ಆಲಿಯಾ, ಶರ್ವರಿ ಬಿಕಿನಿ ದೃಶ್ಯಗಳ ವಿರುದ್ಧ ನೆಟ್ಟಿಗರ ಆಕ್ರೋಶ
- 'ಅಲ್ಫಾ' ಸಿನಿಮಾ ಬಿಡುಗಡೆಯಾದ ಬೆನ್ನಲ್ಲೇ ವಿವಾದ
- ಸಿನಿಮಾದಲ್ಲಿ ಆಲಿಯಾ, ಶರ್ವರಿ ಬಿಕಿನಿ ದೃಶ್ಯಗಳ ವಿರುದ್ಧ ನೆಟ್ಟಿಗರ ಆಕ್ರೋಶ
- ಕೇವಲ ದೇಹ ಸೌಂದರ್ಯಕ್ಕಷ್ಟೇ ನಟಿಯರು ಸೀಮಿತವೇ? ಎಂದ ಪ್ರೇಕ್ಷಕ
ಮುಂಬೈ: ಕಳೆದ ಕೆಲ ವರ್ಷದಿಂದ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದ್ದ ಯಶ್ ರಾಜ್ ಫಲ್ಮ್ಸ್ನ ಸ್ಪೈ ಯೂನಿವರ್ಸ್ ಸಿನಿಮಾ ಅಲ್ಫಾ (Alpha) ಇಂದು (ಶುಕ್ರವಾರ, ಜು.3) ತೆರೆಕಂಡಿದೆ. ಈ ಸಿನಿಮಾದ ಮುಖ್ಯಭೂಮಿಕೆಯಲ್ಲಿ ಆಲಿಯಾ ಭಟ್ ಕಾಣಿಸಿ ಕೊಂಡಿದ್ದಾರೆ.
ಬಿಕಿನಿ ದೃಶ್ಯಗಳಿಗೆ ನೆಟ್ಟಿಗರ ಕಿಡಿ!
ಇತ್ತೀಚಿಗೆ ಬಿಡುಗಡೆಯಾಗುತ್ತಿರುವ ಸಿನಿಮಾಗಳಲ್ಲಿ ಸ್ತ್ರೀ ಪಾತ್ರಗಳನ್ನು ಕೇವಲ ದೇಹ ಪ್ರದರ್ಶನ, ಹಸಿ-ಬಿಸಿ ದೃಶ್ಯ ಹಾಗೂ ಐಟಂ ಗರ್ಲ್ಗಳಾಗಿ ಸೀಮಿತಗೊಳಿಸಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಈಗ ಈ ಆರೋಪಕ್ಕೆ ಅಲ್ಫಾ ಕೂಡ ಗುರಿಯಾಗಿದೆ.
ಸಿನಿಮಾ ಭಾರತದ ಗೂಢಾಚಾರರಿಗೆ ಸಂಬಂಧಿಸಿದ್ದಾಗಿದೆ, ಆದರೆ ಇದರಲ್ಲಿ ಆಲಿಯಾ ಭಟ್ ಹಾಗೂ ಶರ್ವರಿಯ ಕೆಲ ದೃಶ್ಯಗಳಲ್ಲಿ ಬೇಕಂತಲೇ ಬಿಕಿನಿ ತೊಡಿಸಲಾಗಿದೆ. ಸಿನಿಮಾದ ಕತೆಗೆ ಅಗತ್ಯವಿದ್ದಾಗ ಓಕೆ, ಆದರೆ ಇದು ಕೇವಲ ಪ್ರೇಕ್ಷಕರ ಕಣ್ಣನ್ನು ಸೆಳೆಯಲು ಮಾಡುತ್ತಿರುವ ಕೀಳು ಮಟ್ಟದ ತಂತ್ರ ಎಂದು ನೆಟ್ಟಿಗರು ಕಿಡಿ ಕಾರುತ್ತಿದ್ದಾರೆ.
ಟಾಕ್ಸಿಕ್ ಮೇಲೂ ಕೇಳು ಬರುತ್ತಿದೆ ಆರೋಪ!
ಇದೇ ರೀತಿಯ ಆರೋಪವನ್ನು ರಾಕಿಂಗ್ ಸ್ಟಾರ್ ಯಶ್ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್ಅಫ್ಸ್ ಸಿನಿಮಾ ಕೂಡ ಎದುರಿಸುತ್ತಿದೆ. ಇತ್ತೀಚೆಗೆ ಬಿಡುಗಡೆಯಾದ ಈ ಸಿನಿಮಾದ ಟೀಸರ್ಗೆ ವಿರೋಧ ಕಂಡುಬಂದಿದೆ. ಸಿನಿಮಾದಲ್ಲಿ ಐವರು ನಾಯಕ ನಟಿಯರಿದ್ದಾರೆ, ಆದರೆ ಅವರನ್ನು ಹೇಗೆ ಬಳಸಿಕೊಂಡಿದ್ದಾರೆ ಎನ್ನುವುದು ಆಗಸ್ಟ್ 26 ಕ್ಕೆ ತಿಳಿಯಲಿದೆ.
ಪೆದ್ದಿಯಿಂದ ಆರಂಭವಾದ ಟ್ರೆಂಡ್!
ಸಿನಿಮಾಗಳಲ್ಲಿ ಬಹಳ ಹಿಂದಿನಿಂದಲೂ ಸ್ತ್ರೀ ಪಾತ್ರಗಳನ್ನು ಒಂದರ್ಥದಲ್ಲಿ ನಾಯಕನಟನ ನಂತರದ ಪಾತ್ರವೆಂಬಂತೆ ಬಿಂಬಿಸಲಾಗುತ್ತಿತ್ತು. ಆದರೆ ಕೆಲ ತಿಂಗಳಿನ ಹಿಂದೆ ಬಿಡುಗಡೆಯಾದ ರಾಮ್ ಚರಣ್ ಹಾಗೂ ಜಾನ್ವಿ ಕಪೂರ್ ನಟನೆಯ ಪೆದ್ದಿ ಸಿನಿಮಾ ಬಿಡುಗಡೆಯ ನಂತರ ಪ್ರೇಕ್ಷಕರು ಇದನ್ನು ಪ್ರಶ್ನಿಸಲು ಪ್ರಾರಂಭಿಸಿದ್ದಾರೆ.
ಈ ಪೆದ್ದಿ ಸಿನಿಮಾದಲ್ಲಿ ಜಾನ್ವಿ ಕಪೂರ್ಳನ್ನು ಕೇವಲ ಆಕೆ ದೇಹ ಸೌಂದರ್ಯಕ್ಕಾಗಿ ಬಳಸಿಕೊಂಡಿದ್ದಾರೆ ಹೊರತು ಮತ್ತ್ಯಾವ ಉದ್ದೇಶಕ್ಕೂ ಅಲ್ಲ ಎಂದು ವಿಮರ್ಶಕರು ಖಾರವಾದ ಪ್ರತಿಕ್ರಿಯೆ ನೀಡಿದ್ದರು. ಈ ಸಿನಿಮಾದ ನಂತರ ಬಿಡುಗಡೆಯಾದ ಕಾಕ್ಟೇಲ್ 2 ಸಿನಿಮಾದಲ್ಲಿ ಕೂಡ ಕೃತಿ ಸನೊನ್ ಅವರನ್ನು ಬೇಕಂತಲೇ ಬಿಕಿಮಿಯಲ್ಲಿ ತೋರಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು,(ಏಜನ್ಸೀಸ್).