'ಧುರಂಧರ್ 2' ನಟ ವಿವೇಕ್ ಸೇನ್
- 'ಧುರಂಧರ್' ಮೊದಲ ಭಾಗದಲ್ಲಿ ಕೇವಲ 14 ಸೆಕೆಂಡ್ ಡೈಲಾಗ್ನಿಂದಲೇ ಸದ್ದು
- ತನ್ನ ಲುಕ್ನಿಂದಲೇ ಪ್ರೇಕ್ಷಕರ ತಲೆಗೆ ಹುಳಬಿಟ್ಟ ನಟ ವಿವೇಕ್ ಸಿನ್ಹಾ
ಮುಂಬೈ: ರಣವೀರ್ ಸಿಂಗ್ ಅಭಿನಯದ ಹಾಗೂ ಆದಿತ್ಯ ಧರ್ ನಿರ್ದೇಶನದ 'ಧುರಂಧರ್: ದಿ ರಿವೆಂಜ್' ಸಿನಿಮಾ ಸದ್ಯ ಜಾಗತಿಕವಾಗಿ ಭಾರೀ ಸಂಚಲನ ಹುಟ್ಟುಹಾಕಿದೆ. ಚಿತ್ರದಲ್ಲಿನ ಪಾತ್ರಗಳು, ದೃಶ್ಯಗಳು ಮತ್ತು ಕಥೆಯು ಸಿನಿಪ್ರಿಯರ ಗಮನ ಸೆಳೆದಿದ್ದು, ಕೆಲವು ವಿಚಾರಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಅದರಲ್ಲಿ ಪ್ರಮುಖವಾಗಿ, ನಟ ವಿವೇಕ್ ಸಿನ್ಹಾ ಅವರ ಪಾತ್ರ.
'ಧುರಂಧರ್' ಭಾಗ 1ರಲ್ಲಿ ನಟ ವಿವೇಕ್ ಸಿನ್ಹಾ ಅವರ ಅಭಿನಯಕ್ಕೆ ವ್ಯಾಪಕ ಪ್ರಶಂಸೆ ಹರಿದುಬಂದಿತು. ಈ ಚಿತ್ರದಲ್ಲಿ ಅವರ ಪಾತ್ರ ಬಹಳ ಕಡಿಮೆಯಿದ್ದರೂ, ಅವರ ಡೈಲಾಗ್ ಮತ್ತು ಅಭಿನಯ ಭಾರತೀಯರ ಕೋಪಕ್ಕೆ ಮತ್ತು ಪಾಕ್ ಪ್ರೇಮಿಗಳ ಖುಷಿಗೆ ಕಾರಣವಾಯಿತು. ಅಸಲಿಗೆ, ಈ ಚಿತ್ರದಲ್ಲಿ ವಿವೇಕ್, 'ಜಹೂರ್ ಮಿಸ್ತ್ರಿ' ಪಾತ್ರದಲ್ಲಿ ಅಭಿನಯಿಸಿದ್ದಾರೆ. "ಹಿಂದೂಗಳು ಹೇಡಿ ಜನಾಂಗ" ಎಂಬ ವಿವೇಕ್ ಅವರ ಡೈಲಾಗ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಚಿತ್ರದಲ್ಲಿ ಅವರು ಓರ್ವ ಪಾಕಿಸ್ತಾನಿ ಉಗ್ರನ ಪಾತ್ರದಲ್ಲಿ ನಟಿಸಿದ್ದಾರೆ.
ಈ ಚಿತ್ರವನ್ನು ನೋಡಿದ ಪಾಕಿಸ್ತಾನಿ ಅಭಿಮಾನಿಗಳು, ವಿವೇಕ್ ಅವರ ಉಗ್ರನ ಪಾತ್ರ ಮೆಚ್ಚಿ, ಐ ಲವ್ ಯೂ ಎಂಬ ಸಂದೇಶಗಳನ್ನು ಕಳುಹಿಸಿದ್ದಾರೆ. ಇನ್ನು ಭಾರತೀಯರು, ನನ್ನ ಪಾತ್ರವನ್ನು ನೋಡಿ ತುಂಬ ಕೋಪಗೊಂಡು, ನನ್ನನ್ನು ಹುಡುಕಿ ಹೊಡೆಯುವುದಾಗಿಯೂ ಹೇಳಿದ್ದಾರೆ. ಕೆಲವರು, ಪಾಕಿಸ್ತಾನಕ್ಕೆ ಬಂದು ನಿಮ್ಮನ್ನು ಕೊಲ್ಲುತ್ತೇವೆ ಎಂದೆಲ್ಲ ಬೆದರಿಕೆ ಹಾಕಿದ್ದಾರೆ ಎಂದರು. ಕಮೆಂಟ್ ಮಾಡಿದವರಿಗೆ, ನಾನು ಪಾಕಿಸ್ತಾನಿ ಅಲ್ಲ. ಬದಲಿಗೆ ಭಾರತೀಯನೇ ಎಂದು ಸ್ಪಷ್ಟಪಡಿಸುವ ಪರಿಸ್ಥಿತಿ ಕೂಡ ಎದುರಾಗಿದೆ ಎಂದಿದ್ದಾರೆ.
ಪ್ರಸ್ತುತ, ದೇಶಿಯ ಹಾಗೂ ವಿಶ್ವಾದ್ಯಂತ ಬಾಕ್ಸ್ ಆಫೀಸ್ನಲ್ಲಿ 'ಧುರಂಧರ್ 2' ಭರ್ಜರಿ ಗಳಿಕೆಯನ್ನು ಕಾಣುತ್ತಿದ್ದು, ರಿಲೀಸ್ ಆದ 7 ದಿನಕ್ಕೆ 1000 ಕೋಟಿ ರೂ. ಕಲೆಕ್ಷನ್ ಕಂಡಿದೆ. ಇದು ಬಾಲಿವುಡ್ ಅಂಗಳದಲ್ಲಿ ಮಾತ್ರವಲ್ಲ, ಭಾರತೀಯ ಚಿತ್ರೋದ್ಯಮದಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿರುವುದು ಗಮನಾರ್ಹ,(ಏಜೆನ್ಸೀಸ್).