ಲವ್​ಸ್ಟೋರಿ ಸಿನಿಮಾದಲ್ಲಿ ಕುಮಾರ್ ಗೌರವ್ ಜೊತೆ ವಿಜಯತಾ ಪಂಡಿತ್  
ಬಾಲಿವುಡ್

ಆ ಒಬ್ಬ ನಟನಿಂದ ನನ್ನ ವೃತ್ತಿಜೀವನವೇ ಹಾಳಾಗಿ ಹೋಯ್ತು! ವಿಜಯತಾ ಪಂಡಿತ್​ ಗಂಭಿರ ಆರೋಪ..

ಪ್ರಮುಖ ಮುಖ್ಯಾಂಶಗಳು

  • ನಟ ಕುಮಾರ್ ಗೌರವ್ ಜೊತೆ ವಿಜಯತಾ ಪಂಡಿತ್ ಮೊದಲ ಸಿನಿಮಾ 'ಲವ್​ಸ್ಟೋರಿ' ಹಿಟ್​
  • ಮೊದಲ ಸಿನಿಮಾದಲ್ಲೇ ಲವ್​ ಬಿದ್ದ ಕುಮಾರ್ ಗೌರವ್ -ವಿಜಯತಾ ಪಂಡಿತ್
  • ನಟನಿಂದ ನನ್ನ ವೃತ್ತಿಜೀವನವೇ ಅಂತ್ಯವಾಯ್ತು ಎಂದು ವಿಜಯತಾ ಪಂಡಿತ್ ಆರೋಪ
ಮುಂಬೈ: ಹಣದ ಆಸೆಯಿಂದ ಬಾಲಿವುಡ್​​ನ ನಟ ಕುಮಾರ್ ಗೌರವ್ ಮತ್ತು ಅವರ ತಂದೆ ದಿವಂಗತ​ ನಟ ರಾಜೇಂದ್ರ ಕುಮಾರ್ ಸೇರಿ ನನ್ನ ಜೀವನವನ್ನೇ ಹಾಳು ಮಾಡಿದರು ಎಂದು ಬಾಲಿವುಡ್​ನ ಹಿರಿಯ ನಟಿ ವಿಜಯತಾ ಪಂಡಿತ್( Vijayata Pandit)​ ಆರೋಪಿಸಿದ್ದಾರೆ.
ಹೌದು, ವಿಜಯತಾ 1981 ರ ಲವ್ ಸ್ಟೋರಿ ಚಿತ್ರದಲ್ಲಿ ಕುಮಾರ್ ಗೌರವ್ ಅವರೊಂದಿಗೆ ನಟನೆಗೆ ಪಾದಾರ್ಪಣೆ ಮಾಡಿದರು.ಇಬ್ಬರೂ ಒಟ್ಟಿಗೆ ಕೆಲಸ ಮಾಡುವಾಗ ಪ್ರೀತಿಯಲ್ಲಿ ಬಿದ್ದರು. ಆ ಸಮಯದಲ್ಲಿ ಈ ಚಿತ್ರವು ಲವ್​ಸ್ಟೋರಿ ಚಿತ್ರ ಬ್ಲಾಕ್​ಬಸ್ಟರ್ ಆಗಿತ್ತು. ಕುಮಾರ್ ಗೌರವ್ ಮತ್ತು ವಿಜಯತಾ ಇಬ್ಬರೂ ರಾತ್ರೋರಾತ್ರಿ ಪ್ರಖ್ಯಾತಿ ಪಡೆದರು. ಆದರೆ ಕೆಲ ಕಾರಣಗಳಿಂದ ವಿಜಯತಾ ಚಿತ್ರರಂಗದಿಂದ ದೂರವಾದರು. ಇದೀಗ ಸಿನಿಮಾ ಕ್ಷೇತ್ರದಿಂದ ದೂರ ಉಳಿದ ಬಗ್ಗೆ ಇದೀಗ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

ನನ್ನ ವೃತ್ತಿ ಜೀವನವೇ ಅಂತ್ಯ ಆಯ್ತು..

ವಿಕಿ ಲಾಲ್ವಾನಿ ಅವರೊಂದಿಗಿನ ಸಂವಾದದಲ್ಲಿ ಮಾತನಾಡಿದ ವಿಜಯತಾ "ಕುಮಾರ್ ಗೌರವ್ ನನ್ನ ಜೀವನದಲ್ಲಿ ಬಂದ ನಂತರ ನನ್ನ ಜೀವನ ದುರಂತವಾಯಿತು. ನನ್ನ ಇಡೀ ಜೀವನ ಮುಗಿದುಹೋಯಿತು. ಅವರ ತಂದೆ ರಾಜೇಂದ್ರ ಕುಮಾರ್​ ನನಗೆ ಅವರೊಂದಿಗೆ(ಕುಮಾರ್ ಗೌರವ್​) ಕೆಲಸ ಮಾಡಲು ಬಿಡಲಿಲ್ಲ. ನನ್ನ ವೃತ್ತಿಜೀವನ ಮುಗಿದುಹೋಯ್ತು. ನಾನು ಅಂಗವಿಕಲ ವ್ಯಕ್ತಿಯಂತೆ ಇದ್ದೆ. ನಾನು ಏನು ಮಾಡಬಹುದಿತ್ತು? ನಾನು ಕೂಡ ಅವರನ್ನು ಪ್ರೀತಿಸುತ್ತಿದ್ದೆ ಎಂದಿದ್ದಾರೆ.
ನಾನು ಮೊದಲು ನಿನ್ನನ್ನು ಪ್ರೀತಿಸುತ್ತೇನೆ ಎಂದು ಕುಮಾರ್ ಗೌರವ್ ಹೇಳಿದನು. ನಾನು ಅವನ ಹಿಂದೆ ಹೋಗಲಿಲ್ಲ ಅವನೇ ನನ್ನನ್ನು ಭೇಟಿಯಾಗಲು ನನ್ನ ಮನೆಗೆ ಬರುತ್ತಿದ್ದನು. ಕೆಲ ದಿನಗಳ ಬಳಿಕ ನನಗೆ ಕುಟುಂಬದವನಂತೆ ಆದನು ಮತ್ತು ಅವನು ನನ್ನನ್ನು ಮದುವೆಯಾಗಲು ಬಯಸಿದನು. ಅವನು ನನಗೆ ಮದುವೆಯ ಭರವಸೆ ನೀಡಿ ನನ್ನನ್ನು ಹಲವು ವರ್ಷಗಳ ಕಾಲ ಕಾಯುವಂತೆ ಮಾಡಿ ನಂತರ ಬೇರೊಬ್ಬರನ್ನು ಮದುವೆಯಾದನು. ಅವನು ಈ ಕಠಿಣ ಹೆಜ್ಜೆಯನ್ನು ಹೇಗೆ ತೆಗೆದುಕೊಂಡನೆಂದು ನನಗೆ ತಿಳಿದಿರಲಿಲ್ಲ ಎಂದು ಹೇಳಿದರು.

ಅವರ ತಂದೆ ಅವನ ಬ್ರೈನ್ ವಾಶ್​ ಮಾಡಿದ್ದರು?

ಕುಮಾರ್​ ಗೌರವ್​ ಕುಟುಂಬ ನಮ್ಮಿಬ್ಬರ ಮದುವೆಗೆ ವಿರುದ್ಧವಾಗಿದೆ ಎಂದು ನನಗೆ ತಿಳಿದಿತ್ತು, ವಿಶೇಷವಾಗಿ ಅವರ ತಂದೆ ರಾಜೇಂದ್ರ ಕುಮಾರ್. ಅವರ ಕುಟುಂಬವು ಅವರನ್ನು ಬ್ರೈನ್ ವಾಶ್ ಮಾಡಿ ನಮ್ರತಾ ದತ್ ಅವರನ್ನು ಮದುವೆ ಮಾಡುವಂತೆ ಮಾಡಿದೆ ಎಂದು ನಾನು ಭಾವಿಸುತ್ತೇನೆ. ನನಗೆ ನಿಧಾನವಾಗಿ ಅವರು ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ನನಗೆ ಸಿಕ್ಕಿತು. ಅಲ್ಲದೆ, ನಾನು 3 ದಿನಗಳ ಹಿಂದೆ ಅವರ ಜೊತೆ ಮಾತನಾಡಿದ್ದೆ. ಅವರು 'ಐ ಲವ್ ಯೂ' ಎಂದು ಕೂಡ ನನಗೆ ಹೇಳಿದ್ದರು. ಆದರೆ ನಂತರ ಅವರು ಮದುವೆಯಾಗುತ್ತಿದ್ದಾರೆಂದು ನನಗೆ ತಿಳಿಯಿತು. ನನ್ನ ಪರಿಸ್ಥಿತಿ ಏನಾಗಬಹುದು ಎಂದು ಊಹಿಸಿ? ಅವರು ನಮ್ರತಾ ಅವರನ್ನು ಮದುವೆಯಾಗಲು ಮಾತುಕತೆ ನಡೆಸುತ್ತಿದ್ದಾರೆ ಎಂಬ ಸುಳಿವು ಕೂಡ ನೀಡಲಿಲ್ಲ ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಈ ಘಟನೆ ನನ್ನ ಕುಟುಂಬಕ್ಕೆ ಆಘಾತವಾಯ್ತು

ಈ ಘಟನೆಯಿಂದ ನನ್ನ ಕುಟುಂಬಕ್ಕೆ ದೊಡ್ಡ ಆಘಾತವಾಗಿತ್ತು. ನನ್ನ ತಾಯಿ ಆಘಾತದಿಂದ ಮೂರ್ಛೆ ಹೋದರು. ಆ ಹುಡುಗ ನನ್ನನ್ನು ನಿಯಮಿತವಾಗಿ ಮನೆಗೆ ಭೇಟಿ ನೀಡುತ್ತಿದ್ದರಿಂದ ಅವನು ನನಗೆ ಹೀಗೆ ಮಾಡಬಹುದೆಂದು ಯಾರೂ ನಂಬಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದರು. ಕುಮಾರ್ ಗೌರವ್ ಅವರ ಮದುವೆಯ ಬಗ್ಗೆ ಕೇಳಿದ ನಂತರ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದೆ. ಆದರೆ, ಅವರೊಂದಿಗೆ ಮಾತನಾಡಲು ಅವಕಾಶ ನೀಡಲಿಲ್ಲ ಎಂದು ವಿಜಯತಾ ಹೇಳಿದರು. ಬಳಿಕ ಅವರ ತಂದೆ ಕಾರಣದಿಂದ ಮತ್ತೆ ಸಿನಿಮಾ ಅವಕಾಶ ಕೂಡ ಸಿಗಲಿಲ್ಲ ಎಂದು ಆರೋಪಿಸಿದ್ದಾರೆ (ಏಜೆನ್ಸೀಸ್​).