ನರ್ಸ್ ವೃತ್ತಿಯನ್ನು ಕೇವಲ ಲೈಂಗಿಕವಾಗಿ ಚಿತ್ರಿಸಲಾಗುತ್ತಿದೆ! ಕಂಗನಾ 
ಬಾಲಿವುಡ್

ನರ್ಸ್ ವೃತ್ತಿಯನ್ನು ಕೇವಲ ಲೈಂಗಿಕವಾಗಿ ಚಿತ್ರಿಸಲಾಗುತ್ತಿದೆ! ಭಾರತ್​ ಭಾಗ್ಯ ವಿಧಾತಾ ಸಿನಿಮಾ ಪ್ರಚಾರ; ದಾದಿಯರ ಪರ ಧ್ವನಿ ಎತ್ತಿದ ಕಂಗನಾ ರಾಣಾವತ್​! Kangana Ranaut on Nurses

ಪ್ರಮುಖ ಮುಖ್ಯಾಂಶಗಳು

  • ನರ್ಸ್ ವೃತ್ತಿಯನ್ನು ಕೇವಲ ಲೈಂಗಿಕವಾಗಿ ಚಿತ್ರಿಸಲಾಗುತ್ತಿದೆ!
  • ಬಾಲಿವುಡ್ ಹಾಗೂ ಸಮಾಜದ ವಿರುದ್ಧ ಸಂಸದೆ ಕಂಗನಾ ರಣಾವತ್ ಆಕ್ರೋಶ
  • ಜೂನ್​.12 ಕ್ಕೆ ಬಿಡುಗಡೆಯಾಗುತ್ತಿರುವ ಭಾರತ್ ಭಾಗ್ಯ ವಿಧಾತಾ ಸಿನಿಮಾ
ಮುಂಬೈ​: ಬಾಲಿವುಡ್​ ನಟಿ, ಬಿಜೆಪಿ ಸಂಸದೆ ಕಂಗನಾ ರಣಾವತ್ (Kangana Ranaut on Nurses)​ ಬಿಡುಗಡೆಯಾಗಲಿರುವ ತಮ್ಮ ಸಿನಿಮಾದ ಪ್ರಚಾರದ ಸಂದರ್ಭದಲ್ಲಿ, ನರ್ಸ್​(ದಾದಿ) ವೃತ್ತಿಯನ್ನು ಕೇವಲ ಲೈಂಗಿಕವಾಗಿ ಚಿತ್ರಿಸಲಾಗಿದೆ. ಆದರೆ ಆರೋಗ್ಯ ಕ್ಷೇತ್ರದಲ್ಲಿ ನರ್ಸ್​(ದಾದಿ) ಗಳ ಪಾತ್ರ ತುಂಬಾ ಮಹತ್ವದಾಗಿರುತ್ತದೆ ಎಂದು ಹೇಳಿದ್ದಾರೆ.
ಜೂನ್​. 12 ರಂದು ತೆರೆಕಾಣಲಿರುವ ಕಂಗನಾ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಭಾರತ್​​ ಭಾಗ್ಯ ವಿಧಾತಾ ಸಿನಿಮಾದಲ್ಲಿ 26/11 ದಾಳಿ ಸಮಯದಲ್ಲಿ ಮುಂಬೈನ ಕಾಮಾ ಆಸ್ಪತ್ರೆಯಲ್ಲಿ ಅಂದಿನ ದಾದಿಯರ ಶೌರ್ಯದ ಕಥೆಯನ್ನು ಈ ಸಿನಿಮಾ ಹೇಳ ಹೊರಟಿದೆ ಎಂದು ನಟಿ, ಸಂಸದೆ ತಿಳಿಸಿದರು.

ನರ್ಸ್​ಗಳ ಸ್ಥಿತಿ ಉತ್ತಮವಾಗಿಲ್ಲ!

ಸಿನಿಮಾ ಪ್ರಚಾರದ ವೇಳೆ ಮಾತನಾಡಿದ ಕಂಗನಾ, ಭಾರತದಲ್ಲಿ ದಾದಿಯರ ಸ್ಥಿತಿ ಉತ್ತಮವಾಗಿಲ್ಲ, ಅವರು ಕಡಿಮೆ ಸಂಬಳಕ್ಕೆ ಸುಮಾರು ಅರ್ಧದಿನ ಕೆಲಸ ಮಾಡುತ್ತಾರೆ. ಎಷ್ಟೇ ಉತ್ತಮ ಕೆಲಸ ಮಾಡಿದರು ಅವರ ಸಾಧನೆ ಏನೆಂದು ಜನ ಗುರುತಿಸುವುದೇ ಇಲ್ಲ. ಆದ್ದರಿಂದ ನಮ್ಮ ಸಿನಿಮಾವನ್ನು ನೋಡಿದ ನಂತರವಾದರೂ ನರ್ಸ್​ಗಳ ಜೊತೆ ಜನ ಗೌರವಯುತವಾಗಿ ನಡೆದುಕೊಳ್ಳಲಿ ಎಂದು ನಟಿ ಹೇಳಿದ್ದಾರೆ.
ದಾದಿಯರನ್ನು ಗೌರವಿಸಿ
ಒಂದು ಆಸ್ಪತ್ರೆಯಲ್ಲಿ ನರ್ಸ್​ಗಳ ಕೊರತೆ ಇದ್ದರೆ ಆ ಆಸ್ಪತ್ರೆ ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ. ನರ್ಸ್​ಗಳು ರೋಗಿಗಳು ಗುಣಮುಖರಾಗುವುದರಲ್ಲಿ ಪ್ರಮುಖ ಪಾತ್ರ ವಹಸುತ್ತಾರೆ. ಆದರೆ ಜನ ಅವರನ್ನು ಯಾವ ದೃಷ್ಟಿಯಲ್ಲಿ ನೋಡುತ್ತಾರೆ? ಎಂದು ಎಲ್ಲರಿಗೂ ತಿಳಿದಿದೆ.
ಆಸ್ಪತ್ರೆ ಎಂದು ಬಂದಾಗ ಎಲ್ಲರೂ ಡಾಕ್ಟರ್​ಗಳ ಬಗ್ಗೆ ವಿಚಾರ ಮಾಡುತ್ತಾರೆ, ಆದರೆ ಒಂದು ಆಸ್ಪತ್ರೆ ಸುಗಮವಾಗಿ ಕಾರ್ಯ ನಿರ್ವಹಿಸಬೇಕೆಂದರೆ ಅಲ್ಲಿ ನರ್ಸ್​ಗಳ ಪಾತ್ರವೇ ಪ್ರಮುಖವಾಗಿರುತ್ತದೆ. ಆದ್ದರಿಂದ ಮುಂದಿನ ಸಲ ಆಸ್ಪತ್ರೆಗೆ ಹೋದರೆ ನರ್ಸ್​ಗಳ ಜೊತೆ ಗೌರವಯುತವಾಗಿ ನಡೆದುಕೊಳ್ಳಿ ಎಂದು ಹೇಳಿದ್ದಾರೆ.

ಭಾರತ್​ ಭಾಗ್ಯ ವಿಧಾತಾ ಬಗ್ಗೆ

ಬಾಲಿವುಡ್‌ನ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದಾದ ಭಾರತ್ ಭಾಗ್ಯ ವಿಧಾತಾ (Bharat Bhhagya Viddhaata) ಇದೇ ಜೂನ್ 12 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ. ಖ್ಯಾತ ನಟಿ, ಸಂಸದೆ ಕಂಗನಾ ರಣಾವತ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರವು, 26/11 ರ ಮುಂಬೈ ಭಯೋತ್ಪಾದನಾ ದಾಳಿಯ ಸಂದರ್ಭದಲ್ಲಿ ನಡೆದ ನೈಜ ಘಟನೆಗಳಿಂದ ಪ್ರೇರಿತವಾಗಿದೆ.
ಮುಂಬೈನ ಕಾಮಾ ಮತ್ತು ಅಲ್ಬ್ಲೆಸ್ ಆಸ್ಪತ್ರೆಯ (Cama Hospital) ಮೇಲೆ ಉಗ್ರರು ದಾಳಿ ಮಾಡಿದಾಗ, ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಸುಮಾರು 400 ಕ್ಕೂ ಹೆಚ್ಚು ರೋಗಿಗಳ ಜೀವ ಉಳಿಸಿದ ನರ್ಸ್‌ಗಳು ಹಾಗೂ ವೈದ್ಯಕೀಯ ಸಿಬ್ಬಂದಿಯ ಅದ್ವಿತೀಯ ಧೈರ್ಯ ಮತ್ತು ಸಾಹಸದ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ಮನೋಜ್ ತಪಾಡಿಯಾ ನಿರ್ದೇಶಿಸಿರುವ ಈ ಚಿತ್ರದಲ್ಲಿ ಕಂಗನಾ ರಣಾವತ್ ಒಬ್ಬ ಧೈರ್ಯಶಾಲಿ ನರ್ಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇವರೊಂದಿಗೆ ಗಿರಿಜಾ ಓಕ್, ಸ್ಮಿತಾ ತಾಂಬೆ ಮತ್ತು ಈಶಾ ಡೇ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ, (ಏಜನ್ಸೀಸ್​).