Nupur Sanon: ಬಾಲಿವುಡ್ ನಟಿ ಕೃತಿ ಸನೋನ್ ಅವರ ಸಹೋದರಿ ನೂಪುರ್ ಸನೋನ್ ಅವರು ತಮ್ಮ ದೀರ್ಘವಾದ ಗೆಳೆಯ, ಗಾಯಕ ಸ್ಟೆಬಿನ್ ಬೆನ್ ಅವರೊಂದಿಗೆ ಶನಿವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅತ್ಯಂತ ಆಪ್ತರು ಮತ್ತು ಕುಟುಂಬದ ಸದಸ್ಯರನ್ನು ಒಳಗೊಂಡ ಈ ವಿವಾಹವು ಕ್ರಿಶ್ಚಿಯನ್ ಸಮುದಾಯದಂತೆ ನೆರವೇರಿತು.
ಈ ಸಂತೋಷದ ಕ್ಷಣದಲ್ಲಿ ಕೃತಿ ಸನೋನ್ ಮುಂಚೂಣಿಯಲ್ಲಿ ನಿಂತು ಸಂಭ್ರಮಿಸಿದರೆ, ಬಾಲಿವುಡ್‌ನ ಖ್ಯಾತ ನಟಿಯರಾದ ದಿಶಾ ಪಟಾನಿ ಮತ್ತು ಮೌನಿ ರಾಯ್ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಭಾಗವಹಿಸಿ, ನವ ಜೋಡಿಗೆ ಶುಭ ಹಾರೈಸಿದ್ದಾರೆ. ಈ ಸಂದರ್ಭದಲ್ಲಿ ಬಿಳಿ ಬಣ್ಣದ ಸುಂದರ ಗೌನ್‌ನಲ್ಲಿ ನೂಪುರ್ ಮಿಂಚಿದರೆ, ಸ್ಟೆಬಿನ್ ಬೆನ್ ಕ್ಲಾಸಿಕ್ ಸೂಟ್‌ನಲ್ಲಿ ಕಂಗೊಳಿಸುತ್ತಿದ್ದರು.
ಮೌನಿ ರಾಯ್, ದಿಶಾ ಪಟಾನಿ ಅವರು ವಿವಾಹದ ಸುಂದರ ಕ್ಷಣಗಳನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದು, ನಾವು ಯಾವಗಲೂ ಸುಂದರವಾಗಿ ನಿಂತಿದ್ದೇವೆ, ಹಾಗೆಯೇ ಚೆನ್ನಾಗಿರುತ್ತೇವೆ ಎಂದು ಬರೆದಿದ್ದಾರೆ. ಇನ್ನೊಂದು ಚಿತ್ರದಲ್ಲಿ ಅವರು "ಹೇ ಬೆಸ್ಟಿ" ಎಂದು ಶೀರ್ಷಿಕೆ ನೀಡಿ ಪೋಸ್ಟ್ ಮಾಡಿದ್ದಾರೆ.
ಕಳೆದ ಭಾನುವಾರ (ಜ.04)ರಂದು ನೂಪುರ್ ಸನೋನ್ ತಮ್ಮ ದೀರ್ಘಕಾಲದ ಗೆಳೆಯನಾದ ಗಾಯಕ ಸ್ಟೆಬಿನ್ ಬೆನ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡು ಆ ಸಿಹಿ ಸುದ್ದಿಯನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ರಿಲೇಶನ್ಶಿಪ್ ಸ್ಟೇಟಸ್ ಅಪ್‌ಡೇಟ್ ಮಾಡುವ ಮೂಲಕ ಬಹಿರಂಗಗೊಳಿಸಿದ್ದರು.
ಪೋಸ್ಟ್ನಲ್ಲೇನಿತ್ತು?
ಸ್ಟೆಬಿನ್ ಬೆನ್ ತನ್ನ ಪ್ರೇಯಸಿ ಮುಂದೆ ಮೊಣಕಾಲು ಊರಿ ಪ್ರಪೋಸ್ ಮಾಡುತ್ತಿರುವ ದೃಶ್ಯವನ್ನು ನಾವು ನೋಡಬಹುದು. ಈ ಶುಭ ಸಂದರ್ಭದಲ್ಲಿ ನೂಪುರ್ ಹೂವಿನ ಉಡುಪಿನಲ್ಲಿ ಕಾಂತಿಯುತವಾಗಿ ಕಾಣುತ್ತಿದ್ದರೆ, ಸ್ಟೆಬಿನ್ ನೀಲಿ ಬಣ್ಣದ ಸೂಟ್ ಧರಿಸಿ ಕಂಗೊಳಿಸುತ್ತಿದ್ದರು.
ಈ ಪೋಸ್ಟ್ ಅವರ ವೈಯಕ್ತಿಕ ಜೀವನದ ಸುತ್ತ ಹಲವು ವರ್ಷಗಳಿಂದ ಇದ್ದ ಊಹಾಪೋಹಗಳಿಗೆ ತೆರೆ ಎಳೆಯಲು ಸಹಾಯ ಮಾಡಿತ್ತು. ಆದಾಗ್ಯೂ, ನೂಪುರ್ ಮತ್ತು ಸ್ಟೆಬಿನ್ 2023 ರಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ವದಂತಿಗಳು ಹರಿದಾಡುತ್ತಿದ್ದವು. ಆದರೆ, ಈ ವಿಚಾರದ ಬಗ್ಗೆ ಈ ಜೋಡಿ ಎಂದಿಗೂ ಬಹಿರಂಗವಾಗಿ ಮಾತನಾಡಿರಲಿಲ್ಲ.
ನೂಪುರ್ ಸನೋನ್ ಅವರ ನಿಶ್ಚಿತಾರ್ಥದ ಉಂಗುರದ ಬಗ್ಗೆ!
ನಿಶ್ಚಿತಾರ್ಥ ಮಾಡಿಕೊಂಡ ನಂತರ, ಒಂದು ವಿಷಯವು ಬೇರೆನಕ್ಕಿಂತ ಹೆಚ್ಚಾಗಿ ಎದ್ದು ಕಾಣಲು ಪ್ರಾರಂಭವಾಗಿತ್ತು. ಅದೇನಂದ್ರೆ.. ನೂಪುರ್ ಸನೋನ್ ಧರಿಸಿದ ಉಂಗುರವು ಭಾರೀ ಚರ್ಚೆಗೀಡಾಗಿತ್ತು. ಇದು ಮಾರ್ಕ್ವೈಸ್-ಕಟ್ ಕಲ್ಲಿನಿಂದ ಮಾಡಿದ್ದಾಗಿತ್ತು. ಇದು ಮಧ್ಯದಲ್ಲಿರುವ ವಜ್ರವನ್ನು ಎರಡು ಬದಿಯ ಕಲ್ಲುಗಳೊಂದಿಗೆ ಜೋಡಿಸಲಾಗಿದ್ದು, ಅದು ಉಂಗುರದ ಸಮತೋಲನಕ್ಕೆ ಸರಿಯಾಗಿ ಹೊಂದಿಕೊಂಡಿತ್ತು. ಆದಾಗ್ಯೂ, ಹೌಟರ್‌ಫ್ಲೈ ವರದಿಯ ಪ್ರಕಾರ , ನಿಶ್ಚಿತಾರ್ಥದ ಉಂಗುರದ ಬೆಲೆ ಬರೋಬ್ಬರಿ 8 ಲಕ್ಷ ರೂ.ಗಳಿಗಿಂತ ಹೆಚ್ಚು ಎಂದು ವರದಿ ಮಾಡಿತ್ತು (ಏಜೆನ್ಸೀಸ್).