲಿ ಪತಿಯಿಂದ ಬೇರ್ಪಟ್ಟರು. ಎರಡೂ ಮದುವೆಗಳು ವಿಚ್ಛೇದನದಲ್ಲಿ ಅಂತ್ಯಗೊಂಡ ಬಳಿಕ ರಾಜಕೀಯದತ್ತ ಹೆಚ್ಚು ಗಮನವನ್ನು ಹರಿಸಿರುವ ಈಕೆ, ಮೂರನೇ ಮದುವೆಗೂ ಸಿದ್ಧ ಎಂಬ ಹೇಳಿಕೆ ನೀಡಿರುವುದು ಹಲವರಿಗೆ ನಗೆ ತರಿಸಿದೆ,(ಏಜೆನ್ಸೀಸ್).