2026 ನೇ ಸಾಲಿನ Oscar Awards (ಚಿತ್ರ X)
- ಜೀವನದಲ್ಲಿ ಒಮ್ಮೆಯಾದರೂ ಆಸ್ಕರ್ ಪ್ರಶಸ್ತಿ ಗೆಲ್ಲಬೇಕೆಂಬುದು ಸಿನಿ ಜಗತ್ತಿನ ಅನೇಕ ಕಲಾವಿದರ ಬಹುದೊಡ್ಡ ಆಸೆ
- ಒಂದು ವೇಳೆ ಈ ಪ್ರಶಸ್ತಿಯನ್ನು ಗೆದ್ದರೆ, ಕಲಾವಿದರು ಇಡೀ ಜಗತ್ತನ್ನೇ ಗೆದ್ದ ಖುಷಿಯಲ್ಲಿರುತ್ತಾರೆ
- 98ನೇ ಅಕಾಡೆಮಿ ಪ್ರಶಸ್ತಿ ಸೋಮವಾರ ಬೆಳಗ್ಗೆ ಲಾಸ್ ಏಂಜಲೀಸ್ನ ಡಾಲ್ಬಿ ಚಿತ್ರಮಂದಿರದಲ್ಲಿ ನಡೆದಿದೆ
Oscar Awards: ಜೀವನದಲ್ಲಿ ಒಮ್ಮೆಯಾದರೂ ಆಸ್ಕರ್ ಪ್ರಶಸ್ತಿ ಗೆಲ್ಲಬೇಕೆಂಬುದು ಸಿನಿ ಜಗತ್ತಿನ ಅನೇಕ ಕಲಾವಿದರ ಬಹುದೊಡ್ಡ ಆಸೆ. ಒಂದು ವೇಳೆ ಈ ಪ್ರಶಸ್ತಿಯನ್ನು ಗೆದ್ದರೆ, ಕಲಾವಿದರು ಇಡೀ ಜಗತ್ತನ್ನೇ ಗೆದ್ದ ಖುಷಿಯಲ್ಲಿರುತ್ತಾರೆ. ಇದೀಗ 2026 ನೇ ಸಾಲಿನ ಆಸ್ಕರ್ ಪ್ರಶಸ್ತಿ ವಿಜೇತರ ಪಟ್ಟಿ ಹೊರಬಿದ್ದಿದೆ.
98ನೇ ಅಕಾಡೆಮಿ ಪ್ರಶಸ್ತಿ ಸೋಮವಾರ ಬೆಳಗ್ಗೆ ಲಾಸ್ ಏಂಜಲೀಸ್ನ ಡಾಲ್ಬಿ ಚಿತ್ರಮಂದಿರದಲ್ಲಿ ನಡೆದಿದೆ. ಈ ಕಾರ್ಯಕ್ರಮವನ್ನು ಮೊದಲ ಬಾರಿಗೆ ಲೇಟ್ ನೈಟ್ ಶೋ ನಿರೂಪಕ ಕಾನನ್ ಒ'ಬ್ರೇನ್ ಆಯೋಜಿಸುತ್ತಿದ್ದಾರೆ.
ನಟಿ ಪ್ರಿಯಾಂಕ ಚೋಪ್ರಾ ಆಸ್ಕರ್ ಪ್ರಶಸ್ತಿ ವಿಜೇತ ಜೇವಿಯರ್ ಬಾರ್ಡೆಮ್ ಜೊತೆ ಸೇರಿ ಅಂತರಾಷ್ಟ್ರೀಯ ಚಲನಚಿತ್ರಕ್ಕಾಗಿ ಆಸ್ಕರ್ ಪ್ರಶಸ್ತಿ ಪ್ರಧಾನ ಮಾಡಿದರು.
ಈ ಸೀಸನ್ನಲ್ಲಿ 16 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡ ನಿರ್ದೇಶಕ ರಯಾನ್ ಕೂಗ್ಲರ್ ಅವರ ಸಿನ್ನರ್ಸ್ ಕೇವಲ ನಾಲ್ಕು ಪ್ರಶಸ್ತಿಗಳನ್ನು ಗೆಲ್ಲುವಲ್ಲಿ ಯಶಸ್ವಿಯಾದರು. ಅದರಲ್ಲಿ ಅತ್ಯುತ್ತಮ ನಟ ಮೈಕೆಲ್ ಬಿ. ಜೋರ್ಡಾನ್, ಅತ್ಯುತ್ತಮ ಮೂಲ ಚಿತ್ರಕಥೆ, ಅತ್ಯುತ್ತಮ ಮೂಲ ಸಂಗೀತ, ಮತ್ತು ಅತ್ಯುತ್ತಮ ಛಾಯಾಗ್ರಹಣ ಸೇರಿದೆ.
ಒನ್ ಬ್ಯಾಟಲ್ ಆಫ್ಟರ್ ಅನದರ್ ಈ ಬಾರಿಯ ಆಸ್ಕರ್ ಸಂಜೆಯ ಅತಿದೊಡ್ಡ ವಿಜೇತ ಚಿತ್ರವಾಗಿ ಹೊರಹೊಮ್ಮಿದ್ದು, ಇನ್ನೂ ಐದು ಪ್ರಶಸ್ತಿಗಳನ್ನು ಬಾಚಿಕೊಂಡಿತು. ಅವುಗಳೆಂದರೆ, ಅತ್ಯುತ್ತಮ ಚಿತ್ರ, ಅತ್ಯುತ್ತಮ ಪಾತ್ರವರ್ಗ, ಅತ್ಯುತ್ತಮ ಪೋಷಕ ನಟ, ಅತ್ಯುತ್ತಮ ರೂಪಾಂತರಿತ ಚಿತ್ರಕಥೆ, ಅತ್ಯುತ್ತಮ ನಿರ್ದೇಶಕ ಮತ್ತು ಅತ್ಯುತ್ತಮ ಸಂಕಲನ ಸೇರಿದೆ.
ಅತ್ಯುತ್ತಮ ನಟಿ ಆಸ್ಕರ್ ಪ್ರಶಸ್ತಿಗೆ ಮುಂಚೂಣಿಯಲ್ಲಿದ್ದ ಜೆಸ್ಸಿ ಬಕ್ಲಿ ಪ್ರಶಸ್ತಿಯನ್ನು ಗೆದ್ದರು. ಅತ್ಯುತ್ತಮ ವೇಷಭೂಷಣ, ಅತ್ಯುತ್ತಮ ಕೇಶವಿನ್ಯಾಸ ಮತ್ತು ಮೇಕಪ್ ಮತ್ತು ಅತ್ಯುತ್ತಮ ನಿರ್ಮಾಣ ವಿನ್ಯಾಸದಲ್ಲಿ ಮೂರು ಪ್ರಶಸ್ತಿಗಳೊಂದಿಗೆ ಫ್ರಾಂಕೆನ್‌ಸ್ಟೈನ್ 98 ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ಮೂರನೇ ಅತಿದೊಡ್ಡ ವಿಜೇತರಾಗಿ ಹೊರಹೊಮ್ಮಿದ್ದಾರೆ (ಏಜೆನ್ಸೀಸ್).