ಬಹುಭಾಷಾ ನಟಿ ಮೃಣಾಲ್ ಠಾಕೂರ್ (ಚಿತ್ರ Instagram)
Mrunal Thakur: ಬಹುಭಾಷಾ ನಟಿ ಮೃಣಾಲ್ ಠಾಕೂರ್ ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಿಗಿಂತ ಹೆಚ್ಚಾಗಿ ತಮ್ಮ ವೈಯಕ್ತಿಕ ಜೀವನದ ಕಾರಣಕ್ಕಾಗಿಯೇ ಸುದ್ದಿಯಲ್ಲಿದ್ದಾರೆ. ಅದರಲ್ಲೂ ತಮಿಳು ಸೂಪರ್ ಸ್ಟಾರ್ ನಟ ಧನುಷ್ ಅವರೊಂದಿಗೆ ಮೃಣಾಲ್ ಮದುವೆಯಾಗಲಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುರತ್ತಿದ್ದಂತೆಯೇ ನಟಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡುವ ಮೂಲಕ ಚರ್ಚೆಗೆ ನಾಂದಿಹಾಡಿದ್ದಾರೆ.
ವೈರಲ್ ಆಗುತ್ತಿರುವುದು ಏನು?
ಕಳೆದ ಕೆಲವು ದಿನಗಳಿಂದ ತಮಿಳು ನಟ ಧನುಷ್ ಮತ್ತು ಮೃಣಾಲ್ ಠಾಕೂರ್ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ಈ ವಿಚಾರವು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿತ್ತು. ಈ ವಿಚಾರದ ಕುರಿತು ನಟಿ ಎಲ್ಲಿಯೂ ಹೇಳಿಕೆ ನೀಡದಿದ್ದರೂ, ನೆಟ್ಟಿಗರು ಮಾತ್ರ ಜೋಡಿ ಬಗ್ಗೆ ಚರ್ಚೆ ನಡೆಸುತ್ತಲೇ ಇದ್ದರು.
ವದಂತಿಗಳಿಗೆ ತೆರೆ ಎಳೆದ್ರಾ ಮೃಣಾಲ್?
ಎಲ್ಲಾ ಊಹಾಪೋಹಗಳ ನಡುವೆ ನಟಿ ಮೃಣಾಲ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಆದರೆ, ವಿಶೆಷವೆಂದರೆ, ಅವರು ತಮ್ಮ ಮದುವೆ ವದಂತಿಗಳಿಗೆ ನೇರವಾಗಿ ಪ್ರತಿಕ್ರಿಯಿಸುವ ಬದಲಿಗೆ ತಮ್ಮ ವೈಯಕ್ತಿಕ ಜೀವನ ಮತ್ತು ವೃತ್ತಿ ಜೀವನದ ಬಗ್ಗೆ ವಿಡಿಯೋ ಹಂಚಿಕೊಳ್ಳುವ ಮೂಲಕ ತಾವು ತಮ್ಮದೇ ಆದ ಲೋಕದಲ್ಲಿ ಬ್ಯುಸಿಯಾಗಿದ್ದೇನೆ ಎಂದು ಸಂದೇಶ ಸಾರಿದ್ದಾರೆ.
ವೀಡಿಯೊದಲ್ಲೇನಿದೆ?
ವೀಡಿಯೊದಲ್ಲಿ, ಮೃಣಾಲ್ ಅವರು ದೋಣಿಯಲ್ಲಿ ಕುಳಿತು ಸ್ವಲ್ಪ ಸಮಯ ಆನಂದಿಸುತ್ತಿರುವುದನ್ನು ಕಾಣಬಹುದು. ಈ ವೇಳೆ ಅವರು ವಿಹಾರವನ್ನು ಆನಂದಿಸುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅದರ ಜೊತೆಗೆ ನೆಲದ ಮೇಲೆ ಇರುವವಳು, ಹೊಳೆಯುವವಳು ಮತ್ತು ಅಲುಗಾಡದವಳು ಎಂಬ ಅರ್ಥಪೂರ್ಣ ಸಾಲುಗಳನ್ನು ಬರೆದುಕೊಂಡು ಪೊಸ್ಟ್ ಮಾಡಿದ್ದಾರೆ. ಇದು ಹೊರಗಿನ ವದಂತಿಗಳು ತನ್ನನ್ನು ಕುಗ್ಗಿಸಲು ಸಾಧ್ಯವಿಲ್ಲ ಎಂಬ ಸಂದೇಶ ನೀಡಿದೆ.
ನೆಟ್ಟಿಗರ ಪ್ರತಿಕ್ರಿಯೆ
ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆಯೇ, ಅನೇಕರು ಮದುವೆ ವಿಚಾರದ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರ ನಿಜಕ್ಕೂ ಅತ್ಯಂತ ನಿಷ್ಠಾವಂತ ಮತ್ತು ವಿನಮ್ರ ವ್ಯಕ್ತಿ ನೀವು ಎಂದು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರರು "ಮದುವೆ ಸುದ್ದಿ ನಿಜವೇ? ಎಂದು ಪ್ರಶ್ನೆ ಮಾಡಿದ್ದಾರೆ.
ಮೃಣಾಲ್ ಠಾಕೂರ್ ಅವರ ಕೆಲಸದ ಮುನ್ನೋಟ
ಕೆಲಸದಲ್ಲಿ, ಮೃಣಾಲ್ ಕೊನೆಯ ಬಾರಿಗೆ ಅಜಯ್ ದೇವಗನ್ ಜೊತೆಗೆ ಸನ್ ಆಫ್ ಸರ್ದಾರ್ 2 ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಅವರು ಮುಂಬರುವ ದಿನಗಳಲ್ಲಿ ಶನಿಲ್ ಡಿಯೋ ಅವರ ಚಿತ್ರ ಡಕೋಯಿಟ್: ಎ ಲವ್ ಸ್ಟೋರಿಯಲ್ಲಿ ಆದಿವಿ ಶೇಷ್ ಮತ್ತು ಅನುರಾಗ್ ಕಶ್ಯಪ್ ಜೊತೆಗೆ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆಕ್ಷನ್ ಥ್ರಿಲ್ಲರ್ ಮಾರ್ಚ್ 19, 2026 ರಂದು ಈದ್ ಹಬ್ಬದಂದು ತೆರೆ ಮೇಲೆ ಬರಲಿದೆ (ಏಜೆನ್ಸೀಸ್).