- ವಾರ್ನರ್ ಬ್ರದರ್ಸ್ ಸ್ಟುಡಿಯೋವನ್ನು ಖರೀದಿಸಲಿರುವ ನೆಟ್ಪ್ಲಿಕ್ಸ್
- 82 ಬಿಲಿಯನ್ ಡಾಲರ್ಗೆ ಖರೀದಿಸಲಿರುವ ನೆಟ್ಪ್ಲಿಕ್ಸ್
- ಜಗತ್ತಿನ ಹಳೆಯ ಮತ್ತು ಖ್ಯಾತನಾಮ ಸ್ಟುಡಿಯೋ ವಾರ್ನರ್ ಬ್ರದರ್ಸ್
Netflix : ಜಗತ್ತಿನ ಪ್ರಸಿದ್ಧ ಚಲನಚಿತ್ರ ಹಾಗೂ ದೂರದರ್ಶನ ನಿರ್ಮಾಣ ಕೇಂದ್ರವಾದ ವಾರ್ನರ್ ಬ್ರದರ್ಸ (Warner Brothers) ನ್ನು ನೆಟ್‌ಫ್ಲಿಕ್ಸ್ (Netflix) ಸರಿಸುಮಾರು 82 ಬಿಲಿಯನ್ ಡಾಲರ್ಗಳಿಗೆ ಖರೀದಿಸಲಿದೆ ಎಂದು ನೆಟ್‌ಫ್ಲಿಕ್ಸ್ CEO ಗಳಾದ ಟೆಡ್ ಸರಾಂಡೋಸ್ ಮತ್ತು ಗ್ರೆಗ್ ಪೀಟರ್ಸ್ ತಿಳಿಸಿದ್ದಾರೆ. ಬಳಕೆದಾರರಿಗೆ ಹೆಚ್ಚಿನ ಆಯ್ಕೆಯನ್ನು ನೀಡುವುದು ಮತ್ತು ಷೇರುದಾರರಿಗೆ ಉತ್ತಮ ಮೌಲ್ಯವನ್ನು ಸೃಷ್ಟಿಸುವುದು ಈ ಖರೀದಿಯ ಮುಖ್ಯ ಉದ್ದೇಶ ಎಂದು ನೆಟ್ಪ್ಲಿಕ್ಸ್ ಹೇಳಿದೆ.
ನೆಟ್‌ಫ್ಲಿಕ್ಸ್ CEO ಟೆಡ್ ಸರಾಂಡೋಸ್, ನೆಟ್‌ಫ್ಲಿಕ್ಸ್‌ನ ಸದಸ್ಯರ ಅನುಭವ ಮತ್ತು ಜಾಗತಿಕ ವ್ಯಾಪ್ತಿಯನ್ನು ಮನಗಂಡ ವಾರ್ನರ್ ಬ್ರದರ್ಸ್ ತನ್ನ ಕಥೆಗಳನ್ನು ನೆಟ್‌ಫ್ಲಿಕ್ಸ್‌ನ ವೇದಿಕೆಯಲ್ಲಿ ಹಂಚಿಕೊಂಡು ವಿಶಾಲವಾದ ವೀಕ್ಷಕ ಬಳಗವನ್ನು ತಲುಪಲಿದೆ ಎಂದು ಹೇಳಿದರು. ವಾರ್ನರ್ ಬ್ರದರ್ಸ್ ಡಿಸ್ಕವರಿಯ ಸಿಇಒ ಡೇವಿಡ್ ಜಸ್ಲಾವ್ ಒಂದು ಶತಮಾನಕ್ಕೂ ಹೆಚ್ಚು ಕಾಲ, ವಾರ್ನರ್ ಬ್ರದರ್ಸ್ ತಮ್ಮಲ್ಲಿ ಮೂಡಿಬಂದಂತಹ ಸಿನೆಮಾ, ವೆಬ್ ಸೀರಿಸ್, ಕಾಟೂರ್ನ್ಗಳಿಂದ ವಿಶ್ವದೆಲ್ಲಡೆ ತನ್ನದೇ ಆದ ಪ್ರೇಕ್ಷಕರನ್ನು ಹೊಂದಲು ಸಾಧ್ಯವಾಯಿತು.
ಈಗ ನೆಟ್‌ಫ್ಲಿಕ್ಸ್‌ನೊಂದಿಗೆ ಒಟ್ಟಾಗಿ ತನ್ನಲ್ಲಿರುವ ಇನ್ನಷ್ಟು ಕತೆಗಳನ್ನು ಜಗತ್ತಿಗೆ ಹೇಳಲಿದೆ ಎಂದರು.
ಇಂದಿನ ಈ ಘೋಷಣೆಯಲ್ಲಿ ವಿಶ್ವದ ಎರಡು ಶ್ರೇಷ್ಠ ಕಥೆ ಹೇಳುವ ಕಂಪನಿಗಳನ್ನು ಒಟ್ಟುಗೂಡಿದ್ದು ಈ ಒಪ್ಪಂದದಿಂದ ಪ್ರೇಕ್ಷಕರು ಹೆಚ್ಚು ಇನ್ನೂ ಹೆಚ್ಚಿನ ಮನರಂಜನಾತ್ಮಕ ಕಾರ್ಯಕ್ರಮಗಳನ್ನು ನೀರಿಕ್ಷಿಸಬಹುದು ಎಂದು ಹೇಳಿದರು.
ವಾರ್ನರ್ ಬ್ರದರ್ಸ್ ಸ್ಟುಡಿಯೋಸ್ (Warner Bros. Studios)
1923ರಲ್ಲಿ ಸ್ಥಾಪಿತವಾದ ನಗರದಲ್ಲಿರುವ ಜಗತ್ತಿನ ಪ್ರಸಿದ್ಧ ಚಲನಚಿತ್ರ ಹಾಗೂ ದೂರದರ್ಶನ ನಿರ್ಮಾಣ ಕೇಂದ್ರ ವಾರ್ನರ್ ಬ್ರದರ್ಸ್ ಸ್ಟುಡಿಯೋಸ್ ಅಮೆರಿಕದ ಕ್ಯಾಲಿಫೋರ್ನಿಯಾದ ಬರ್ಬ್ಯಾಂಕ್ ನಗರದಲ್ಲಿದೆ.
ಈ ಸ್ಟುಡಿಯೋ ಹಾಲಿವುಡ್‌ನ ಪ್ರಮುಖ ಚಿತ್ರ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಹ್ಯಾರಿ ಪಾಟರ್, ದಿ ಡಾರ್ಕ್ ನೈಟ್, ಸೂಪರ್‌ಮ್ಯಾನ್, ಲೂನಿ ಟ್ಯೂನ್ಸ್ ಮೊದಲಾದ ಅನೇಕ ಜನಪ್ರಿಯ ಚಿತ್ರಗಳು ಮತ್ತು ಸರಣಿಗಳು ಇಲ್ಲಿಂದ ಹೊರಬಂದಿವೆ.
ಸ್ಟುಡಿಯೋ ಪ್ರದೇಶದಲ್ಲಿ ಚಲನಚಿತ್ರಗಳ ಸೆಟ್‌ಗಳು, ಶೂಟಿಂಗ್ ಸ್ಥಳಗಳು, ಪೋಸ್ಟ್-ಪ್ರೊಡಕ್ಷನ್ ಸೌಲಭ್ಯಗಳು ಸೇರಿದಂತೆ ಅನೇಕ ತಾಂತ್ರಿಕ ವ್ಯವಸ್ಥೆಗಳು ಲಭ್ಯ. ಪ್ರವಾಸಿಗರಿಗೆ ನೀಡುವ ಸ್ಟುಡಿಯೋ ಟೂರ್ ಸಹ ಇಲ್ಲಿ ಬಹಳ ಜನಪ್ರಿಯವಾಗಿದೆ.(ಏಜೆನ್ಸೀಸ್).