Kareena Kapoor khan (ಚಿತ್ರ Instagram) 
ಬಾಲಿವುಡ್

ಕ್ರಿಕೆಟ್ ಮೈದಾನದಲ್ಲಿ 'ಜಬ್ ವಿ ಮೆಟ್' ಗೀತ್ ದರ್ಶನ: ಕರೀನಾ ಕಪೂರ್ ಎಕ್ಸ್‌ಪ್ರೆಶನ್ಸ್‌ಗೆ ಫ್ಯಾನ್ಸ್ ಫಿದಾ! Kareena Kapoor khan

Kareena Kapoor khan: ಬಾಲಿವುಡ್‌ನ ರಾಯಲ್​ ಜೋಡಿ ಎಂದೇ ಖ್ಯಾತಿಯಾಗಿರುವ ಕರೀನಾ ಕಪೂರ್ ಖಾನ್ ಮತ್ತು ಸೈಫ್ ಅಲಿ ಖಾನ್ ಇತ್ತೀಚೆಗೆ ಸೂರತ್‌ನಲ್ಲಿ ನಡೆದ ಐಎಸ್‌ಪಿಎಲ್ ಪಂದ್ಯದಲ್ಲಿ ತಮ್ಮ ಒಡೆತನದ ದಿ ಟೈಗರ್ಸ್ ಆಫ್ ಕೋಲ್ಕತ್ತಾ ತಂಡವನ್ನು ಹುರಿದುಂಬಿಸಲು ಕುಟುಂಬದೊಂದಿಗೆ ಆಗಮಿಸಿದ್ದು, ಅಭಿಮಾನಿಗಳ ಗಮನ ಸೆಳೆದಿದೆ.

ವೈರಲ್ ಆದ 'ಜಬ್ ವಿ ಮೆಟ್' ಗೀತ್ ನೆನಪು

ಪಂದ್ಯದ ವೇಳೆ ಕರೀನಾ ಅವರ ಉತ್ಸಾಹಭರಿತ ಪ್ರತಿಕ್ರಿಯೆಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗುತ್ತಿದ್ದವು. ಇದು ಮೈದಾನದಲ್ಲಿ ತಂಡವು ರನ್​ ಗಳಿಸಿದಾಗ ಅಥವಾ ವಿಕೆಟ್ ಪಡೆದುಕೊಂಡಾಗ ಕರೀನಾ ನೀಡುತ್ತಿದ್ದ ಮುಖಭಾವ (Expressions) ವನ್ನು ವೀಕ್ಷಿಸಿದ ನೆಟ್ಟಿಗರು ಅವರನ್ನು ಜಬ್ ವಿ ಮೆಟ್ ಚಿತ್ರದ ಐಕಾನಿಕ್ ಪಾತ್ರ ಗೀತ್ ಗೆ ಹೋಲಿಕೆ ಮಾಡಿದ್ದಾರೆ. ಗೀತ್​ ಪಾತ್ರದಲ್ಲಿ ಅವರ ತುಂಟಾಟ, ಉತ್ಸಾಹಗಳು ಇಂದಿಗೂ ಹಾಗೇ ಇದೆ ಎಂದು ವರ್ಣಿಸಿದ್ದಾರೆ.

ತೈಮೂರ್ ಮತ್ತು ಜೆಹ್ ಮಸ್ತಿ

ಒಂದು ಕಡೆ ಕರೀನಾ ಪಂದ್ಯಾವಳಿ ವೀಕ್ಷಿಸಿ ಮಸ್ತಿ ಮಾಡುತ್ತಿದ್ದರೆ, ಇನ್ನೊಂದೆಡೆ ಅವರ ಪುಟ್ಟ ಮಕ್ಕಳಾದ ತೈಮೂರ್ ಮತ್ತು ಜೆಹ್ ಕೂಡ ಪಂದ್ಯವನ್ನು ಎಂಜಾಯ್ ಮಾಡುತ್ತಿರುವ ದೃಶ್ಯಗಳು ಕ್ಯಾಮೆರಾ ಕಣ್ಣಿಗೆ ಸೆರೆಯಾದವು. ಸೈಫ್ ಅಲಿ ಖಾನ್ ತಮ್ಮ ತಂಡದ ಜೆರ್ಸಿ ಧರಿಸಿ ಮಿಂಚುತ್ತಿದ್ದರು. ಹಾಗೇ ಅವರ ಮಕ್ಕಳಿಗೆ ಕ್ರಿಕೆಟ್​ನ ಸೂಕ್ಷ್ಮತೆಗಳನ್ನು ತಿಳಿಸುತ್ತಿದ್ದರು. ಈ ಚಿತ್ರಗಳು ಮತ್ತು ವಿಡಿಯೋಗಳು ಪರ್ಫೆಕ್ಟ್ ಫ್ಯಾಮಿಲಿ ಗೋಲ್ಸ್ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ಪಡೆದವು.

ಕರೀನಾ ಮತ್ತು ಸೈಫ್ ಅಲಿ ಖಾನ್ ಬಗ್ಗೆ

ಕರೀನಾ ಕಪೂರ್ ಖಾನ್ ಮತ್ತು ಸೈಫ್ ಅಲಿ ಖಾನ್ ದಾಂಪತ್ಯ ಜೀವನವು ಬಾಲಿವುಡ್‌ನ ಅತ್ಯಂತ ಪ್ರಸಿದ್ಧ ಮತ್ತು ಸ್ಥಿರವಾದ ಸಂಬಂಧಗಳಲ್ಲಿ ಒಂದಾಗಿದೆ. ಮೊದಲು LOC ಕಾರ್ಗಿಲ್(2003) ಮತ್ತು ಓಂಕಾರ್​ (2006) ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಲು ಪ್ರಾರಂಭಿಸಿದರು. ಇವರಿಬ್ಬರು ತಾಶನ್ ಸಿನಿಮಾ ಶೂಟಿಂಗ್​ ಸಮಯದಲ್ಲಿ ಪ್ರೀತಿಯಲ್ಲಿ ಬಿದ್ದರು. ಸುಮಾರು ಐದು ವರ್ಷಗಳ ಕಾಲ ಪ್ರೀತಿಸಿದ ಜೋಡಿ 2021 ಅಕ್ಟೋಬರ್​ನಲ್ಲಿ ವಿವಾಹವಾದರು. ಈ ದಂಪತಿಗೆ ತೈಮೂರ್ ಅಲಿ ಖಾನ್ ಮತ್ತು ಜೆಹ್ ಅಲಿ ಖಾನ್ ಎಂಬ ಇಬ್ಬರು ಮಕ್ಕಳಿದ್ದಾರೆ (ಏಜೆನ್ಸೀಸ್​).