ಮುಂಬೈ: ಪಾಕಿಸ್ತಾನಿ ಸಿನಿಮಾರಂಗದಲ್ಲಿ ಜನಪ್ರಿಯ ನಾಯಕಿಯಾಗಿರುವ ನಟಿ (Ayeza Khan) ಆಯೇಜಾ ಖಾನ್, ತಮ್ಮ ನಟನೆಗೆ ಮಾತ್ರವಲ್ಲದೇ, ಫ್ಯಾಷನ್ ರಂಗದಲ್ಲೂ ಮೆಚ್ಚುಗೆ ಪಡೆದಿದ್ದಾರೆ. ಇವರು ಕಾರ್ಯಕ್ರಮ ಮತ್ತು ಸಂಪಾದಕೀಯಗಳಿಂದ ಹಿಡಿದು ನಾಟಕ ವಾರ್ಡ್ರೋಬ್‌ಗಳವರೆಗೆ ಹೆಸರುವಾಸಿಯಾಗಿದ್ದು, ಪ್ರತಿ ವಾರ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಬಹು ಶೈಲಿಯ ಫೋಟೋ ಶೂಟ್ಗಳನ್ನು ಹಂಚಿಕೊಳ್ಳುತ್ತಾರೆ.
ಆದಾಗ್ಯೂ, ಸಾಮಾಜಿಕ ಮಾಧ್ಯಮ ಬಳಕೆದಾರರು ಬಾಲಿವುಡ್ ನಟಿ ಆಲಿಯಾ ಭಟ್ ಅವರ ನೋಟಕ್ಕೆ ಹೋಲಿಕೆಯಾಗುವಂತೆ ಆಯೆಜಾ ಅವರ ಲುಕ್ ಕಂಡು ಬಂದ ನಂತರ ಆನ್ಲೈನ್ನಲ್ಲಿ ಚರ್ಚೆಗೆ ಸಿಲುಕಿದ್ದಾರೆ.
ಆಯೆಜಾ ತಿಳಿ ಬಿಳಿ ಬಣ್ಣದ ಸೀರೆಯನ್ನು ಧರಿಸಿ, ಅದಕ್ಕೆ ಸೂಕ್ತವಾಗುವಂತೆ ಹೈ-ನೆಕ್ ಬ್ಲೌಸ್ ಮತ್ತು ಕಿವಿಯೋಲೆಗಳೊಂದಿಗೆ ಆಕರ್ಷಕವಾಗಿ ಕಾಣುತ್ತಿದ್ದರು. ಆಕೆಯ ಈ ಲುಕ್ ತಕ್ಷಣವೇ ಹಳೆಯ-ಪ್ರಪಂಚದ, ರಾಜಮನೆತನದ ಆಕರ್ಷಣೆಯನ್ನು ಹೊತ್ತು ತೋರುವಂತೆ ಕಾಣುತ್ತಿತ್ತು.
ಈ ವರ್ಷದ ಜೂನ್ 2025 ರಲ್ಲಿ ನಡೆದ ಉಮ್ರಾವ್ ಜಾನ್ ಚಿತ್ರದ ಮರು-ಬಿಡುಗಡೆಗಾಗಿ ನಡೆದ ವಿಶೇಷ ಪ್ರದರ್ಶನದಲ್ಲಿ, ನಟಿ ಆಲಿಯಾ ಭಟ್ 1981 ರ ರೇಖಾ ಅವರ ಐಕಾನಿಕ್ ವಾರ್ಡ್ರೋಬ್‌ಗೆ ಗೌರವವಾಗಿ ಇದೇ ರೀತಿಯ ತಿಳಿ ಗುಲಾಬಿ ಬಣ್ಣದ ಸೀರೆಯನ್ನು ಧರಿಸಿದ್ದರು. ಆ ಲುಕ್ಗೆ ಸರಿಹೊಂದುವಂತೆ ನಟಿ ಹೈ-ನೆಕ್ ಬ್ಲೌಸ್, ಮೃದುವಾದ ಗುಲಾಬಿ ಬಣ್ಣದ ಆಭರಣಗಳು, ಮ್ಯಾಚಿಂಗ್ ಪರ್ಸ್ ಇದೆಲ್ಲವೂ ವೈರಲ್ ಆಗಿತ್ತು. ಅಂದಹಾಗೆ, ಆಯೆಜಾ ತನ್ನ ಛಾಯಾಚಿತ್ರಗಳನ್ನು ಪೋಸ್ಟ್ ಮಾಡಿದ ನಂತರ ಅಭಿಮಾನಿಗಳು ಈ ಲುಕ್ಗಳ ಬಗ್ಗೆ ಕಮೆಂಟ್ ಹಾಕಲು ಪ್ರಾರಂಭಿಸಿದ್ದಾರೆ.
ಇದಾದ ಕೆಲವೇ ದಿನಗಳಲ್ಲಿ, ನಟಿ ಆಯೆಜಾ "ಬಾಲಿವುಡ್ ಲುಕ್‌ಗಳನ್ನು ನಕಲು ಮಾಡುತ್ತಿದ್ದಾರೆ" ಎಂದು ಆರೋಪಿಸಿ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯೆಗಳು ಬರಲಾರಂಭಿಸಿದವು. ಒಬ್ಬ ಬಳಕೆದಾರರು ಆಯೇಜಾ ಬಾಲಿವುಡ್ ಬಗ್ಗೆ ಏಕೆ ಇಷ್ಟೊಂದು ಆಸಕ್ತಿಯನ್ನು ಹೊಂದಿದ್ದಾಳೆ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರ ಅವಳು ಇತರರನ್ನು ನಕಲು ಮಾಡುವುದನ್ನು ಯಾವಾಗ ನಿಲ್ಲಿಸುತ್ತಾಳೆ ಎಂದು ಕೇಳಿದ್ದಾರೆ (ಏಜೆನ್ಸೀಸ್).