ಆಸ್ಕರ್ಸ್​ 2026 
ಬಾಲಿವುಡ್

Oscars 2026 - ಒನ್ ಬ್ಯಾಟಲ್​ ಆಫ್ಟರ್ ಅನದರ್​ಗೆ 6, ಸಿನ್ನರ್ಸ್​​ಗೆ 4 ಆಸ್ಕರ್​ ಪ್ರಶಸ್ತಿ

Oscars 2026 -
ಪ್ರತಿಷ್ಠಿತ ಆಸ್ಕರ್​ ಪ್ರಶಸ್ತಿ ರೇಸ್​ನಲ್ಲಿ ಮೈಕಲ್​ ಬಿ. ಜೋರ್ಡನ್​ ನಟಿಸಿದ್ದ "ಸಿನ್ನರ್ಸ್​' ಮತ್ತು ಲಿಯೋನಾರ್ಡೊ ಡಿಕಾಪ್ರಿಯೋ ಅಭಿನಯದ "ಒನ್​ ಬ್ಯಾಟಲ್​ ಆಫ್ಟರ್​ ಅನದರ್​' ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು. "ಸಿನ್ನರ್ಸ್​' ಆಸ್ಕರ್​ ಇತಿಹಾಸದಲ್ಲೇ ಬರೋಬ್ಬರಿ 16 ವಿಭಾಗಗಳಲ್ಲಿ ನಾಮಿನೇಷನ್​ ಆಗಿದ್ದರೆ, "ಒನ್​ ಬ್ಯಾಟಲ್​ ಆಫ್ಟರ್​ ಅನದರ್​' 13 ವಿಭಾಗಗಳಲ್ಲಿ ನಾಮಾಂಕಿತಗೊಂಡಿತ್ತು. ಭಾನುವಾರ (ಮಾ. 15) ಹಾಲಿವುಡ್​ನ ಡಾಲ್ಬಿ ಥಿಯೇಟರ್​ನಲ್ಲಿ ನಡೆದ 98ನೇ ಸಾಲಿನ ಆಸ್ಕರ್​ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ "ಒನ್​ ಬ್ಯಾಟಲ್​ ಆಫ್ಟರ್​ ಅನದರ್​' ಆರು ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದಿದ್ದು, "ಸಿನ್ನರ್ಸ್​' ನಾಲ್ಕು ಹಾಗೂ ಫ್ರಾಂಕೆಂಸ್ಟೀನ್​' ಮೂರು ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದಿವೆ.
ಅತ್ಯುತ್ತಮ ಸಿನಿಮಾ - ಒನ್​ ಬ್ಯಾಟಲ್​ ಆಫ್ಟರ್​ ಅನದರ್​
ಅತ್ಯುತ್ತಮ ನಾಯಕ - ಮೈಕಲ್​ ಬಿ ಜೋರ್ಡನ್​ (ಸಿನ್ನರ್ಸ್​)
ಅತ್ಯುತ್ತಮ ನಾಯಕಿ - ಜೆಸ್ಸೀ ಬಕ್ಲೀ (ಹ್ಯಾಮ್ನೆಟ್​)
ಅತ್ಯುತ್ತಮ ಪೋಷಕ ನಟ - ಶಾನ್​ ಪೆನ್​ (ಒನ್​ ಬ್ಯಾಟಲ್​ ಆಫ್ಟರ್​ ಅನದರ್​)
ಅತ್ಯುತ್ತಮ ಪೋಷಕ ನಟಿ - ಆ್ಯಮಿ ಮ್ಯಾಡಿಗನ್​ (ವೆಪನ್ಸ್​)
ಅತ್ಯುತ್ತಮ ನಿರ್ದೇಶನ - ಪೌಲ್​ ಥಾಮಸ್​ ಆ್ಯಂಡರ್ಸನ್​ (ಒನ್​ ಬ್ಯಾಟಲ್​ ಆಫ್ಟರ್​ ಅನದರ್​ )
ಅತ್ಯುತ್ತಮ ಆ್ಯನಿಮೇಟೆಡ್​ ಸಿನಿಮಾ - ಕೆಪಾಪ್​ ಡೆಮ್​ ಹಂರ್ಟಸ್​
ಅತ್ಯುತ್ತಮ ಆ್ಯನಿಮೇಟೆಡ್​ ಕಿರುಚಿತ್ರ - ದ ಗರ್ಲ್​ ಹೂ ಕೆಡ್​ ಪರ್ಲ್ಸ್​
ಅತ್ಯುತ್ತಮ ಕಾಸ್ಟಿಂಗ್​ - ಕೆಸಾಂಡ್ರಾ ಕುಲುಕುಂಡಸ್​ (ಒನ್​ ಬ್ಯಾಟಲ್​ ಆಫ್ಟರ್​ ಅನದರ್​ )
ಅತ್ಯುತ್ತಮ ಛಾಯಾಗ್ರಹಣ - ಆಟಮ್​ ಡ್ಯುರಾಲ್ಡ್​ ಅರ್ಕಪಾವ್​ (ಸಿನ್ನರ್ಸ್​)
ಅತ್ಯುತ್ತಮ ಕಾಸ್ಟ್ಯೂಮ್​ ಡಿಸೈನ್​ - ಕೇಟ್​ ಹಾವ್ಲಿ (ಫ್ರಾಂಕೆಂಸ್ಟೀನ್​)
ಅತ್ಯುತ್ತಮ ಸಾಕ್ಷ್ಯಚಿತ್ರ - ಮಿಸ್ಟರ್​ ನೋಬಡಿ ಅಗೇನ್ಸ್ಟ್​ ಪುಟಿನ್​
ಅತ್ಯುತ್ತಮ ಕಿರುಸಾಕ್ಷ್ಯಚಿತ್ರ - ಆಲ್​ ದ ಎಂಪ್ಟಿ ರೂಮ್ಸ್​
ಅತ್ಯುತ್ತಮ ಸಂಕಲನ - ಆ್ಯಂಡಿ ರ್ಜಗೆನ್ಸನ್​ (ಒನ್​ ಬ್ಯಾಟಲ್​ ಆಫ್ಟರ್​ ಅನದರ್​ )
ಅತ್ಯುತ್ತಮ ಅಂತಾರಾಷ್ಟ್ರೀಯ ಸಿನಿಮಾ - ಸೆಂಟಿಮೆಂಟಲ್​ ವ್ಯಾಲ್ಯೂ (ನಾರ್ವೇ ದೇಶ)
ಅತ್ಯುತ್ತಮ ಲೈವ್​ ಆ್ಯಕ್ಷನ್​ ಕಿರುಚಿತ್ರ - ದ ಸಿಂಗರ್ಸ್​ ಮತ್ತು ಟು ಪೀಪಲ್​ ಎಕ್ಸ್​ಚೇಂಜಿಂಗ್​ ಸಲೈವಾ
ಅತ್ಯುತ್ತಮ ಪ್ರಸಾದನ ಮತ್ತು ಕೇಶವಿನ್ಯಾಸ - (ಫ್ರಾಂಕೆಂಸ್ಟೀನ್​)
ಅತ್ಯುತ್ತಮ ಸಂಗೀತ - ಲುಡ್ವಿಗ್​ ಗೊರಾನ್ಸನ್​ (ಸಿನ್ನರ್ಸ್​)
ಅತ್ಯುತ್ತಮ ಹಾಡು - ಗೋಲ್ಡನ್​ (ಕೆಪಾಪ್​ ದ ಡೆಮನ್​ ಹಂರ್ಟಸ್​)
ಅತ್ಯುತ್ತಮ ನಿರ್ಮಾಣ ವಿನ್ಯಾಸ - ಫ್ರಾಂಕೆಂಸ್ಟೀನ್​​
ಅತ್ಯುತ್ತಮ ಧ್ವನಿ - ಎಫ್​​1
ಅತ್ಯುತ್ತಮ ವಿಎ್​ಎಕ್ಸ್​ - ಅವತಾರ್​ - ಫೈರ್​ ಆ್ಯಂಡ್​ ಆ್ಯಶ್​
ಅತ್ಯುತ್ತಮ ಚಿತ್ರಕಥೆ (ಅಡಾಪ್ಟೆಡ್​) - ಪೌಲ್​ ಥಾಮಸ್​ ಆ್ಯಂಡರ್ಸನ್​ (ಒನ್​ ಬ್ಯಾಟಲ್​ ಆಫ್ಟರ್​ ಅನದರ್​ )
ಅತ್ಯುತ್ತಮ ಚಿತ್ರಕಥೆ (ಒರಿಜಿನಲ್​) - ರಿಯಾನ್​​ ಕೂಗ್ಲರ್​ (ಸಿನ್ನರ್ಸ್​)

ಭಾರತ ಮೂಲದ ನಿರ್ದೇಶಕನಿಗೆ ಪ್ರಶಸ್ತಿ

ಭಾರತದಿಂದ "ಹೋಮ್​ಬೌಂಡ್​' ಚಿತ್ರವನ್ನು ಅಧಿಕೃತವಾಗಿ ಆಯ್ಕೆ ಮಾಡಿ ಆಸ್ಕರ್​ಗೆ ಕಳುಹಿಸಲಾಗಿತ್ತು. ಆದರೆ, ಆ ಸಿನಿಮಾ ನಾಮಿನೇಷನ್​ ಹಂತದಲ್ಲಿಯೇ ಹೊರಗುಳಿಯಿತು. ಜತೆಗೆ ಕನ್ನಡದ "ಕಾಂತಾರ ಚಾಪ್ಟರ್​ 1', "ತಾನ್ವಿ ದ ಗ್ರೇಟ್​', "ಮಹಾವತಾರ್​ ನರಸಿಂಹ', "ಟೂರಿಸ್ಟ್​ ಫ್ಯಾಮಿಲಿ', "ಸಿಸ್ಟರ್​ ಮಿಡ್​ನೈಟ್​' ಸೇರಿ ಒಟ್ಟು 26 ಚಿತ್ರಗಳನ್ನು ವಿವಿಧ ವಿಭಾಗಗಳಲ್ಲಿ ಸ್ಪರ್ಧೆಗೆ ಕಳುಹಿಸಲಾಗಿತ್ತು. ಯಾವ ಭಾರತೀಯ ಚಿತ್ರಕ್ಕೂ ಈ ಬಾರಿ ಆಸ್ಕರ್​ನಲ್ಲಿ ಮಣೆ ಹಾಕಿಲ್ಲ. ಆದರೂ, ಭಾರತೀಯರು ಹೆಮ್ಮೆಪಡುವಂತಹ ಎರಡು ವಿಷಯಗಳಿಗೆ ಈ ಬಾರಿಯ ಅಕಾಡೆಮಿ ಅವಾರ್ಡ್ಸ್​ ಸಾಯಾಗಿದೆ. ಹೌದು, ಅತ್ಯುತ್ತಮ ಲೈವ್​ ಆ್ಯಕ್ಷನ್​ ಕಿರುಚಿತ್ರ ವಿಭಾಗದಲ್ಲಿ ಸ್ಯಾಮ್​ ಎ. ಡೇವಿಸ್​ & ಜ್ಯಾಕ್​ ಪಿಯಟ್​ ನಿರ್ದೇಶನದ "ದ ಸಿಂಗರ್ಸ್​' ಮತ್ತು ಅಲೆಕ್ಸಾಂಡ್ರೆ ಸಿಂಗ್​ &-ನಟಾಲೀ ಮುಸ್ಟೇಟಾ ನಿರ್ದೇಶನದ "ಟು ಪೀಪಲ್​ ಎಕ್ಸ್​ಚೇಂಜಿಂಗ್​ ಸಲೈವ' ಶಾರ್ಟ್​ ಫಿಲಂಗಳು ಪ್ರಶಸ್ತಿ ಗಳಿಸಿವೆ. ವಿಶೇಷ ಅಂದರೆ ಅಲೆಕ್ಸಾಂಡ್ರೆ ಸಿಂಗ್​ ಭಾರತ ಮೂಲದವರು. ಫ್ರಾನ್ಸ್​ನಲ್ಲಿ ಭಾರತೀಯ ಮೂಲದ ಕುಟುಂಬಕ್ಕೆ ಜನಿಸಿದ ಅವರು ಬ್ರಿಟನ್​ನಲ್ಲಿ ನೆಲೆಸಿದ್ದಾರೆ. ಹಾಗೇ 13 ವರ್ಷಗಳ ಬಳಿಕ ಒಂದೇ ವಿಭಾಗದಲ್ಲಿ ಎರಡು ಚಿತ್ರಗಳಿಗೆ ಪ್ರಶಸ್ತಿ ನೀಡಿರುವುದು ವಿಶೇಷ. ಈ ಹಿಂದೆ 2013ರಲ್ಲಿ ಅತ್ಯುತ್ತಮ ಧ್ವನಿ ವಿಭಾಗದಲ್ಲಿ "ಸ್ಕೈಫಾಲ್​' ಮತ್ತು "ಜೀರೋ ಡಾರ್ಕ್​ ಥರ್ಟಿ' ಚಿತ್ರಗಳು ಪ್ರಶಸ್ತಿ ಹಂಚಿಕೊಂಡಿದ್ದವು.

ಪ್ರಶಸ್ತಿ ಪ್ರದಾನ ಮಾಡಿದ ಪ್ರಿಯಾಂಕಾ

ಈ ಬಾರಿ ಹಾಲಿವುಡ್​ನಲ್ಲಿ ನೆಲೆಸಿರುವ ಬಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ, ಹಾಲಿವುಡ್​ ನಟ ಜೇವಿಯರ್​ ಬಾರ್ಡೆಮ್​ ಜತೆ ಸೇರಿ ಅತ್ಯುತ್ತಮ ಅಂತಾರಾಷ್ಟ್ರೀಯ ಸಿನಿಮಾ ಆಗಿ ಆಯ್ಕೆಯಾದ ನಾರ್ವೆಯ "ಸೆಂಟಿಮೆಂಟಲ್​ ವ್ಯಾಲ್ಯೂ' ತಂಡಕ್ಕೆ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಜೇವಿಯರ್​ "ನೋ ಟು ವಾರ್​, ಫ್ರೀ ಪ್ಯಾಲೆಸ್ತೈನ್​' ಎಂದು, ಟ್ರಂಪ್​ ಆಡಳಿತದ ವಿರುದ್ಧ ಧ್ವನಿಯೆತ್ತಿದರು.