ಪಾಕಿಸ್ತಾನದ ರಾಜಕಾರಣಿ ನಬೀಲ್​ ಗಬೋಲ್​ಗೆ ಕೌಂಟರ್​ ಕೊಟ್ಟ ರಾಕೇಶ್​ ಬೇಡಿ 
ಬಾಲಿವುಡ್

ನನ್ನಪ್ಪ ಪಾಕಿಸ್ತಾನಕ್ಕೆ ಹೋಗಿಲ್ಲ: ಜಮೀಲ್​ ಜಮಾಲಿ ನಾನೇ ಎಂದ ಪಾಕ್​ ಸಂಸದನಗೆ ರಾಕೇಶ್​ ಬೇಡಿ ಕೌಂಟರ್​! Rakesh Bedi on Nabil Gabol

ಪ್ರಮುಖ ಮುಖ್ಯಾಂಶಗಳು

  • ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸುತ್ತಿರುವ ಧುರಂಧರ್​2
  • ಜಮೀಲ್​ ಜಮಾಲಿ ಪಾತ್ರ ನನ್ನನ್ನೇ ಆಧರಿಸಿ ಚಿತ್ರಿಸಿದ ಪಾತ್ರ ಎಂದಿದ್ದ ಪಾಕ್​ ಸಂಸದ ನಬೀಲ್​ ಗಬೋಲ್​
  • ನನ್ನಪ್ಪ ಪಾಕಿಸ್ತಾನಕ್ಕೆ ಹೋಗಿಲ್ಲ ಎಂದು ಕೌಂಟರ್​ ಕೊಟ್ಟ ಜಮೀಲ್​ ಜಮಾಲಿ ಪಾತ್ರಧಾರಿ ರಾಕೇಶ್​ ಬೇಡಿ
ಮುಂಬೈ: ಸದ್ಯ ಬಾಕ್ಸ್​ ಆಫೀಸ್​ನಲ್ಲಿ ತನ್ನ ನಾಗಾಲೋಟದ ಮೂಲಕ ಪ್ಷೇಕ್ಷಕರ ಮನವನ್ನು ಗೆದ್ದಿರುವ ಸಿನಿಮಾ ಯಾವುದೆಂದರೆ ಅದು ಧುರಂಧರ್ 2 ದಿ ರಿವೆಂಜ್​ ಎಂದೇ ಹೇಳುತ್ತಾರೆ. ರಣವೀರ್​ ಸಿಂಗ್​ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಮತ್ತು ಆದಿತ್ಯ ಧರ್​ ನಿರ್ದೇಶಿಸಿರುವ ಈ ಸಿನಿಮಾ ಈಗಾಗಲೇ 1,800 ಕೋಟಿ ಕಲೆಕ್ಷನ್​ ಮಾಡಿದ್ದು, ಇನ್ನೇನು ಕೆಲವೇ ದಿನಗಳಲ್ಲಿ 2,000 ಕೋಟಿ ಗುರಿಯನ್ನು ತಲುಪಲಿದೆ ಎಂದು ಹೇಳಲಾಗುತ್ತಿದೆ.

ನನ್ನಪ್ಪ ಪಾಕಿಸ್ತಾನಕ್ಕೆ ಹೋಗಿಲ್ಲ!

ಈ ಸಿನಿಮಾದಲ್ಲಿರುವ ಬಹುಮುಖ್ಯ ಪಾತ್ರಗಳಲ್ಲಿ ಹಿರಿಯ ನಟ ರಾಕೇಶ್​ ಬೇಡಿ (Rakesh Bedi on Nabil Gabol) ನಟಿಸಿರುವ ಜಮೀಲ್​ ಜಮಾಲಿ ಪಾತ್ರ ಪ್ರಮುಖವಾಗಿದೆ. ಪಾಕಿಸ್ತಾನದ ರಾಜಕಾರಣಿಯ ಪಾತ್ರದಲ್ಲಿ ರಾಕೇಶ್​ ಬೇಡಿ ಜನರ ಮೆಚ್ಚುಗೆಯನ್ನು ಪಡೆದಿದ್ದಾರೆ.
ಆದರೆ ಈ ಪಾತ್ರವು ಪಾಕಿಸ್ತಾನದ ರಾಜಕಾರಣಿ ನಬೀಲ್​ ಗಬೋಲ್​ ಅವರನ್ನು ಹೋಲುತ್ತಿದೆ ಎಂದು ಕೆಲವರು ಹೇಳಿದ್ದರು. ಹಾಗೆಯೇ ಸ್ವತಃ ನಬೀಲ್​ ಗಬೋಲ್​ ಅವರೇ ಈ ಪಾತ್ರ ನನ್ನನ್ನು ನೋಡಿಯೇ ಚಿತ್ರಿಸಿದ್ದಾರೆ ಎಂದು ಹೇಳಿದ್ದರು.
ಆದರೆ ಈಗ ಈ ಪ್ರಶ್ನೆಗೆ ಉತ್ತರಿಸಿರುವ ರಾಕೇಶ್​ ಬೇಡಿ, ನನ್ನಪ್ಪ ಯಾವುತ್ತೂ ಪಾಕಿಸ್ತಾನಕ್ಕೆ ಹೋಗಿಲ್ಲ, ಗಬೋಲ್​ ಅವರ ಅಪ್ಪ ಭಾರತಕ್ಕೆ ಬಂದಿಲ್ಲ. ಆದ್ದರಿಂದ ಈ ಜಮೀಲ್​ ಜಮಾಲಿ ಪಾತ್ರ ಕೇಲವ ಕಾಲ್ಪನಿಕವಾಗಿದ್ದು, ಪಾಕಿಸ್ತಾನದಲ್ಲಿರುವ ಹಲವಾರು ರಾಜಕಾರಣಿಗಳನ್ನು ಅಭ್ಯಸಿಸಿ ತಯಾರಿಸಿದ ಪಾತ್ರ ಇದಾಗಿದೆ ಎಂದು ಬೇಡಿ ಹೇಳಿದ್ದಾರೆ.

ನೈಜತೆ ಮತ್ತು ಕಲ್ಪನೆಗೆ ವ್ಯತ್ಯಾಸವಿದೆ

ಈ ಸಿನಿಮಾ ನೈಜ ಘಟನೆಗಳನ್ನು ಆಧರಿಸಿ ಕಾಲ್ಪನಿಕವಾಗಿ ತಯಾರಿಸಿದ ಸಿನಿಮಾವಾಗಿದೆ. ಇದೇನು ಡಾಕ್ಯುಮೆಂಟರಿ ಅಲ್ಲ, ಮತ್ತು ಈ ಸಿನಿಮಾದಲ್ಲಿ ತೋರಿಸಿರುವುದೆಲ್ಲ ಸತ್ಯವಲ್ಲ ಎಂದು ರಾಕೇಶ್​ ಬೇಡಿ ಹೇಳಿದ್ದಾರೆ. ನಾನು ನಬೀಲ್​ ಗಬೋಲ್​ ಅವರ ಅಭಿಪ್ರಾಯವನ್ನು ಗೌರವಿಸುತ್ತೆನೆ, ಆದರೆ ನಾನು ನಿರ್ವಹಿಸಿದ ಪಾತ್ರ ಅವರದ್ದೆ ಎಂದರೆ ಅದನ್ನು ನಾನು ಒಪ್ಪುವುದಿಲ್ಲ ಎಂದು ರಾಕೇಶ್​ ಬೇಡಿ ತಿಳಿಸಿದ್ದಾರೆ.

ಧುರಂಧರ್​ 2 ಬಗ್ಗೆ

ಧುರಂಧರ್​ 2 ಇದು ಧುರಂಧರ್​ ಸಿನಿಮಾದ ಎರಡನೇ ಭಾಗವಾಗಿದೆ. ಈ ಸಿನಿಮಾವು ಕರಾಚಿಯ ಲಿಯಾರಿಗೆ ತೆರಳಿರುವ ಭಾರತದ ಗುಪ್ತಚರನ ಕುರಿತು ನಿರ್ಮಿಸಲಾಗಿರುವ ಒಂದು ಕಾಲ್ಪನಿಕ ಕಥೆಯಾಗಿದೆ. ಅದರೆ ಈ ಸಿನಿಮಾದಲ್ಲಿ ಹಲವು ನೈಜ ಘಟನೆಗಳ ಸನ್ನಿವೇಶಗಳನ್ನು ಸೇರಿಸಿಕೊಂಡಿರುವ ಕಾರಣ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಸಿನಿಮಾದಲ್ಲಿ ರಣವೀರ್ ಸಿಂಗ್​, ರಾಕೇಶ್​ ಬೇಡಿ, ಆರ್​.ಮಾಧವನ್​, ಅರ್ಜುನ್​ ರಾಂಪಾಲ್​, ಡ್ಯಾನಿಶ್​ ಇಕ್ಬಾಲ್​, ಸಾರಾ ಅರ್ಜುನ್​ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉರಿ: ದಿ ಸರ್ಜಿಕಲ್​ ಸ್ಟ್ರೈಕ್​ ಸಿನಿಮಾದ ನಿರ್ದೇಶಕ ಆದಿತ್ಯ ಧರ್​ ಈ ಸಿನಿಮಾದ ನಿರ್ದೇಶಕರಾಗಿದ್ದಾರೆ,(ಏಜನ್ಸೀಸ್​).