ನನ್ನ ಇನ್ನೊಂದು ಹೆಸರು ಲಲಿತೇಶ್ವರಿ: ಜೀನತ್ ಅಮನ್
- ನಟಿ ಜೀನತ್ ಅಮನ್ ಮುಸ್ಲಿಂ ಮಾತ್ರವಲ್ಲ, ಅವರ ತಾಯಿ ಹಿಂದೂ!
- ನನ್ನ ಇನ್ನೊಂದು ಹೆಸರು ಲಲಿತೇಶ್ವರಿ: ಜೀನತ್ ಅಮನ್
- ತಾಯಿ ಹಿಂದೂ, ತಂದೆ ಮುಸ್ಲಿಂ, ಮಲತಂದೆ ಜರ್ಮನ್!
ಮುಂಬೈ: 70 ಮತ್ತು 80 ರ ದಶಕದ ಬಾಲಿವುಡ್ನಲ್ಲಿ ತನ್ನದೇ ಆದ ವಿಶಿಷ್ಟ ಅಭಿನಯ, ನೃತ್ಯ ಹಾಗೂ ಸೌಂದರ್ಯದ ಮೂಲಕ ಸಿನಿ ಪ್ರೇಕ್ಷಕರನ್ನು ರಂಜಿಸಿದ ನಟಿಯರಲ್ಲಿ ಮೇಲ್ಪಂಕ್ತಿ ನಾಯಕಿಯರಲ್ಲಿ ಜೀನತ್ ಅಮನ್ (Zeenat Aman) ಒಬ್ಬರು.
ಸತ್ಯಂ ಶಿವಂ ಸುಂದರಂ, ಡಾನ್, ಕುರ್ಬಾನಿ ಮತ್ತು ಹರೇ ಕೃಷ್ಣ ಹರೇ ರಾಮ್ ಸಿನಿಮಾಗಳಲ್ಲಿ ತಮ್ಮ ಮನೋಜ್ಞ ಅಭಿನಯದ ಮೂಲಕ ಸ್ತ್ರೀ ಪಾತ್ರವನ್ನು ಬಾಲಿವುಡ್ನಲ್ಲಿ ಅಚ್ಚಳಿಯದಂತೆ ಚಿತ್ರಿಸಿದ್ದಾರೆ. ಇತ್ತೀಚೆಗೆ ಜೀನತ್ ಅವರ ಕಲಾ ಸೇವೆಯನ್ನು ಗೌರವಿಸಿ ಪ್ರಶಸ್ತಿಯೊಂದನ್ನು ನೀಡಿದ ಸಂದರ್ಭದಲ್ಲಿ ಅವರು ತಮ್ಮ ಮತ್ತು ಹಿಂದೂ ಧರ್ಮದ ಹಿನ್ನಲೆ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ನನ್ನ ಇನ್ನೊಂದು ಹೆಸರು ಲಲಿತೇಶ್ವರಿ!
ನನ್ನ ಹೆಸರು ಜೀನತ್ ಅಮನ್ ಎಂದಿರುವ ಕಾರಣ ಎಲ್ಲರೂ ನನ್ನನ್ನು ಮುಸ್ಲಿಂ ಎಂದು ತಿಳಿದಿದ್ದಾರೆ, ಅದು ಸತ್ಯವು ಹೌದು. ಆದರೆ ಬಹಳಷ್ಟು ಜನಕ್ಕೆ ನನ್ನ ತಾಯಿ ಹಿಂದೂ ಧರ್ಮಕ್ಕೆ ಸೇರಿದ್ದರೆಂದು ತಿಳಿದಿಲ್ಲ.
ನನ್ನ ತಾಯಿ ಹೆಸರು ವರ್ಧಿನಿ, ಅವರು ನನ್ನ ಮುಸ್ಲಿಂ ತಂದೆಯನ್ನು ಮದುವೆಯಾದರು. ನನಗೆ ನನ್ನ ತಂದೆ ಮನೆಯಲ್ಲಿ ಜೀನತ್ ಎಂದು ಕರೆದರೆ, ತಾಯಿ ಮನೆಯಲ್ಲಿ ನನಗೆ ಲಲಿತೇಶ್ವರಿ ಎಂಬ ಹೆಸರನ್ನು ಇಟ್ಟಿದ್ದರು. ನನ್ನಮ್ಮ ಮಹಾನ್ ದೈವ ಭಕ್ತೆಯಾಗಿದ್ದಳು. ದಿನಕ್ಕೆ ಎರಡರಿಂದ ಮೂರು ಗಂಟೆಯನ್ನು ಪೂಜಾ ಕಾರ್ಯಗಳಿಗೆ ಮೀಸಲಿಡುತ್ತಿದ್ದರೆಂದು ತಿಳಿಸಿದ್ದಾರೆ.
ನಾನು ಧಾರ್ಮಿಕ ವ್ಯಕ್ತಿಯಲ್ಲ!
ತನ್ನ ತಾಯಿಯ ಧಾರ್ಮಿಕ ಶ್ರದ್ಧೆ ಬಗ್ಗೆ ಹೇಳಿದ ಜೀನತ್, ಆದರೆ ನಾನು ಧಾರ್ಮಿಕ ವ್ಯಕ್ತಿ ಅಲ್ಲವೇ ಅಲ್ಲ. ನಾನು ಎಲ್ಲವನ್ನು ಬಹಳ ಹತ್ತಿರದಿಂದ ನೋಡಿದ್ದೆನೆ. ನನ್ನ ತಾಯಿ ಹಿಂದೂ ಆಗಿದ್ದಳು, ನನ್ನಪ್ಪ ಮುಸ್ಲಿಂ, ಅವರ ಉಳಿದ ಮಕ್ಕಳು ಇಸ್ಲಾಂ ಅನ್ನು ಪಾಲಿಸುತ್ತಾರೆ. ನಾನು ಕ್ಯಥೋಲಿಕ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದೆ. ನನ್ನ ಮಲ ತಂದೆ ಒಬ್ಬ ಜರ್ಮನ್, ಹೀಗಾಗಿ ನನಗೆ ಪ್ರಪಂಚದ ಎಲ್ಲಾ ಧರ್ಮಗಳ ಪರಿಚಯಯಿದೆ ಎಂದಿದ್ದಾರೆ.
ನನಗೆ ಎಲ್ಲಾ ಧರ್ಮಗಳ ಬಗ್ಗೆ ಗೊತ್ತಿದ್ದ ಕಾರಣ, ಯಾವುದೇ ಒಂದು ಧರ್ಮವನ್ನು ಪಾಲಿಸಲು ನನ್ನಿಂದ ಸಾಧ್ಯವಾಗಲಿಲ್ಲ. ಪ್ರತಿಯೊಂದ ಧರ್ಮವು ಶ್ರೇಷ್ಟವಾಗಿವೆ, ಯಾವ ಧರ್ಮವು ಕೆಟ್ಟದನ್ನು ಮಾಡಿ ಎಂದು ಹೇಳುವುದಿಲ್ಲ. ನಾನು ಮನುಶತ್ವ, ದಯೆ, ಕರುಣೆ, ಸಮಾನತೆ ಇವುಗಳಲ್ಲಿ ನಂಬಿಕೆ ಹೊಂದಿದ್ದೆನೆ. ಇದೇ ನಾನು ಪಾಲಿಸುವ ಧರ್ಮ ಎಂದು ಜೀನತ್ ಹೇಳಿದ್ದಾರೆ, (ಏಜನ್ಸೀಸ್).