Dhurandhar Part 2 (ಚಿತ್ರ Instagram)
- ಬಾಲಿವುಡ್‌ನ ಬಹುನಿರೀಕ್ಷಿತ ಆಕ್ಷನ್ ಚಿತ್ರ 'ಧುರಂಧರ್ ಭಾಗ 2' ಟೀಸರ್ ಇಂದು ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.
- ರಣವೀರ್ ಸಿಂಗ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ಹೊಸ ಮತ್ತು ಆಕರ್ಷಕ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ
- ಪೋಸ್ಟರ್‌ನಲ್ಲಿ, ರಣವೀರ್ ಕಪ್ಪು ಬಣ್ಣದ ರಗಡ್ ಜಾಕೆಟ್ ಧರಿಸಿ, ಮಳೆಯಲ್ಲಿ ಪೂರ್ತಿ ಒದ್ದೆಯಾಗಿ ನಿಂತಿದ್ದಾರೆ
ಮುಂಬೈ: ಬಾಲಿವುಡ್‌ನ ಬಹುನಿರೀಕ್ಷಿತ ಆಕ್ಷನ್ ಚಿತ್ರ 'ಧುರಂಧರ್ ಭಾಗ 2' ಟೀಸರ್‌ಗಾಗಿ ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಂತಾಗಿದ್ದು, ಇಂದು (ಮಂಗಳವಾರ ಫೆ.03) ಧುರಂಧರ್: ದಿ ರಿವೆಂಜ್ ಚಿತ್ರದ ಅಧಿಕೃತ ಟೀಸರ್ ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.
ಹೊಸ ಪೋಸ್ಟರ್ ಮೂಲಕ ಸುದ್ದಿ ಹಂಚಿಕೊಂಡ ರಣವೀರ್
ಚಿತ್ರದ ನಾಯಕ ರಣವೀರ್ ಸಿಂಗ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ಹೊಸ ಮತ್ತು ಆಕರ್ಷಕ ಪೋಸ್ಟರ್ ಅನ್ನು ಹಂಚಿಕೊಳ್ಳುವ ಮೂಲಕ ಈ ಸುದ್ದಿಯನ್ನು ದೃಢಪಡಿಸಿದ್ದಾರೆ. ಆದಾಗ್ಯೂ, ಪೋಸ್ಟರ್‌ನಲ್ಲಿ ರಣವೀರ್ ಲುಕ್ ಸಿನಿಮಾ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಪೋಸ್ಟರ್‌ನಲ್ಲಿ, ರಣವೀರ್ ಕಪ್ಪು ಬಣ್ಣದ ರಗಡ್ ಜಾಕೆಟ್ ಧರಿಸಿ, ಮಳೆಯಲ್ಲಿ ಪೂರ್ತಿ ಒದ್ದೆಯಾಗಿ ನಿಂತಿದ್ದಾರೆ. ಅವರ ಮುಖದಲ್ಲಿನ ತೀವ್ರತೆ ಮತ್ತು ಕಣ್ಣುಗಳಲ್ಲಿನ ಸೇಡಿನ ಭಾವವು ಪಾತ್ರದ ಶಕ್ತಿಯನ್ನು ಬಿಂಬಿಸುತ್ತಿದೆ. ಇಡೀ ಪೋಸ್ಟರ್ ಅನ್ನು ಕೆಂಪು ಮತ್ತು ಕಪ್ಪು ಬಣ್ಣದ ಹಿನ್ನೆಲೆಯಲ್ಲಿ ವಿನ್ಯಾಸಗೊಳಿಸಲಾಗಿದ್ದು, ಈ ಬಣ್ಣಗಳು ಚಿತ್ರವು ಅತ್ಯಂತ ಹಿಂಸಾತ್ಮಕ, ಆಕ್ಷನ್ ಭರಿತ ಮತ್ತು ಭಾವನಾತ್ಮಕ ಸೇಡಿನ ಕಥೆಯನ್ನು ಹೊಂದಿದೆ ಎಂಬುದನ್ನು ತೋರಿಸುತ್ತಿದೆ.
ಧುರಂಧರ ಭಾಗ 2 ಟೀಸರ್ ಬಿಡುಗಡೆ ಸಮಯ
ಟೀಸರ್ ಬಿಡುಗಡೆಯ ಸಮಯದ ಬಗ್ಗೆ ಮಾಹಿತಿ ನೀಡಿದ ನಟ, ಧುರಂಧರ್: ದಿ ರಿವೆಂಜ್ ಟೀಸರ್ ಇಂದು ಮಧ್ಯಾಹ್ನ 12:12 ಕ್ಕೆ ಬಿಡುಗಡೆಯಾಗಲಿದೆ. ಮಾರ್ಚ್ (19) ರಂದು ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ವಿಶ್ವಾದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ರಣವೀರ್ ಸಿಂಗ್ ಅವತಾರಕ್ಕೆ ಫ್ಯಾನ್ಸ್ ಫಿಧಾ!
ಆದಿತ್ಯ ಧರ್ ನಿರ್ದೇಶನದ 'ಧುರಂಧರ್: ದಿ ರಿವೆಂಜ್' ಚಿತ್ರದ ಟೀಸರ್ ಬಿಡುಗಡೆಯ ಸುದ್ದಿ ಹೊರಬೀಳುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ರಣವೀರ್ ಸಿಂಗ್ ಅವರ ಲುಕ್ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಒಬ್ಬ ಬಳಕೆದಾರರು ಅವರ ರಗಡ್ ಲುಕ್ ನೋಡಿ ಭಯ ಇಲ್ಲಿದೆ ಎಂದು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರರು ಟೀಸರ್ ವೀಕ್ಷಿಸಲು ಹೋಗೋಣ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ರಹಸ್ಯ ಪೋಸ್ಟ್!
ಸೋಮವಾರ (ಫೆ.02) ನಿರ್ದೇಶಕ ಆದಿತ್ಯ ಧಾರ್, ಸಾರಾ ಅರ್ಜುನ್ ಮತ್ತು ರಣವೀರ್ ಸಿಂಗ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ನಾಳೆ ಮಧ್ಯಾಹ್ನ 12:12 ಎಂಬ ಕಪ್ಪು ಹಿನ್ನಲೆಯನ್ನು ಹೊಂದಿರುವ ರಹಸ್ಯ ಪೋಸ್ಟನ್ನು ಹಂಚಿಕೊಂಡಿದ್ದರು. ಇದು ಆಗಲೇ ಟೀಸರ್ ಬಿಡುಗಡೆಯ ಬಗ್ಗೆ ಮಾಹಿತಿಯನ್ನು ನೀಡಲು ಪ್ರಾರಂಭಿಸಿತ್ತು.
ಧುರಂಧರ್ 2 ಬಿಡುಗಡೆ ದಿನಾಂಕ
ಆದಿತ್ಯ ಧರ್ ಅವರ ಬ್ಲಾಕ್‌ಬಸ್ಟರ್ ಚಿತ್ರ ಧುರಂಧರ್‌ನ ಎರಡನೇ ಕಂತು, ಧುರಂಧರ್: ದಿ ರಿವೆಂಜ್, ಮಾರ್ಚ್ 19, 2026 ರಂದು ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಸೇರಿದಂತೆ ಬಹು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ರಣವೀರ್ ಸಿಂಗ್, ಸಾರಾ ಅರ್ಜುನ್, ಸಂಜಯ್ ದತ್, ಆರ್ ಮಾಧವನ್, ಅರ್ಜುನ್ ರಾಂಪಾಲ್, ರಾಕೇಶ್ ಬೇಡಿ, ಡ್ಯಾನಿಶ್ ಪಾಂಡೋರ್, ಗೌರವ್ ಗೆರಾ ಸೇರಿದಂತೆ ಹಲವಾರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ (ಏಜೆನ್ಸೀಸ್).