- ಕಾಜೋಲ್ರಿಗೆ ಮಗಳ ಜೊತೆ ಮಾತನಾಡೋದೆ ಕಷ್ಟವಾಗುತ್ತಿತ್ತಂತೆ
- ಮಗಳು ನೈಸಾ ಜೊತೆ ಮೂರು ವರ್ಷ ಮಾತು ಬಿಟ್ಟಿದ್ದೆ ಎಂದ ಕಾಜೊಲ್
- ಮಕ್ಕಳ ಮಾತನ್ನು ಕೇಳಿಸಿಕೊಳ್ಳೋದು ಮುಖ್ಯ, ಈಗ ನಮ್ಮ ಸಂಬಂಧ ಸರಿ ಇದೆ ಎಂದ ಕಾಜೊಲ್
Kajol Devgan: ನಾವು ತೊಂಬತ್ತರ ದಶಕದಲ್ಲಿ ಹುಟ್ಟಿದವರು ಎಲ್ಲವನ್ನು ಹೊಂದಾಣಿಕೆ ಮಾಡಿಕೊಂಡು ಹೋಗುತ್ತೇವೆ. ನಮಗೆ ಮೊಬೈಲ್ ಜಗತ್ತು ಗೊತ್ತು. ಇಲ್ಲದೆ ಬದುಕೋದು ಗೊತ್ತು. ಆದರೆ, ಈ ಝೆನ್ ಜಿ ಮಕ್ಕಳಿದ್ದಾರಲ್ಲ. ಅವರನ್ನು ಸಂಭಾಳಿಸೋದು ಮಾತ್ರ ತುಂಬಾನೆ ಕಷ್ಟ. ನಾನು ಮತ್ತು ಮಗಳು ಮೂರು ವರ್ಷ ಮಾತನಾಡಿಯೇ ಇರಲಿಲ್ಲ ಎಂದು ಪೇರೆಂಟಿಂಗ್ ಸಂಘರ್ಷದ ಬಗ್ಗೆ ಪಾಡ್ಕಾಸ್ಟ್ವೊಂದರಲ್ಲಿ ಬಾಲಿವುಡ್ ನಟಿ ಕಾಜೋಲ್ ಮಗಳು ನೈಸಾ ಬಗ್ಗೆ ಮಾತನಾಡಿದ್ದಾರೆ.
ಮಗಳು ನೈಸಾ ದೇವಗನ್ ಹದಿಹರೆಯಕ್ಕೆ ಬಂದಾಗ, ಅಂದರೆ ಆಕೆ, 12 ವರ್ಷದವಳಾಗಿದ್ದಾಗ ಅವಳಲ್ಲಿ ಬದಲಾವಣೆಯಾಗುತ್ತಿದ್ದ ಹಾರ್ಮೋನ್ಗಳಿದಾಗಿ ಇಬ್ಬರ ನಡುವೆ ಉಂಟಾದ ಸಂಘರ್ಷದ ಬಗ್ಗೆ ಯೂಟ್ಯೂಬರ್ ಲಿಲಿ ಸಿಂಗ್ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಜೊತೆಗೆ ಅದರಿಂದ ತಾವು ಹೊರಬಂದಿದ್ದು ಹೇಗೆ ಎಂಬುದರ ಮಾಹಿತಿ ಹಂಚಿಕೊಂಡಿದ್ದಾರೆ.
ಹಾರ್ಮೋನ್ಸ್ ಎಫೆಕ್ಟ್ ಹೀಗಾಗಿತ್ತು..
ನೈಸಾಳಲ್ಲಿ ಹದಿಹರೆಯದ ಹಾರ್ಮೋನ್ಗಳ ಬದಲಾವಣೆ ಕಂಡಾಗ ನಮ್ಮಿಬ್ಬರ ಮಧ್ಯೆ ತುಂಬಾನೆ ಜಗಳವಾಗ್ತಿತ್ತು. ನಾವಿಬ್ಬರು ಮೂರು ವರ್ಷ ಮಾತನಾಡಲೇ ಇರಲಿಲ್ಲ. ಅವಳು ಏನು ಹೇಳುತ್ತಾಳೋ ಅದನ್ನು ನಾನು ಕೇಳಿಸಿಕೊಳ್ಳುತ್ತಲೇ ಇರಲಿಲ್ಲ. ಹಾಗೆಯೇ ಆಕೆಯೂ ನನ್ನ ಮಾತಿಗೆ ಕಿವಿಗೊಡುತ್ತಿರಲಿಲ್ಲ. ಹೀಗೆ ಅರ್ಥಾನೆ ಇಲ್ಲದೆ ಗಲಾಟೆ ಮಾಡಿಕೊಳ್ಳುತ್ತಿದ್ದೆವು ಎಂದು ಹೇಳಿದ್ರು.
ನಮ್ಮ ಸಂಬಂಧ ಸರಿಯಾಗಿದ್ದು ಹೀಗೆ..
ಹಿರಿಯವಳಾದ ನಾನು ಒಂದು ಹೆಜ್ಜೆ ಮುಂದಎ ಸರಿದು ಆಕೆಯ ಮಾತನ್ನು ಕೇಳಿಸಿಕೊಳ್ಳಲು ಆರಂಭಿಸಿದೆ. ಗಲಾಟೆ ಮಾಡಿಕೊಳ್ಳೋದನ್ನು ನಿಲ್ಲಿಸಿದೆ. ನಾನು ಮಾತನಾಡುವುದಕ್ಕಿಂತ ಅವಳ ಮಾತು ಕೇಳಲು ಶುರು ಮಾಡಿದೆ. ಏನು ಮಾತನಾಡುತ್ತಾಳೋ ಮಾತನಾಡಲಿ ಎಂದು ಮುಕ್ತ ಅವಕಾಶ ಕೊಟ್ಟೆ. ಆ ಬದಲಾವಣೆ ನಮ್ಮಿಬ್ಬರಲ್ಲಿ ದೊಡ್ಡ ಬದಲಾವಣೆಯನ್ನು ತಂದಿತು. ನಾವಿಬ್ಬರು ಈಗ ತುಂಬಾನೆ ಕ್ಲೋಸ್. ನಮ್ಮ ಸಂಬಂಧ ಈಗ ತುಂಬಾನೆ ಚೆನ್ನಾಗಿದೆ ಎಂದು ಕಾಜೊಲ್ ಹೇಳಿಕೊಂಡಿದ್ದಾರೆ.
ನಾವಪ್ಪ ಎಲ್ಲದಕ್ಕೂ ಹೊಂದಿಕೊಳ್ತೇವೆ
ಮುಂದುವರೆದು, 90ರ ದಶಕದವರಾದ ನಾವು ಫೋನ್ ಸೋಶಿಯಲ್ ಮೀಡಿಯಾ ಇಲ್ಲದ ಕಾಲ ಮತ್ತು ತಂತ್ರಜ್ಞಾನ ಹೆಚ್ಚಾಗಿ ಬಳಕೆಯಾಗುತ್ತಿರುವ ಈ ಆಧುನಿಕ ಕಾಲವನ್ನು ನೋಡಿದ್ದೇವೆ. ನಾವು ಹೆಚ್ಚು ಹೊಂದಾಣಿಕೆಯುಳ್ಳ ಗುಣದವರು. ಈ ಝೆನ್ಜಿಗಳು ಅತಿಯಾದ ಮಾಹಿತಿ ಪಡೆದುಕೊಳ್ಳುವ ಮಧ್ಯೆ ಗೊಂದಲಗಳಿಗೆ ತುತ್ತಾಗುತ್ತಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು, (ಏಜೆನ್ಸೀಸ್).